ಸಾರ್ವಜನಿಕರ ರಕ್ಷಣೆ ನಮ್ಮೆಲ್ಲರ ಹೊಣೆ, ಡಿವೈಎಸ್ಪಿ ಜಿ. ಹರೀಶ್ ರೆಡ್ಡಿ…!!!

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ ಸಾರ್ವಜನಿಕರ ರಕ್ಷಣೆ ನಮ್ಮೆಲ್ಲರ ಹೊಣೆ- ಡಿವೈಎಸ್ಪಿ ಜಿ.ಹರೀಶ್ ರೆಡ್ಡಿ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿಮಂದಿರದಲ್ಲಿ, ತುರ್ತುಸೇವೆ ಹಾಗೂ ರಸ್ಥೆ ಸುರಕ್ಷತಾ ಮಾಸಿಕ ಪ್ರಯುಕ್ತ.ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಾರ ಜರುಗಿತು.ಮಹಿಳೆಯರು ಮಕ್ಕಳು ಸೇರಿದಂತೆ ಸಾರ್ವಜನಿಕರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕೂಡ್ಲಿಗಿ ಡಿವೈಎಸ್ಪಿ ಜಿ.ಹರೀಶ್ ರೆಡ್ಡಿ ನುಡಿದರು. ಅನಾರೋಗ್ಯ,ನೀರಿಗೆ ಬಿದ್ದಿರುವುದು,ಕಾನೂನು ಸುವ್ಯವಸ್ಥೆ,ಮಹಿಳಾ, ಮಕ್ಕಳ,ಹಿರಿಯ ನಾಗರೀಕರ ಹಾಗೂ ಇನ್ನಿತರ ಯಾವುದೇ ತುರ್ತುಸಂರ್ಭಗಳಲ್ಲಿ ತಕ್ಷಣ ಅಗತ್ಯ ನೆರವು ನೀಡುವುದೇ ಆರಕ್ಷಕರಾದ ನಮ್ಮೆಲ್ಲರ ಹೊಣೆ ಎಂದರು. ಸಾರ್ವಜನಿಕರು ಏನೇ ಸಮಸ್ಯೆಗಳಿದ್ದರೂ ನೆರವಿಗಾಗಿ 112 ನಂಬರ್‌ಗೆ ಡಯಲ್‌ ಮಾಡಬಹುದಾಗಿದೆ.ಹಿಂದೆ ಪೊಲೀಸ್‌,ಅಗ್ನಿಶಾಮಕ, ಅಂಬುಲೆನ್ಸ್‌ಗೆ ಪ್ರತ್ಯೇಕ ನಂಬರ್‌ಗಳಿದ್ದು.ಈಗ ಎಲ್ಲವೂ ಒಂದೇ ನಂಬರ್‌ನಡಿಯಲ್ಲಿ ಬರಲಿದೆ ಎಂದರು.


ತುರ್ತು ಸೇವೆಗೆ ದೇಶಕ್ಕೊಂದೇ ನಂಬರ್‌ 112ಕನ್ನಡದಲ್ಲಿ ಶೀಘ್ರ ಕಾರ್ಯಾರಂಭ ವಾಗಲಿದೆ.
112ಗೆ ಕರೆ ಮಾಡಿದಾಗ ಬೆಂಗಳೂರಿನಲ್ಲಿ ಕಂಟ್ರೋಲ್‌ ರೂಮ್‌ಗೆ ಸಂದೇಶ ರವಾನೆಯಾಗುತ್ತದೆ, ಬೆಂಗಳೂರಿನಿಂದ ಜಿಪಿಎಸ್‌ ಆಧಾರದಲ್ಲಿ ಘಟನೆ ನಡೆದ ಸ್ಥಳದ ಸಾಮಿಪ್ಯದಲ್ಲಿರುವ 112 ವಾಹನ,ಕಂಟ್ರೋಲ್‌ ರೂಂ,ಅಂಬುಲೆನ್ಸ್‌, ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ರವಾನಿಸಲಾಗುತ್ತದೆ. ಮಾಹಿತಿ ಪಡೆದ 15ರಿಂದ 30 ನಿಮಿಷದೊಳಗೆ ವಾಹನ ಘಟನಾ ಸ್ಥಳಕ್ಕೆ ತೆರಳಿ ತಕ್ಷಣ ಪರಿಹಾರ ಕಾರ್ಯದ ಬಗ್ಗೆ ಸ್ಥಳೀಯ ಸ್ಟೇಷನ್‌,ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.ದಿನದ 24 ಗಂಟೆಯೂ ಈ ಸೇವೆಯೂ ಲಭ್ಯವಿದೆ.ಇದಕ್ಕೆ ಪರಿಣತ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
112ಕ್ಕೆ ಕರೆ ಅಥವಾ ಎಸ್‌ಎಂಎಸ್‌ ಮಾಡಬಹುದು. Emergency Response Support System (ERSS) ವೆಬ್‌ಸೈಟ್‌ ಮೂಲಕ ವಿನಂತಿ ಕಳುಹಿಸಬಹುದು. Emergency Report Centre (ERC)ಗೆ ಇಮೇಲ್‌ ಕಳುಹಿಸಬಹುದು. ”112″ India mobile app,ಮೊಬೈಲ್‌ ಆಪ್‌ ಮೂಲಕ ವಿನಂತಿ ಕಳುಹಿಸಬಹುದು ಎಂದರು.ಜಿಲ್ಲಾ ಪೊಲೀಸ್ ನಿಸ್ತಂತು ವಿಭಾಗದ ಅಧಿಕಾರಿಗಳು,ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಗಳಿಗೆ ಅಗತ್ಯ ಮಾಹಿತಿ ನೀಡಿದರು.ಸಿಪಿಐ ವಸಂತ ವಿ.ಅಸೊದೆ,ಪಿಎಸೈಐ ತಿಮ್ಮಣ್ಣ ಚಾಮನೂರ್ ಸೇರಿದಂತೆ ಮಹಿಳಾ ಪೊಲೀಸ್ ಅಧಿಕಾರಿಗಳು ವೇದಿಕೆಯಲ್ಲಿದ್ದರು.ಕೂಡ್ಲಿಗಿ ಡಿವೈಎಸ್ಪಿ ಬಿಭಾಗದ ಎಲ್ಲಾ ಠಾಣೆಗಳ ಎಲ್ಲಾ ಪೊಲೀಸ್ ಸಿಬ್ಬಂದಿ ತರಬೇತಿಯಲ್ಲಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend