ನಾಣ್ಯಪುರ ಶಾಲಾವದಿಗೆ ಬಸ್ ಸಂಪರ್ಕ ಕಲ್ಪಿಸಿ, ಗ್ರಾಮಸ್ಥರಿಂದ ಮನವಿ…

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ನಾಣ್ಯಾಪುರ:ಶಾಲಾವಧಿಗೆ ಬಸ್ ಸಂಪರ್ಕ ಕಲ್ಪಿಸಿ-ಗ್ರಾಮಸ್ಥರಿದ ಮನವಿ*<>ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಾಪುರ ಗ್ರಾಮದಿಂದ,ಕೂಡ್ಲಿಗಿ ಪಟ್ಟಣಕ್ಕೆ ಮತ್ತು ಹಗರಿಬೊಮ್ಮನಹಳ್ಳಿ ಮಾರ್ಗಕ್ಕೆ.ವಿದ್ಯಾರ್ಥಿಗಳ ಶಾಲಾ-ಕಾಲೇಜು ವೇಳೆಗೆ ಬಸ್ ಸಂಪರ್ಕವನ್ನು ಸಮರ್ಪಕವಾಗಿ ಕಲ್ಪಿಸಿ ಎಂದು,ಕೂಡ್ಲಿಗಿ ಎನ್.ಈ.ಕೆ.ಎಸ್.ಆರ್ಟಿಸಿ ವ್ಯವಸ್ಥಾಪಕರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.ವಂದೇ ಮಾತರಂ ಜಾಗೃತಿ ವೇದಿಕೆ ನೇತೃತ್ವದಲ್ಲಿ ಮನವಿ ಮಾಡಲಾಗಿದೆ.
ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಮಾತನಾಡಿ,ನಾಣ್ಯಾಪುರ ಗ್ರಾಮದಿಂದ ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿಗೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಿತ್ಯ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ.ಹಾಗೂ ನಿತ್ಯ ನೂರಾರು ಗ್ರಾಮಸ್ಥರು ನಾನಾ ಕಾರಣಗಳಿಗೆ, ಎರೆಡೂ ಪಟ್ಟಣಗಳಿಗೆ ಪಟ್ಟಣದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಕಾರಣ ಕೂಡ್ಲಿಗಿ ನಾಣ್ಯಾಪುರ ಹಗರಿಬೊಮ್ಮನಹಳ್ಳಿ ಮಾರ್ಗದ ಬಸ್ ನಿಂದ, ಎಲ್ಲಾ ವಿದ್ಯಾರ್ಥಿಗಳಿಗೆ ಎಲ್ಲಾ ಗ್ರಾಮಸ್ಥರಿಗೂ ತುಂಬಾ ಅನುಕೂಲವಾಗಲಿದೆ.
ಕೋವಿಡ್ ಲಾಕ್ ಡೌನ್ ಗೂ ಮುನ್ನ ಸಂಚರಿಸುತ್ತಿದ್ದ ಬಸ್ ನ್ನು,ಈಗ್ಗೆ ಸ್ಥಗಿತಗೊಳಿಸಿದ್ದು ಅದನ್ನ ಮತ್ತೆ ಪುನಃ ಆರಂಭಿಸಬೇಕೆಂದರು.
ಮಾರ್ಗದಲ್ಲಿ ಬರುವ ಎಲ್ಲಾ ಗ್ರಾಮಗಳ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ,ಹಾಗೂ ಸಂಸ್ಥೆಯ ಆರ್ಥಿಕ ಲಾಭಾಂಶದ ದೃಷ್ಠಿಯಂದಲೂ ಈ ಮಾರ್ಗ ಆರಂಭಿಸಬೇಕೆಂದರು.
ವಂದೇ ಮಾತರಂ ಜಾಗೃತಿ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು,ಡಿಪೋ ಸಾರಿಗೆ ಅಧಿಕಾರಿ ಉಮ‍ ಮಹೇಶರಿಗೆ ಮನವಿ ಪತ್ರ ನೀಡಿದರು.ಈ ಸಂದರ್ಭದಲ್ಲಿ ನಾಣ್ಯಾಪುರ ಗ್ರಾಮದ ಯುವ ಮುಖಂಡ ದಿಬ್ಬದಳ್ಳಿ ಮಲ್ಲಪ್ಪ,ವಂದೇ ಮಾತರಂ ಜಾಗೃತಿ ವೇದಿಕೆ ಜೂಗುಲರ ಸೊಲ್ಲೇಶ,ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು,ಮುಂತಾದವರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend