ಚಿತ್ರದುರ್ಗ: ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸದ ಜನಪ್ರತಿನಿಧಿಗಳು..?

Listen to this article

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದ ಉಪ್ಪಿ ಕರ್ನಾಟಕ ರಾಜ್ಯ ಕಲಾ ಸೈನ್ಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ರಂಗಭೂಮಿ ಕಲಾವಿದರು…
ಕಲಾವಿದರ ನೋವಿನ ಮನದಾಳದ ಮಾತು… ಲಾಕ್ ಡೌನ್ ಭೀತಿಯಿಂದ ಎರಡು ವರ್ಷಗಳಿಂದ ನಾಟಕ ಪ್ರದರ್ಶನ ಗಳಿಲ್ಲದೆ ಜಿಲ್ಲೆಯ ಕಲಾವಿದರು ಕಣ್ಣೀರಿನ ಕಡಲಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ…. ಕಲಾವಿದರ ಜೀವನ ಬಹಳ ಸಂಕಷ್ಟದಲ್ಲಿದೆ. ಕಳೆದ ವರ್ಷದಲ್ಲಿ ಕೋರನ ಬಂದಾಗಲೂ ಚಿತ್ರದುರ್ಗ ಜಿಲ್ಲೆಯಾದ್ಯಂತ ಕಲಾವಿದರ ಜನಪ್ರತಿನಿಧಿಗಳು ಸ್ಪಂದಿಸಿಲ್ಲ.? ಈ ವರ್ಷವೂ ಸಹ ಕೊರೋನ ಹೆಮ್ಮಾರಿಯಿಂದ ಜೀವನ ಸಾಗಿಸುವುದಕ್ಕೆ ನಮ್ಮ ಕಲಾವಿದರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ವರ್ಷದಲ್ಲಿ 4 ರಿಂದ 5 ತಿಂಗಳು ನಾಟಕ ಪ್ರದರ್ಶನಗಳಿರುತ್ತವೆ ಸರಿಯಾಗಿ ನಾಟಕಗಳು ಪ್ರಾರಂಭವಾಗುವ ತಿಂಗಳಲ್ಲಿ ಮಹಾಮಾರಿಯ ದರ್ಶನ ಆಗುತ್ತೆ. ನಾಟಕ ಪ್ರದರ್ಶನ ನಿಂತುಹೋಗುತ್ತವೆ‌. ಹೀಗಾದಾಗ ಕಲಾವಿದರು ಜೀವನ ಸಾಗಿಸುವುದು ಹೇಗೆ.? ಚಿತ್ರದುರ್ಗ ಜಿಲ್ಲೆಯಲ್ಲಿ ಕಲಾವಿದರು ಯಾರ ಬಳಿಯು ನೋವು ಹಂಚಿಕೊಳ್ಳಲಾಗದೆ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಕಲಾವಿದರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.? ನಾಟಕ ಪ್ರದರ್ಶನ ಗೊಂಡಾಗ ಜನಪ್ರತಿನಿಧಿಗಳು ವೇದಿಕೆ ಮೇಲೆ ಬಂದು ಕಲಾವಿದರ ಸಂಕಷ್ಟಗಳಿಗೆ ನಾವು ಸ್ಪಂದಿಸುತ್ತೇವೆ ಗ್ರಾಮೀಣ ಕಲೆ ಉಳಿಸಬೇಕು ಕಲೆ ನಶಿಸಿ ಹೋಗಬಾರದು ಎಂದು ಕಲಾ ಅಭಿಮಾನಿ ಗಳ ಮುಂದೆ ಹೇಳುತ್ತಾರೆ ವಿನ: ಸಂಕಷ್ಟದಲ್ಲಿ ಯಾವ ಕಲಾವಿದರಿಗೆ ಸ್ಪಂದಿಸುತ್ತಿಲ್ಲ ಯಾಕೆ.? ನಿಜವಾಗಿಯೂ ಒಂದು ಒತ್ತು ಊಟ ಮಾಡಲು ಸಹ ಕಷ್ಟ ಪಡುತ್ತಿದ್ದಾರೆ. ಎರಡು ವರ್ಷಗಳಿಂದ ನಾಟಕ ಪ್ರದರ್ಶನ ಗಳಿಲ್ಲದೆ ಜಿಲ್ಲೆಯ ಕಲಾವಿದರು ಕಣ್ಣೀರಿನ ಕಡಲಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಆಯಾ ತಾಲೂಕಿನ ಜನಪ್ರತಿನಿಧಿಗಳು ದಯಮಾಡಿ ರಂಗಭೂಮಿ ಕಲಾವಿದರ ಸಮಸ್ಯೆಗಳನ್ನು ಆಲಿಸಿ ಕಲಾವಿದರ ಸಮಸ್ಯೆಗಳನ್ನು ಬಗೆಹರಿಸಿ ಕಲಾವಿದರ ಜೀವನ ಮಾಡುವುದಕ್ಕೆ ಸಹಕರಿಸಿ ತಮ್ಮ ನೋವನ್ನು ಸಂಕ್ಷಿಪ್ತವಾಗಿ ತಮ್ಮಲ್ಲಿ ವಿನಂತಿಸುತ್ತೇವೆ……

ಬಿ.ಜಿ.ಕೆರೆ ಉಪ್ಪಿ ಕರ್ನಾಟಕ ರಾಜ್ಯ ಕಲಾ ಸೈನ್ಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ರಂಗಭೂಮಿ ಕಲಾವಿದರು..

ವರದಿ.ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend