ಅಡ್ನಾಡಿ ರೀತಿಯಲ್ಲಿ ನಡೆದ, ಹಂದಿಗುಂದ ಗ್ರಾಮದ ರಸ್ತೆ ಕಾಮಗಾರಿ ಕೆಲಸ…!!!

Listen to this article

ಬೆಳಗಾವಿ ಜಿಲ್ಲೆಯ ಹಂದಿಗುಂದ ಗ್ರಾಮದಲ್ಲಿ ನಡೆದ ರಸ್ತೆ ಕಾಮಗಾರಿಯ ಕರ್ಮಕಾಂಡ ಈ ಕಾಮಗಾರಿಯೂ ಸನ್ 2017-18 ರಲ್ಲಿ ನಬಾರ್ಡ್ ಯೋಜನೆಯ ಅಡಿಯಲ್ಲಿ ಸುಮಾರು 108 ಲಕ್ಷ ರೂಪಾಯಿಗಳಲ್ಲಿ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಿದ ಈ ಕಾಮಗಾರಿಯೂ ಯೋಜನಾ ವರದಿಯಂತೆ ಮಾಡದೆ ರಸ್ತೆ ಮಾಡಿದ್ದಾರೆ ಈ ಕಾಮಗರಿಯು ಕಳಪೆ ಮಟ್ಟದಲ್ಲಿ ಕೈಗೊಳಲಾಗಿದೆ ಈ ಕಾಮಗಾರಿ ಪೂರ್ಣಗೋಡ ಕೆಲವೇ ತಿಂಗಳುಗಳಲ್ಲಿ ರಸ್ತೆ ತೇಗ್ಗು ಗುಂಡಿಗಳ ನಿರ್ಮಾಣವಾಗತೊಡಗಿದವು ಸುಮಾರು ಒಂದು ವರ್ಷ್ ಕಳೆದ ಮೇಲೆ ರಸ್ತೆಯ ತೇಗ್ಗು ಗುಂಡಿಗಳನ್ನು ಸನ್ 2019 ರಲ್ಲಿ ಮುಚ್ಚಲಾಗಿದೆ ರಸ್ತೆಯ ನಿರ್ವಣೆ ಗುತ್ತಿಗೆದಾರ ಜವಾಬ್ದಾರಿ ಇರುತ್ತದೆ ಈ ಕಾಮಗಾರಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರಿಸಲ್ಟಿಟಿದೆ . ಈ ರಸ್ತೆ ಕಾಮಗಾರಿಯು ನೀರಾವರಿ ಇಲಾಖೆ ವತಿಯಿಂದ ನಡೆದ ಕಾಮಗಾರಿಯನ್ನು ಮರು ನಿರ್ಮಾಣ ಮಾಡುವ ಮೂಲಕ ತಮ್ಮ ಕೈಚಳಕ ತೋರಿಸುವ ಮೂಲಕ ಭ್ರಷ್ಟಾಚಾರಿಗಳು ಈ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಈ ಕಾಮಗಾರಿ ಹೆಸರುಗಳು 1)ರಾ.ತಾ.ಹಂದಿಗುಂದ ಗ್ರಾಮದ ಸಿದ್ದೇಶ್ವರ ಮಠದಿಂದ ಅಂದಾನಿ ತೋಟದವರೆಗೆ ರಸ್ತೆ ಸುಧಾರಣೆ ದಿನಾಂಕ 05/01/2020 ರಿಂದ 22/05/2021 ರವರೆಗೆ 103 ಜನರ ಮಾನವ ದಿನಗೂಲಿ ಕೆಲಸ ಮಾಡಿದ್ದಾರೆ ಎಂದು ಅಂದರೆ 103*697*275:195553 ರೂಪಾಯಿ ಖರ್ಚು ಮಾಡುವ ಮೂಲಕ ಎನ್ ಎಂ ಆರ್ ಹಾಕಿದ್ದಾರೆ 2) ರಾ.ತಾ.ಹಂದಿಗುಂದ ಗ್ರಾಮದ ರಾಮಪ್ಪ ಮುಗಳಕೋಡ್ ತೋಟದಿಂದ ಚಿಂಚಲಿ ತೋಟದವರೆಗೆ ರಸ್ತೆ ಸುಧಾರಣೆ ಇಲ್ಲಿಯು ಸಹ 22 ಜನರು ಕೆಲಸ ಮಾಡಿದ್ದಾರೆ ಎಂದು ಎನ್ ಎಂ ಆರ್ ಹಾಕಲಾಗಿದೆ 22*154:44506 ರುಪಾಯಿಗಳು ಜಮಾ ಮಾಡಲಾಗಿದೆ .ನೀರಾವರಿ ಇಲಾಖೆ ವತಿಯಿಂದ ಮಾಡಲಾದ ರಸ್ತೆಯನ್ನು ಕಾಣದ ಕೈಗಳು ನಾವು ಮಾಡಿದ್ದೇವೆ ಎಂದು ಒಂದೇ ಕಾಮಗಾರಿಗೆ 861ಮಾನವ ದಿನಗೂಲಿ ಸಂದಾಯ ಮಾಡಿದ ಮೊತ್ತ 240059 ರೂಪಾಯಿ ಎನ್ ಎಂ ಆರ್ ಮೂಲಕ ಜಮಾ ಮಾಡಿಸಿಕೊಳ್ಳುವ ಮೂಲಕ ಕಾಣದ ಕೈಗಳು ತಮ್ಮ ಕರಾಮತ್ ತೋರಿಸಿದ್ದಾರೆ ಇದರ ಹಿಂದೆ ಯಾರ ಕೈವಾಡ ಇದೆ ಮತ್ತು ಎರಡು ವರ್ಷಗಳ ಹಿಂದೆಯೇ ಈ ರಸ್ತೆ ಡಾಂಬರಿಕರಣ ಮಾಡಲಾದ ರಸ್ತೆಯ ಮೇಲೆ ಮತ್ತೇ ಸುಧಾರಣೆ ಮಾಡಬಹುದಾ ಎಂದು ಜೈ ಹೋ ಸಂಘಟನೆ ಪ್ರಧಾನ ಕಾರ್ಯದರ್ಶಿ ವಸಂತ ಅಂದಾನಿ .ಮಲ್ಲಿಕಾರ್ಜುನ ಪಾಟೀಲ್ ದಾನಪ್ಪ ಚಿಂಚಲಿ,ಷಣ್ಮುಕ್ ಸೂತಾರ್, ಮಂಜುನಾಥ ಪಾಟೀಲ, ಅಜೀತ್ ಮತ್ತು ಸ್ಥಳೀಯರು ಆರೋಪಿಸಿದ್ದಾರೆ..

ವರದಿ. ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend