ಕೇಂದ್ರ ಸರ್ಕಾರ ಒಂದೇ ತಿಂಗಳಲ್ಲಿ 18 ಬಾರಿ ದರ ಏರಿಸುವ ಮೂಲಕಬಡವರ ಹಣ ಲೂಟಿ ಮಾಡಿ ಶ್ರೀಮಂತರ ಖಜಾನೆತುಂಬಿಸುತ್ತಿದ್ದಾರೆ.!!

Listen to this article

ಚಿತ್ರದುರ್ಗ: ನಾಯಕನಹಟ್ಟಿ / ಕೇಂದ್ರ ಸರ್ಕಾರ ಚಿನ್ನದರಸ್ತೆಗಳನ್ನು ಮಾಡಿಸುತ್ತೇವೆ. ಪೆಟ್ರೋಲ್, ಡಿಸೇಲ್ಬೆಲೆಯನ್ನು ಕಡಿಮೆ ಮಾಡುತ್ತೇವೆ ಎಂದು ಅಧಿಕಾರಕ್ಕೆಬಂದ ಬಿಜೆಪಿ ಒಂದೇ ತಿಂಗಳಲ್ಲಿ 18 ಬಾರಿ ದರ ಏರಿಸುವ ಮೂಲಕ ಬಡವರ ಹಣ ಲೂಟಿ ಮಾಡಿ ಶ್ರೀಮಂತರ ಖಜಾನೆ ತುಂಬಿಸುತ್ತಿದ್ದಾರೆ. ಎಂದು ಕಾಂಗ್ರೆಸ್ ಮುಖಂಡರಾದ ಮಧು ಪ್ರತಿವಾದಿಸಿದರು. ನಾಯಕನಹಟ್ಟಿ ಸಮೀಪದ ತೊರೆಕೊಲಮ್ಮನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಿದೆ. ಇಂತಹ ಸಂದರ್ಭಗಳಲ್ಲಿ ಇಂಧನ ಬೆಲೆ ಹೆಚ್ಚಿಸಿ ದೇಶದ ಬಡಜನರ ಮೇಲೆ ಹಾಕುತ್ತಿದ್ದಾರೆ.ದೇಶದಲ್ಲಿ ಕಾಂಗ್ರೆಸ್ ಪಕ್ಷ ಬಡವರ ಪರವಾಗಿ ಸಂಸತ್ತಿನ ಒಳಗೆ, ಹೊರಗೆ ರಾಹುಲ್ ಗಾಂಧಿನಾಯಕತ್ವದಲ್ಲಿ ಹೋರಾಟವನ್ನು ಮಾಡುತ್ತಲಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ವಿದೇಶಕ್ಕೆಅನಿವಾರ್ಯ ಅನ್ನುವಂತ ಪರಿಸ್ಥಿತಿ ಬರಲಿದೆ. ಕಾಂಗ್ರೆಸ್ ಮಾತ್ರ ಬಡವರ, ರೈತರ, ಗ್ರಾಮೀಣ ಜನರಪರವಾದ ಪಕ್ಷ ಆ ಕಾರಣಕ್ಕಾಗಿ ಇವತ್ತು ಬಡವರ ಪರವಾದಧ್ವನಿಗೆ ಶಕ್ತಿ ತುಂಬಲು ನೀವೆಲ್ಲರೂ ಸಹಕಾರ ನೀಡಬೇಕುಎಂದು ಮನವಿ ಮಾಡಿಕೊಂಡರು. ಕೇಂದ್ರ ಸರ್ಕಾರ ತನ್ನ ಆಧಾಯ ಹೆಚ್ಚಿಸಿಕೊಳ್ಳಲು ಜನರು ಬಳಸುವ ದೈನಂದಿನ ಪದಾರ್ಥಗಳ ಬೆಲೆಯನ್ನು ಹೆಚ್ಚಿಸುತ್ತ ಜನರ ರಕ್ತ ಹಿರುವ ಕೃತ್ಯಕ್ಕೆ ಮುಂದಾಗಿದೆಎಂದು ದೂರಿದರು. ಈಡಿ ದೇಶಾದ್ಯಂತ ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚತೈಲದ ಬೆಲೆ ಹೆಚ್ಚಾಗಿರುವಕಾರಣ ಇಂಧನ ಬೆಲೆಏರಿಕೆಯಾಗುತ್ತಿದೆ. ಎಂಬ ಸಮರ್ಥನೆ ಅತ್ಯಂತ ಖಂಡನೀಯದೇಶದ ಸ್ವತಂತ್ರಕ್ಕಾಗಿ ಪ್ರಾಣ ಕೊಟ್ಟು ಜನ ಸಾಮಾನ್ಯರಬದುಕು ಹಸನಗೊಳಿಸಿದಂತಹ ಕಾಂಗ್ರೆಸ್ ಪಕ್ಷದ ಸರ್ಕಾರಇಂತಹ ಹೀನ ಕೃತ್ಯಗಳಿಗೆ ಕೈ ಹಾಕಿರಲಿಲ್ಲ ಎಂದರುಕೋವಿಡ್ ನಿರ್ವಾಹಣೆಯಲ್ಲಿ ಭಾರತದಲ್ಲಿ ನಾಯಕತ್ವದ
ಬಿಕ್ಕಟ್ಟು, ಮತ್ತು ಪ್ರಧಾನ ಮಂತ್ರಿಯ ಆಡಳಿತದಅಸಮಥ್ರ್ಯವನ್ನು ಹಿಡಿ ಜಗತ್ತು ಕಂಡಿದೆ. ಆರೋಗ್ಯ ತಜ್ಞರು ಕೋರೋನ ಎಚ್ಚರಿಕೆಯ ಸಂದೇಶ ನೀಡಿದ್ದರು ಸಹವರದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಲಕ್ಷಾಂತರ ಜನರಸಾವಿಗೆ ಕಾರಣವಾಗಿದೆ. ಮರಣ ಹೋಮದ ಮೂಲಕ ಶೋಷಣೆ ಶೃಂಗಾರವನ್ನು ಸೃಷ್ಠಿಸಿದಂತಹ ಏಕೈಕ ಸರ್ಕಾರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿರುದ್ದ ಕಿಡಿಕಾರಿದರು. ಕಳೆದ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ 23 ಸಾವಿರ ಕೋಟಿ ರೈತರ ಸಾಲ ಮತ್ತು ಬಡ್ಡಿ ಮನ್ನಮಾಡಲಾಗಿದೆ. ಆದರೆ ಈಗಿನಸರ್ಕಾರ ರೈತರ ಮತ್ತು ಕಾರ್ಮಿಕರಿಗೆ ಯಾವುದೇ ರೀತಿಯಸಹಾಯ ಮಾಡಿಲ್ಲ. ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend