ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ…!!!

Listen to this article

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ

ನಮಗೆಲ್ಲರಿಗೂ ತಿಳಿದಿರುವ ಹಾಗೆ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶಾಲಾ, ಕಾಲೇಜುಗಳಲ್ಲಿ & ಅನೇಕ ಇಲಾಖೆಗಳಲ್ಲಿ ಹಾಗೂ ಸಂಘ -ಸಂಸ್ಥೆಗಳಲ್ಲಿ ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವುದರಿಂದ ಜನರಿಗೆ ಪರಿಸರದ ಕಾಳಜಿ ಜೊತೆಗೆ ಅವರಿಗೆ ಪರಿಸರದ ಮಹತ್ವ ಸಾರುವ ಹಾಗೂ ಜನರಲ್ಲಿ ಜಾಗೃತಿಗೊಳಿಸುವ ಉದ್ದೇಶದಿಂದ ಇದನ್ನು 1974 ರಲ್ಲಿ ವಿಶ್ವಸಂಸ್ಥೆಯು ಸ್ಥಾಪಿಸಿತು.

ನಮ್ಮ ಪೂರ್ವಜರು ಪ್ರಕೃತಿಯ ಜೊತೆಗೆ ಬದುಕಿದವರು, ವಿದ್ಯೆಯಲ್ಲಿ ಹಿಂದಿದ್ದರೂ ಪರಿಸರದ ಬಗ್ಗೆ ಕಾಳಜಿ ಹೊಂದಿದ್ದರು ಆದರೆ ನಾಗರೀಕತೆ ಬೆಳದಂತೆ ಇಂದಿನ ದಿನಮಾನದಲ್ಲಿ ಪ್ರಕೃತಿಯ ಹೋಮವೇ ನೆಡೆಯುತ್ತಿದೆ. ಪರಿಸರದ ಕಾಳಜಿ ಯಾರಿಗೂ ಇಲ್ಲದಂತಾಗುತ್ತದೆ. ಪ್ರತಿವರ್ಷ ಜೂನ್ 5 ರಂದು ನಾವೆಷ್ಟು ಪರಿಸರವನ್ನು ಹಾಳುಮಾಡಿದ್ದೇವೆ ಎಂಬುವುದು ಲೆಕ್ಕ ಹಾಕುವಂತಾಗಿದೆ.ಪ್ರಸ್ತುತ ಜಗತ್ತಿನಲ್ಲಿ
ವಿಶ್ವ ಪರಿಸರ ದಿನವನ್ನು ಏಕೆ ಆಚರಿಸಲಾಗುತ್ತದೆ?ಎಂಬುವ ಪ್ರಶ್ನೆ ಎಲ್ಲರಲ್ಲೂ ಸಮಾನ್ಯವಾಗಿ ಮೂಡಿಬಂದಿರುವುದಾಗಿದೆ. ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯವಾದ ಕೊಡುಗೆಯನ್ನು ಈ ಪ್ರಕೃತಿ ಕೊಟ್ಟಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಗಿಡ – ಮರಗಳು, ಕಾಡುಗಳು, ಸಾಗರಗಳು ಮುಂತಾದವುಗಳು ಎಂದೆಂದಿಗೂ ಉಳಿಯುವುದು ಬಹಳ ಮುಖ್ಯ. ನಾವು ಅವಲಂಬಿತಾರಾಗಿರುವ ಈ ಪರಿಸರ ಯುಗ-ಯುಗಗಳವರೆಗೂ ಹೀಗೆಯೇ ಉಳಿಯಬೇಕಿದೆ. ಪರಿಸರವನ್ನು ಈಗಿನ ಕಾಲದಲ್ಲಿ ಉಳಿಸಿಕೊಂಡು ಹೋಗುವುದು ಕಷ್ಟವಾಗಿದೆ. ಅದು ಹೇಗೆ ಎಂದರೆ ನಾವು ಮಾಡುತ್ತಿರುವ ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕರಣ ಇವುಗಳೆಲ್ಲವೂ ಸೇರಿದಂತೆ ಮಾನವನ ಮೂರ್ಖ ಪ್ರಯತ್ನದಿಂದ ಹಲವಾರು ಚಟುವಟಿಕೆಗಳಿಂದ ಇಂದು ಪರಿಸರಕ್ಕೆ ಧಕ್ಕೆಯನ್ನು ಉಂಟುಮಾಡಿದೆ.ಮಾನವನ ಚಟುವಟಿಕೆಗಳಿಂದ ಪರಿಸರಕ್ಕೆ ಹಾನಿಯಾಗದಂತೆ ಮಾಡಲು ಜಗತ್ತಿನ ಎಲ್ಲಾ ದೇಶಗಳಲ್ಲಿ ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ.

ಭೂಮಿ ಎಂಬ ಈ ಗೃಹದಲ್ಲಿ ನಾವು ಬದುಕಲು ನಮಗೆ ಸಹಾಯ ಮಾಡುವ ಮೂಲಕ ಪರಿಸರ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರಕೃತಿ ಮಾತೆಯು ನಮಗೆ ಈ ಸುಂದರವಾದ ವಾತಾವರಣವನ್ನು ನಮಗೆ ನೀಡಿದ್ದು ಇದು ನಮ್ಮ ಜೀವನವನ್ನು ಸುಸ್ಥಿರಗೊಳಿಸುತ್ತದೆ. ಪರಿಸರವಿಲ್ಲದೆ ಈ ಭೂಮಿ ಮೇಲೆ ಯಾವ ಜೀವಿಯೂ ಬದುಕುಳಿಯಲು ಅಸಾಧ್ಯವಾಗಿದೆ. ಈ ಭೂಮಿಯ ಮೇಲೆ ಅದೆಷ್ಟೋ ಮಾನವ ನಿರ್ಮಿತ ಚಟುವಟಿಕೆಗಳು ನೆಡೆಯುತ್ತಿರುವುದು ಪ್ರಕೃತಿಯ ಅಸಮತೋಲನಕ್ಕೆ ಕಾರಣವಾಗುತ್ತದೆ ಮತ್ತು ಅದು ಇಡಿ ಪರಿಸರದಲ್ಲಿ ಮತ್ತಷ್ಟು ಗೊಂದಲವನ್ನು ಉಂಟುಮಾಡುತ್ತಿದೆ. ಆದುದ್ದರಿಂದ ಪರಿಸರದ ಬಗ್ಗೆ ಕಾಳಜಿವಹಿಸುವುದು ಮತ್ತು ಅಗತ್ಯಕ್ಕೆತಕಂತೆ ಸರಳವಾಗಿ ಜೀವಿಸುವುದು ಕೂಡ ಅವಶ್ಯಕವಾಗಿದೆ. ಈ ಗೃಹದಲ್ಲಿ ಎಲ್ಲಾ ಪರಿಸರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ನಾವಿರುವ ಭೂಮಿಯನ್ನು ನಿಜವಾಗಿಯೂ ಸುಂದರವಾಗಿಸಲು ಸಹಾಯ ಮಾಡುವ ಕ್ರಮಗಳನ್ನು ನಿರ್ವಹಿಸಲು ವಿವಿಧ ಯೋಜನೆಗಳು ಹಾಗೂ ಕಾರ್ಯಸೂಚಿಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ವಿಶ್ವಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಪ್ರಾಥಮಿಕ ಉದ್ದೇಶವೆಂದರೆ ಜಗತ್ತಿನ ಎಲ್ಲಾ ಜನರನ್ನು ಒಗ್ಗೂಡಿಸುವುದು ಮತ್ತು ಪರಿಸರ ಶೋಷಣೆಯಿಂದಾಗಿ ನಾವು ಎದುರಿಸುತ್ತಿರುವ ಹವಮಾನ ಬದಲಾವಣೆಗಳ ಬಗ್ಗೆ ಅರಿವು ಮೂಡಿಸುವುದು, ಪರಿಸರ ಸಂರಕ್ಷಣೆಗೆ ಯುವಕರನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ವಿಶ್ವ ಪರಿಸರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಡುತ್ತದೆ ವಿವಿಧ ಪರಿಸರ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಉತ್ತಮ ಭವಿಷ್ಯಕ್ಕಾಗಿ ನಮ್ಮ ಪರಿಸರವನ್ನು ನಾವು ಎದುರಿಸುತ್ತಿರುವ ಹವಮಾನ ಬದಲಾವಣೆಗಳ ಬಗ್ಗೆ ಅರಿವು ಮೂಡಿಸುವುದು, ಪರಿಸರ ಸಂರಕ್ಷಣೆಗೆ ಯುವಕರನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ವಿಶ್ವ ಪರಿಸರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಡುತ್ತದೆ ವಿವಿಧ ಪರಿಸರ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಉತ್ತಮ ಭವಿಷ್ಯಕ್ಕಾಗಿ ನಮ್ಮ ಪರಿಸರವನ್ನು ನಾವು ಎದುರಿಸುತ್ತಿರುವ ಹವಮಾನ ಬದಲಾವಣೆಗಳ ಬಗ್ಗೆ ಅರಿವು ಮೂಡಿಸುವುದು, ಪರಿಸರ ಸಂರಕ್ಷಣೆಗೆ ಯುವಕರನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ವಿಶ್ವ ಪರಿಸರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಡುತ್ತದೆ ವಿವಿಧ ಪರಿಸರ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಉತ್ತಮ ಭವಿಷ್ಯಕ್ಕಾಗಿ ನಮ್ಮ ಪರಿಸರವನ್ನು ರಕ್ಷಿಸುವುದು ವಿಶ್ವ ಪರಿಸರ ದಿನದ ಮುಖ್ಯ ಉದ್ದೇಶವಾಗಿದೆ. ಪರಿಸರದಲ್ಲಿನ ಬದಲಾವಣೆಗಳಿಂದ ನಮ್ಮ ಪರಿಸರ ಹೇಗೆ ಕ್ಷಿಣಿಸುತ್ತದೆ ಮತ್ತು ಮತ್ತು ಅದನ್ನು ರಕ್ಷಿಸಲು ಇರುವಂತಹ ಕ್ರಮಗಳನ್ನು ಇಂದಿನ ದಿನಮಾನದಲ್ಲಿ ನಾವು ತಿಳಿದುಕೊಂಡು ಬೆಳೆಸಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯ ಆಗಿದೆ.
ಮಾಲಿನ್ಯ ಅಥವಾ ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಂದ ಮುಕ್ತವಾದ ನೈಸರ್ಗಿಕ ಮತ್ತು ಸುಂದರವಾದ ಜಗತ್ತನ್ನು ಸೃಷ್ಟಿಸುವುದು ವಿಶ್ವ ಪರಿಸರ ದಿನದ ಸಂಪೂರ್ಣ ಆಲೋಚನೆ ನಮ್ಮೆಲ್ಲರದಾಗಿದೆ. ಪ್ಲಾಸ್ಟಿಕ್ ಅನ್ನು ನಿಷೇಧಿಸುವುದು ಮತ್ತು ಅದನ್ನು ಮರುಬಳಕೆ ಮಾಡುವುದು ನೀರನ್ನು ಉಳಿಸುವುದು, ಹೆಚ್ಚು ಗಿಡಗಳನ್ನು ನೆಡುವುದು, ವನ್ಯಜೀವಿಗಳು ಮತ್ತು ಪ್ರಾಣಿಗಳನ್ನು ಉಳಿಸುವುದು. ಇವೆಲ್ಲಾ ನಮ್ಮನ್ನು ಉತ್ತಮ ಪರಿಸರಕ್ಕೆ ಕರೆದ್ಯೋಯುವ ಕೆಲವು ಹಂತಾಗಳಾಗಿವೆ. ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಎಲ್ಲವೂ ಒಂದು ದಿನ ಕ್ಷಿಣಿಸುತ್ತದೆ. ಇದರಿಂದ ಶುದ್ಧ ನೀರು, ಶುದ್ಧ ಗಾಳಿ ಎಂದಿಗೂ ನಮಗೆ ಉಳಿಯುವುದಿಲ್ಲ ನಮ್ಮ ತಾಯಿಯ ಸ್ವಭಾವವನ್ನು ಉಳಿಸುವುದು ಮತ್ತು ಅದನ್ನು ಮಾಲಿನ್ಯಗೊಳಿಸದಿರುವುದು ಹಾಗೂ ಇತರ ಅಪಾಯಗಳಿಂದ ರಕ್ಷಿಸುವುದು ನಮ್ಮ ಜವಾಬ್ದಾರಿ ಆಗಿದೆ. ಇದು ಉತ್ತಮ ಮಾರ್ಗಕ್ಕೆ ಕರಿದ್ಯೋಯುತ್ತದೆ.

ಪ್ರತಿಯೊಬ್ಬರೂ ಪರಿಸರದ ಮಹತ್ವ ಮತ್ತು ಹಾನಿಯ ನಷ್ಟವನ್ನು ಮನದಟ್ಟು ಮಾಡಿ ಮುಂದಿನ ದಿನಗಳಲ್ಲಿ ಪರಿಸರದ ಅಭಿವೃದ್ಧಿಯ ಲೆಕ್ಕಾಚಾರ ಮಾಡುವಂತಾದರೆ ಪರಿಸರ ದಿನಕ್ಕೆ ಮಹತ್ವ ಬಂದಂತಾಗುತ್ತದೆ. ಸೂಕ್ತವಾದ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಈ ಭೂಮಿಯನ್ನು ರಕ್ಷಣೆ ಮಾಡಬೇಕಾಗಿದೆ. ಪ್ರತಿಯೊಬ್ಬರೂ ನಮ್ಮ ಸುತ್ತ-ಮುತ್ತ ಗಿಡ ನೆಟ್ಟು ಬೆಳೆಸೋಣ. ಆಗ ಇಡಿ ನಾಡೆ ಹಸಿರಾಗಿ ಇರುವುದು..

ಅಂಕಣ. ಬಸವರಾಜ.ಹೆಚ್ ಪತ್ರಿಕೋದ್ಯಮ ವಿದ್ಯಾರ್ಥಿ ಧಾರವಾಡ.ಬಸವರಾಜ.ಹೆಚ್…

 

ವರದಿ.ಮಂಜುನಾಥ್, ಎನ್

 

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend