ಜಗಳೂರುಪಟ್ಟಣದ ತರಳಬಾಳು ಕೇಂದ್ರದಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ತಾಲೂಕಿನ ಶಾಸಕರು…!!!

Listen to this article

ಮಾಜಿ ಶಾಸಕ ಎಚ್ ಪಿ ರಾಜೇಶ್ ರವರಿಗೆ ನೂರು ವರ್ಷ ಆಯಸ್ಸು ಹೆಚ್ಚಿಸಲಿ ನಾನು ಇರುವೆಗೂ ಸಹ ಸಾವು ಬಯಸುವ ವ್ಯಕ್ತಿಯಲ್ಲ ಎಂದು ಶಾಸಕ ಮತ್ತು ಎಸ್ಟಿ ನಿಗಮ ಮಂಡಳಿ ಅಧ್ಯಕ್ಷ ಎಸ್ ವಿ ರಾಮಚಂದ್ರಪ್ಪರವರು ತಿರುಗೇಟು ನೀಡಿದರು.
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕು ಜಗಳೂರುಪಟ್ಟಣದ ತರಳಬಾಳು ಕೇಂದ್ರದಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿ. ನಂತರ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಕಾಮಗಾರಿಗಳ ಉದ್ಗಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು ನಾನು ಕೂಡ ಈ ಕ್ಷೇತ್ರದವನಾಗಿದ್ದು ಪದೆ ಪದೆ ನನ್ನ ವಿರೋದಿಗಳು ಹೊರಗಿನವರು ಎಂದು ಹೇಳುವುದು ಹಾಸ್ಯಸ್ಪದವಾಗಿದೆ. ಅರಸಿಕೆರೆ ಬಾಗವು ಈ ಕ್ಷೇತ್ರಕ್ಕೆ ಸೇರಿದ್ದು ಕ್ಷೇತ್ರದ ಜನ ಅರ್ಶಿವಾದದಿಂದ ಎರಡು ಬಾರಿ ನಿಗಮ ಮಂಡಳಿ ಅಧ್ಯಕ್ಷರಾಗಿ ಮೂರು ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವೆ . ಮಾಜಿ ಶಾಸಕರು ನಮಗಿಂತ 10 ವರ್ಷದ ನಂತರ ರಾಜಕೀಯಕ್ಕೆ ಪ್ರವೇಶ ಮಾಡಿರುವರು ಅವರು ಚಿಕಿತ್ಸೆ ಪಡೆಯುವ ವೇಳೆ ಅವರಿಗೆ ನೋವು ತರುವಂತ ಹೇಳಿಕೆ ಹೇಳಿರುವುದಿಲ್ಲ ಒಂದು ವೇಳೆ ಅವರ ಮನಸ್ಸಿಗೆ ನೋವುಂಟು ಮಾಡಿದ್ದರೆ ಕ್ಷಮಿಸಲಿ ಈ ಹೇಳಿಕೆಯನ್ನು ಯಾರು ಅವರಿಗೆ ಹೇಳಿರುವರು ಅವರನ್ನು ಕರೆತಂದು ಸಾಬಿತುಪಡಿಸಲಿ ಚೌಡಮ್ಮ ದೇವಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಬನ್ನಿ ಎಂದು ಸವಾಲೇಸೆದರು ಕ್ಷೇತ್ರದ ಕನಸಿನ ಯೋಜನೆಗಳುನ್ನು ಸಕಾರಗೋಳಿಸುವಲ್ಲಿ ಅವಿರತ ಶ್ರಮವಾಗಿದೆ. ಕಾರ್ಮಿಕ ಇಲಾಖೆಯಿಂದ ಎರಡು ಸಾವಿರ ಕಿಟ್ ಗಳುನ್ನು ವಿತರಿಸಲಿದ್ದು ಇದೀಗ 300 ಆಹಾರ ಭತ್ಯೆಗಳುನ್ನು ನೀಡಿ ಬಡವರಿಗೆ ನೆರವಾಗುವ ಮೂಲಕ ವಿವಿಧ ಅಸಂಘಟಿತ ವಲಯಕ್ಕೆ ಸರ್ಕಾರದಿಂದ ತಲಾ ಮೂರು ಸಾವಿರ .5000 ಲಾಕ್ ಡೌನ್ ವೇಳೆ ಸಹಾಧನ ನೀಡಿ ಅಸರೆಯಾಗಿದ್ದೆವೆ.ಅತಿ ಶೀಘ್ರದಲ್ಲೇ 57 ಕೆರೆ ನೀರು ತುಂಬಿಸಿ ಅಪ್ಪರ್ ಭದ್ರ ನೀರಾವರಿ ಯೋಜನೆಡಿಯಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಸದಾ ಕ್ಷೇತ್ರದ ಅಭಿವೃದ್ಧಿಗೆ ಬದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚೀವ ಬೈರತಿ ಬಸವರಾಜ್ ಮಾತನಾಡಿ ಶಾಸಕ ಎಸ್ ವಿ ರಾಮಚಂದ್ರರವರು ಸೌಮ್ಯ ಸ್ವಾಭಾವ ವ್ಯಕ್ತಿತ್ವದವರು ಅವರು ಮಗುವಿನಂತಹ ಮನಸ್ಸುಳ್ಳವರು ಯಾರಿಗೂ ಕೂಡ ಕೇಡು ಬಯಸಲಾರರು ಎಂದು ಬಣ್ಣಿಸಿದರು. ಜಗಳೂರು ಕ್ಷೇತ್ರ ಬರಪೀಡಿತ ಎಂಬ ಹಣೆ ಪಟ್ಟಿ ಅಳಿಸಲು ನಮ್ಮ ಸರ್ಕಾರ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಈಗಾಗಲೇ ಮಹತ್ತರ ಅಪ್ಪರ್ ಭದ್ರ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಜಲನೀತಿ ಯೋಜನೆಡಿಯಲ್ಲಿ 1200 ಕೋಟಿ ಮಿಸಲಿರಿಸಿ ಇದೀಗ ಟೆಂಡರ್ ಕರೆಯಲಾಗಿದೆ. ಅದೇ ರೀತಿ ಕೆರೆ ತುಂಬಿಸುವ ಯೋಜನೆಡಿಯಲ್ಲಿ ನೀರು ತುಂಬಿಸಿ ಈ ಬಾಗದ ಜನರ ಸಮಸ್ಯೆಗಳಿಗೆ ಸ್ವಂದಿಸಲಾಗಿದೆ ಇನ್ನು ಮುಂದಿನ ದಿನಗಳಲ್ಲಿ ಕ್ಷೇತ್ರ ಅಭಿವೃದ್ಧಿಗೆ ಒತ್ತು ನಿಡಲಿದ್ದೆವೆ ಎಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ ಸಂಸದರಾದ ಜಿ ಎಂ ಸಿದ್ದೇಶ್ವರ್. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಿಗಿ. ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿಜಯಮಹಾಂತೇಶ್ ದಾನಮ್ಮ .ಎಸ್ ಪಿ. ರಿಷ್ಯಂತ್. ಡಿವೈ ಎಸ್ ಪಿ ನರಸಿಂಹ ತಾಮ್ರದ್ವಜ್.ಜಿಪಂ ಸದಸ್ಯ ಎಸ್ ಕೆ ಮಂಜುನಾಥ. ಜಿಪಂ ಮಾಜಿ ಸದಸ್ಯ ನಾಗರಾಜ್.ಬಿಜೆಪಿ ಘಟಕದ ಅಧ್ಯಕ್ಷ ಮಹೇಶ್.ತಹಶೀಲ್ದಾರ್ ನಾಗವೇಣಿ. ಪಪಂ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ. ಉಪಾಧ್ಯಕ್ಷರಾದ ಲಲಿತಮ್ಮ . ಮುಖ್ಯಾ ಅಧಿಕಾರಿ ರಾಜು ಬಣಕಾರ್.ತಾಪಂ ಇಓ ಲಕ್ಷ್ಮಿಪತಿ. ಪಪಂ ಸದಸ್ಯರು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿ ಇತರರು ಉಪಸ್ಥಿತರಿದ್ದರು.


ವರದಿ ಕೆಎಸ್ ವೀರೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend