ಜಿರತೆ ಪ್ರತ್ಯಕ್ಷ ಜನರಲ್ಲಿ ಭಯದ ಆತಂಕ….!!!

Listen to this article

ವರದಿ. ಸಂದೀಪ್, ಸಿ. ಎಂ. ಹೊಳೆ

ಚಿರತೆ ಪ್ರತೇಕ್ಷ ಜನರಲ್ಲಿ ಆತಂಕ
ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ಎರೆ ಹೊಲದಲ್ಲಿ ಚಿರತೆ ಪ್ರತೇಕ್ಷವಾಗಿದ್ದು, ಸುತ್ತಮುತ್ತಲಿನ ಗ್ರಾಮದ ಜನರು ಆತಂಕಗೊಂಡಿದ್ದಾರೆ.
ಹೌದು ಸಿ.ಎಂ ಹೊಳೆ ಗೊಲ್ಲರಹಟ್ಟಿಯ ಎರೆ ಹೊಲದಲ್ಲಿ ಕಡಲೆ ಬೆಳೆಯನ್ನು ಕಾಯುವ ಇಬ್ಬರು ರೈತರು ಕಂಡು ಆತಂಕಕ್ಕೆ ಹಿಡಾಗಿ ಊರಿನವರೆಗೂ ಕಳ್ಳೆ ಮುಳ್ಳು ಎನ್ನದೆ ಎದ್ದು, ಬಿದ್ದು, ಒಡೋಡಿ ಬಂದಿರುವ ಘಟನೆ ನಡೆದ್ದಿದು, ರೈತರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


ಈ ಘಟನೆಯನ್ನು ಸ್ಥಳಿಯ ಅರಣ್ಯ ಇಲಾಖೆಗೆ ಸ್ಥಳಿಯರು ತಿಳಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ಹೆಚ್ಚೆ ಗುರುತು ಪರಿಶೀಲಿಸಿದಾಗ ಸ್ಥಳದಲ್ಲಿ ಚಿರತೆ ಇರುವುದು ಖಚಿತವಾಗಿರುವುದ್ದರಿಂದ ಸ್ಥಳದಲ್ಲಿ ಅರಣ್ಯ ಇಲಾಖೆಯಿಂದ ಚಿರತೆಯ ಬೊನಗಳನ್ನು ಇರಸಲಾಗಿದೆ ಅಲ್ಲದೇ ಅರಣ್ಯ ಇಲಾಖೆಯಿಂದ ಗ್ರಾಮದಲ್ಲಿ ಜನರು ಜಾಗೃತಿಯಿಂದ ಇರಲು ಟಾಂ ಟಾಂ ಒಡೆಸಲಾಯಿತು.
ಈ ಘಟನೆ ನಡೆಯುವ ಮೂರು ದಿನದ ಹಿಂದಷ್ಟೇ ಪಕ್ಕದ ಗಡಿ ಗ್ರಾಮದಾಚೆಗಿರುವ ಬಳ್ಳಾರಿ ಜಿಲ್ಲೆಯ ಕೆಂಚ್ಚಮ್ಮನಹಳ್ಳಿಯ ಗ್ರಾಮದಲ್ಲಿ 2 ಮೇಕೆ ಹಾಗೂ ನಾಯಿಯ ತಿಂದಿರುವ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜನರು ಎಚ್ಚರದಿಂದ ಇರಲು ಕೋರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend