ಸೂರ್ಯಕಲಾ ಮತ್ತು ಸೇವಾ ಬಳಗದಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ…!!!

Listen to this article

ವರದಿ.ಮಂಜುನಾಥ್, ಕಾಳಪುರ

ಸೂರ್ಯಕಲಾ ಮತ್ತು ಸೇವಾ ಬಳಗದಿಂದ ಆಯೋಜಿಸಿದ್ದ *ಸಾಧಕರಿಗೆ ಸನ್ಮಾನ* ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ *ಪ್ರತಿಷ್ಟಿತ NSG* ಕಮಾಂಡೋ ಆಗಿ ಬಳ್ಳಾರಿ ಜಿಲ್ಲೆಯ ಪ್ರಪ್ರಥಮ ಕಮಾಂಡರ್ ಆಗಿ ಆಯ್ಕೆಯಾದ *ಅಮೀನುದ್ದೀನ್ ಬಾಷಾ* ಅವರಿಗೆ ಮತ್ತು ಇನ್ನೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೇನೆಯ *ಶೇಖ್ ಮಸ್ತಾನ ವಲಿ* ಅವರಿಗೆ ಹಾಗು ನಿವೃತ್ತಿ ಸೈನಿಕರಾದ *ಅಮರ್ ನಾಥ್* ಮತ್ತು *ನಾಗರಾಜ್* ರವರಿಗೆ ಘನ ಗೌರವಗಳೊಂದಿಗೆ ಸನ್ಮಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು…

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ *ಸೈದುಲು ಅದಾವತ್* ಸಾರ ಅವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು…… ಮತ್ತು

ಈ ಕಾರ್ಯಕ್ರಮಕ್ಕೆ ಮುಖ್ಯ ಆಕರ್ಷಣೆಯಾಗಿ

ಹಿಂದೂ ಸಮುದಾಯಕ್ಕೆ ಸೇರಿದ ಶ್ರೀ ಶ್ರೀ ಶ್ರೀ *ಕಲ್ಯಾಣ ಸ್ವಾಮೀಜಿ* ಅವರು ಮತ್ತು ಮುಸ್ಲಿಂ ಸಮುದಾಯದ *ಜನಾಭ ಸೈಯದ್ ರುತರ * ರವರು ಕ್ರಿಶ್ಚಿಯನ್ ಸಮುದಾಯದ ಚರ್ಚ್‌ನ ಫಾದರ್ *ಐವನ್ ಪಿಂಟೊ* ಅವರು ಪಾಲ್ಗೊಂಡು ದೇಶದ ಸಮಾನತೆ ,ಸಹೋದರತೆ ಭಾತೃತ್ವನ್ನು ಮೂಡಿಸಿದರಲ್ಲದೆ ದೇಶಕ್ಕೆ ಸೇವೆ ಸಲ್ಲಿಸಿದ ಇಂಥಹ ಮಹಾನ್ ವ್ಯಕ್ತಿಗಳಿಗೆ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿ ಆಶೀರ್ವಾದಗಳನ್ನು ನೀಡಿ ಶುಭ ಹಾರೈಸಿದರು…..ಇನ್ನು ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ

ಎಪಿಎಂಸಿಯ ಉದ್ಯಮಿಗಳಾದ *ಸುರೇಂದ್ರ ಶೇಟ್* ಅವರು ಸೋಮೇಶ್ವರ ಬಸ್ ಮಾಲೀಕರಾದ *ಬಿ.ಎಂ.ಬಸವರಾಜ್* ರವರು ಅಲ್ಪಸಂಖ್ಯಾತರ ಇಲಾಖೆಯ ಮುಖ್ಯಸ್ಥರಾದ *ಮೆಹಬೂಬ್ ಬಾಷಾ* ಸಾರ್ ಅವರು ಕೂಡ್ಲಿಗಿ ಕ್ಷೇತ್ರದ ಕಾರ್ಪೊರೇಟರ್ ಗಳಾದ *ಸೈಯದ್ ಶುಕೂರ್ ಮತ್ತು ಚಂದ್ರು* ಅವರು ಹಿರಿಯ ಮುಖಂಡರಾದ, *ಅಸುಂಡಿ ನಾಗರಾಜ್, ಕಣೇಕಲ್ ಮಾಬುಸಾಬ್ ಅವರು ರೆಡ್ ಕ್ರಾಸ್ ಸಂಸ್ಥೆಯ ಶಮಿ ಮೇಡಂ* ಅವರು,

ಆತ್ಮೀಯರಾದ *ಜಿರಾಲ್ಡ್ ಅವರು ಬಂಡಿಮೋಟ್ ಪ್ರದೇಶದ *ಫಾರುಖ್ ಅವರು, *ಕಾಕರ್ಲ ರವೀಂದ್ರ ಮತ್ತು ನೂರ್ ಮಹಮ್ಮದ್ ,ಪ್ರಸಾದ್, ತಿಮ್ಮಪ್ಪ, ಸೋಮು, ರಮೇಶ್, ಹುಲುಗಪ್ಪ*,ಆತ್ಮೀಯರು ಸ್ನೇಹಿತರು ಮತ್ತು ಸ್ಥಳೀಯ ಭಾಗದ ಎಲ್ಲಾ ಸಾರ್ವಜನಿಕರು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು….

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗಳಾದ *ಸೈದುಲು ಅಡಾವತ ಅವರು ಮಾತನಾಡುತ್ತಾ ದೇಶದ ಭದ್ರತೆ ವಿಷಯದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಸೇವೆ ಸಲ್ಲಿಸುತ್ತಿರುವ ನಮ್ಮ ಬಳ್ಳಾರಿ ಜಿಲ್ಲೆಗೆ ಸೇರಿದ ಮೊಟ್ಟಮೊದಲ ಕಮಾಂಡರ್ ಅಮಿರುದ್ದೀನ್ ಭಾಷ*ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ಕೀರ್ತಿ ಸಾಧನೆಗಳನ್ನು ಮಾಡಲಿ ಎಂದು ಆಶಿಸುತ್ತಾ ಶುಭ ಹಾರೈಸಿದರು*…

*ಹಾಗೆ ಸಮಾನತೆ, ಸಹೋದರತೆ ಭಾವನೆಗಳನ್ನು ಮೂಡಿಸುತ್ತಿರುವ ಇಂಥಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಸೂರ್ಯಕಲಾ ಮತ್ತು ಸೇವಾ ಬಳಗದ ಅಲಿವೇಲು ಸುರೇಶ್ ಮತ್ತು ತಂಡದವರಿಗೆ ಅಭಿನ೦ದನೆ ತಿಳಿಸುತ್ತಾ ಮುಂದಿನ ದಿನಗಳಲ್ಲಿ ಹೆಚ್ಚಿನದಾಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಮಾಡಲಿಯೆಂದು ತಮ್ಮ ಅನಿಸಿಕೆಗಳನ್ನು ಹೇಳಿ ಅಭಿನಂದಿಸಿದರು*……

ಕೊನೆಯಲ್ಲಿ ಕಮಾಂಡರ್ ಅಮೀನುದ್ದೀನ ಬಾಷಾ ಅವರು ಮಾತನಾಡುತ್ತ ತಮ್ಮ ಅನುಭವ ಮತ್ತು ಕೊಡುಗೆಯನ್ನು ಜನರಿಗೆ ವಿವರಿಸಿ ದೇಶ ದ ಬಗ್ಗೆ ಗೌರವ ಮತ್ತು ಪ್ರತಿಷ್ಠೆ ಗಳನ್ನು ಸಾರ್ವಜನಿಕರಲ್ಲಿ ಹುರಿದುಂಬಿಸುತ್ತಾ ಪ್ರೀತಿ ಪಾತ್ರರಾದವರು…..ಹಾಗೆ ಗೌರವವನ್ನು ಸಲ್ಲಿಸಿದ ಅಲವೇಲು ಸುರೇಶ್ ಮತ್ತು ಬಳಗದವರಿಗೆ ಧನ್ಯವಾದ ತಿಳಿಸಿ ಕೊನೆಯಲ್ಲಿ ವಂದಿಸಿದರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend