ಕಟ್ಟಕಡೆಯ ಹಳ್ಳಿಗಳಿಗೆ ಕಡೆಗಣಿಸಿದ ಶಾಸಕ ಡಾ. ಅಜಯ್ ಸಿಂಗ್…!!!

Listen to this article

ಕಟ್ಟಕಡೆಯ ಹಳ್ಳಿಗಳಿಗೆ ಕಡೆಗಣಿಸಿದ ಶಾಸಕ ಡಾ. ಅಜಯ್ ಸಿಂಗ್ :

ಜೇವರ್ಗಿ : ತಾಲೂಕಿನ ಕಟ್ಟಕಡೆಯ ಹಳ್ಳಿಗಳಾದ ಬದನಿಹಾಳ ತಾಂಡಾ ಹಾಗೂ ದೇಸುಣಗಿ ರಂಜಣಗಿ   ಗ್ರಾಮದಿಂದ ಮೋರಟಗಿಗೆ ಹೋಗುವ ದಾರಿಯಂತೂ ಕೇಳಲೇಬೇಡಿ ಪೂರ್ತಿ ಹದಗೆಟ್ಟು ಹೋಗಿದೆ ದೇಸುಣಗಿ ಗ್ರಾಮದಿಂದ ಬದನಿಹಾಳ ತಾಂಡಕ್ಕೆ ಹೋಗುವ ದಾರಿ ಅದು ಕೂಡ ಪೂರ್ತಿ ಹದಗೆಟ್ಟು ಹೋಗಿದೆ ರಸ್ತೆಬದಿಯ ಕಂಟಿಗಳು ತಗ್ಗು ದಿನ್ನಿಗಳಿಂದ  ತುಂಬಿರುವ ರಸ್ತೆಗಳು ಗ್ರಾಮಸ್ಥರಿಗೆ ಓಡಾಡಲು ಅನುಕೂಲವಾಗದಂತೆ ಆಗಿದೆ ಇನ್ನು ಈ ಕಟ್ಟ  ಕಡೆಯ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೆಲವು ವರ್ಷಗಳ ಕಳೆದರೂ ಒಂದು ಹನಿ ನೀರು ಕೂಡಾ ಬರ್ತಾಯಿಲ್ಲಾ ತುರ್ತು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ತಲುಪಬೇಕಾದರೆ ಸರಿಯಾದ ರಸ್ತೆಗಳಿಲ್ಲ ತಮಗೆ ಚಿತ್ರದಲ್ಲಿ ತೋರಿಸಿರುವ ಹಾಗೆ ಒಂದು ಅಂಬುಲೆನ್ಸ್ 10 ಕಿಲೋಮೀಟರ್ ಚಲಿಸಲು ನಮ್ಮ ಹಳ್ಳಿಗಳಿಗೆ ತಗಲುವ ಸಮಯ ಒಂದು ಗಂಟೆ ಹೀಗಾದರೆ ಪ್ರಿಯರಿಗೆ ಗರ್ಭಿಣಿಯರಿಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸುವುದು ಹೇಗೆ ? ದಯವಿಟ್ಟು ಶಾಸಕರು ಈ ಬಗ್ಗೆ ಗಮನ ಹರಿಸಿ ಚುನಾವಣೆ ಬಂದಾಗಲಷ್ಟೇ ಶಾಸಕರಿಗೆ ನೆನಪಾಗುವ ಗ್ರಾಮಗಳೆಂದರೆ ತಪ್ಪಾಗುವುದಿಲ್ಲ ಎಲ್ಲಾ ಮೂಲಭೂತ  ಸೌಕರ್ಯಗಳಿಂದ ವಂಚಿತರಾಗಿ ಗ್ರಾಮಸ್ಥರು ಶಾಸಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಕಾಟಾಚಾರಕ್ಕೆ ಗ್ರಾಮವಾಸ್ತವ್ಯ ಮಾಡಿ  ಕೈ ತೊಳೆದುಕೊಂಡ ಜೇವರ್ಗಿ ಮತಕ್ಷೇತ್ರದ ಶಾಸಕ ಡಾ// ಅಜಯಸಿಂಗ. ಈಗಲಾದರೂ ತಾಲೂಕಿನ ಕಡೆ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿ ಇರುವ ಜನರ ಸಮಸ್ಯೆಗಳನ್ನು ಆಲಿಸಿ ಇಲ್ಲವಾದರೆ ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ತಮಗೆ ಈ ಕಡೆ ಹಳ್ಳಿಗಳಿಂದ ಕಡೆಗಣಿಸಲಾಗುವುದು

(ಬಾಕ್ಸ್ ಮಾಡಿ ಹೇಳಿಕೆ ಹಾಕಿ)

ಚುನಾವಣೆ ಬಂದಾಗ ಕೆಲವು ಸಮಾಜದ ಮುಖಂಡರ ಬುಜ ಹಿಡಿದು ಎದ್ದು ನಿಲ್ಲುವ ಶಾಸಕರಿಗೆ ಸರ್ಕಾರದಿಂದ ಆಯೋಜಿಸಿರುವ ಕಾರ್ಯಕ್ರಮಗಳಿಗೆ ಬರಲು ಹಿಂದೇಟು ಹಾಕುವ ಶಾಸಕರು ಖಾಸಗಿ ಕಾರ್ಯಕ್ರಮಗಳಿಗೆ ತಪ್ಪದೇ ಬರುತ್ತಾರೆ ಇನ್ನಾದರೂ ಕಡೆಯ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಕೇಳಿ ಇಲ್ಲವಾದರೆ ಮುಂಬರುವ 2023ನೇ ಚುನಾವಣೆಯಲ್ಲಿ ಮತದಾರ ಪ್ರಭುಗಳು ತಕ್ಕಪಾಠ ಕಲಿಸಲಿದ್ದಾರೆ.

ಚೆನ್ನಯ ಸ್ವಾಮಿ ವಸ್ತ್ರದ್
:ರಾಜ್ಯ ಮಾಹಿತಿ ಹಕ್ಕು & ಸಾಮಾಜಿಕ ಕಾರ್ಯಕರ್ತರು ವೇದಿಕೆಯ ಕಲ್ಯಾಣ ಕರ್ನಾಟಕದ ಉಪಾಧ್ಯಕ್ಷರಾದ.

ವರದಿ.ಬಸವರಾಜ್ ಹಿರೇಮಠ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend