ಬಾಬಾ ರಾಮದೇವರ ಅವೈಜ್ಞಾನಿಕ ಮತ್ತು ಮೂಢನಂಬಿಕೆ,ಹೇಳಿಕೆಗಳನ್ನು ಖಂಡಿಸಿ ಎಐಡಿಎಸ್ಒ,ವತಿಯಿಂದಅಖಿಲ ಭಾರತ ಪ್ರತಿಭಟನಾ ದಿನ…!!!

Listen to this article

ಬಾಬಾ ರಾಮದೇವರ ಅವೈಜ್ಞಾನಿಕ ಮತ್ತು ಮೂಢನಂಬಿಕೆ,ಹೇಳಿಕೆಗಳನ್ನು ಖಂಡಿಸಿ
ಎಐಡಿಎಸ್ಒ,ವತಿಯಿಂದಅಖಿಲ ಭಾರತ ಪ್ರತಿಭಟನಾ ದಿನ.
ಬಳ್ಳಾರಿ. ಗಣಿ ನಗರಿ ಬಳ್ಳಾರಿಯಲ್ಲಿ ಇಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಕೋವಿಡ್-19 ವಾರಿಯರ್ಸ್ ಗಳ ಮೇಲಿನ ದಾಳಿಯ ವಿರುದ್ಧ ಹಾಗೂ ಬಾಬಾರಾಮದೇವ್ ಅವರ ಅವೈಜ್ಞಾನಿಕ ಮತ್ತು ಮೂಢನಂಬಿಕೆ ಹೇಳಿಕೆಗಳನ್ನು ಖಂಡಿಸಿ
ಎಐಡಿಎಸ್ಓ ಅಖಿಲ ಭಾರತ ಪ್ರತಿಭಟನಾ ದಿನ.
ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಇತ್ತೀಚಿನ ದಿನಗಳಲ್ಲಿ ಕೋಮಿಡಿ ಯೋಧರ ಮೇಲೆ ನಡೆದ ಹಲ್ಲೆ ಮತ್ತು ರಾಮದೇವರ ಅವೈಜ್ಞಾನಿಕ ಮೂಢನಂಬಿಕೆ ಮತ್ತು ಸುಳ್ಳು ಹೇಳಿಕೆಗಳನ್ನು ವಿದ್ಯಾರ್ಥಿ ಸಂಘಟನೆಯ ರಾಜ್ಯ ಕಾರ್ಯದರ್ಶಿಗಳಾದ ಅಜಯ್ ಕಾಮತ್ ಅವರು ಖಂಡಿಸಿದ್ದಾರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಅನೇಕ ವೈಜ್ಞಾನಿಕ ಔಷಧಿ ಮತ್ತು
ಕೋವಿಡ್ 19 ರ ಚಿಕಿತ್ಸೆಯ ಕುರಿತು ಪ್ರಸಾರ ಮಾಡಲು ಕಾರಣವಾಗಿದೆ.
ಕೋ ವಿಡಿಯೋ ದರು ಹಗಲು-ರಾತ್ರಿಯೆನ್ನದೆ ದಣಿವಿಲ್ಲದೆ ಕೆಲಸ ಮಾಡುತ್ತಿದ್ದಾರೆ ಪ್ರಸ್ತುತ ಕಷ್ಟಕರ ಸಾಂಕ್ರಾಮಿಕ ಕಾಲದಲ್ಲಿ ಇಂತಹ ಅವೈಜ್ಞಾನಿಕ ಹೇಳಿಕೆಗಳು
ಆಧುನಿಕ ಔಷಧಿ ವೈದ್ಯರ ಬಗ್ಗೆ ಅವಹೇಳನಕಾರಿ ಯ ಲ್ಲದೆ ಬೇರೇನೂ ಅಲ್ಲ.
ಕೋವಿಡ್ 19 ನ ವೈಜ್ಞಾನಿಕ ಚಿಕಿತ್ಸೆಗೆ ಇಂತಹ ಬೆಳವಣಿಗೆಗಳು ಹಾನಿಕಾರಕ. ಸಾಮಾನ್ಯ ಪ್ರಜ್ಞೆ ಇರುವ ಜನರು ಮತ್ತು ಆರೋಗ್ಯ ಕಾರ್ಯಕರ್ತರು
ಇಂತಹ ಬೆಳವಣಿಗೆಗಳ ಬಗ್ಗೆ ಚಿಂತಿತರಾಗಿದ್ದಾರೆ.
ರಾಮದೇವ್ ಅವರ ಹಿಂದೆ ಸರ್ಕಾರವೇ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿದೆ.
ಮತ್ತು ಆದ್ದರಿಂದಲೇ ಅವರ ವಿರುದ್ಧ ಈವರೆಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ.
ಇದರ ಫಲವಾಗಿ ರಾಮದೇವರ ದುರಹಂಕಾರವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರ್ಕಾರ ಅಲ್ಲ ಅವರಪ್ಪನಿಂದಲೂ ರಾಮದೇವ್ ನನ್ನು ಬಂಧಿಸಲು ಸಾಧ್ಯವಿಲ್ಲ. ಎಂದು ರಾಮದೇವ ಪ್ರತಿಕ್ರಿಯಿಸಿದ್ದಾರೆ.
ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಅಸ್ಸಾಂ ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿಯೂ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಕಿರುಕುಳ ನಡೆಸಲಾಗುತ್ತಿದೆ. ಆಧುನಿಕ ಔಷಧಿ ಮತ್ತು ವೈದ್ಯಕೀಯ ವೈದ್ಯರ ವಿರುದ್ಧ ನಿರಂತರ ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆಗಳು ಮತ್ತು ಅಪಪ್ರಚಾರವೂ ಆರೋಗ್ಯ ಸಿಬ್ಬಂದಿಗೆ ಕೆಲಸ ಮಾಡಲು ಪ್ರತಿಕೂಲ ವಾತಾವರಣವನ್ನು ಸೃಷ್ಟಿಸಿದೆ ಈ ಹಿನ್ನೆಲೆಯಲ್ಲಿ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಭದ್ರತೆಯನ್ನು ಸರ್ಕಾರ ಖಾತ್ರಿಪಡಿಸಬೇಕು ಇದಲ್ಲದೆ ಎಲ್ಲಾ ಹಂತದಲ್ಲೂ ಆರೋಗ್ಯ ಸೌಲಭ್ಯಗಳ ಮೂಲಸೌಕರ್ಯವನ್ನು ಸಮರ್ಪಕವಾಗಿ ಸುಧಾರಿಸಬೇಕು.
ರಾಮದೇವ್ ಅವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಂಡು ಕೋವಿಡ್ ಯೋ ಧರಿಗೆ ಸೂಕ್ತ ಭದ್ರತೆಯನ್ನು ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದರು.
ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು 2021 ರ
ಜೂನ್ 9ರಂದು ಅಖಿಲ ಭಾರತ ಪ್ರತಿಭಟನಾ ದಿನಕ್ಕೆ ಕರೆ ನೀಡಿತ್ತು ಹಾಗೆಯೇ ಈ ಮೇಲಿನ ವಿಷಯಗಳ ವಿರುದ್ಧ ಪ್ರಧಾನಮಂತ್ರಿಯವರು ಅವರಿಗೆ ಆನ್ಲೈನ್ ಮುಖಾಂತರ ಸಹಿಸಂಗ್ರಹ ಅರ್ಜಿ ಸಲ್ಲಿಸಲು ಎಐಡಿಎಸ್ಓ ತೀರ್ಮಾನಿಸಿದೆ.
ಪ್ರತಿಭಟನಾ ದಿನಕ್ಕೆ ಅಭೂತಪೂರ್ವ ಪ್ರತಿ ಕ್ರಿಯೆ
ವ್ಯಕ್ತವಾಗಿದ್ದು, ದೇಶಾದ್ಯಂತ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು
ಹಾಗೂ ರಾಜ್ಯದ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು
ವೈದ್ಯರು ಹಾಗೂ ವಿದ್ಯಾರ್ಥಿ ಸಮುದಾಯ ಸಕ್ರಿಯವಾಗಿ ಹೋರಾಟದಲ್ಲಿ ಭಾಗಿಯಾದರು ಎಂದು ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಗುರಳ್ಳಿ ರಾಜ,
ಜಿಲ್ಲಾ ಕಾರ್ಯದರ್ಶಿ ಜೆಪಿ ರವಿಕಿರಣ್, ಅವರು ಹೇಳಿದರು.
ವೀರಣ್ಣ ಜಿಲ್ಲಾ ಸೆಕ್ರೆಟ್ರಿಯಟ್ ಸದಸ್ಯರು
ಎಐಡಿಎಸ್ಓ ಬಳ್ಳಾರಿ.


*ವರದಿಗಾರರು*ಎಂ.ಎಲ್. ವೆಂಕಟೇಶ್*ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend