ಪತ್ರಕರ್ತರು ಸಮಾಜದಲ್ಲಿ ಸೈನಿಕರ ರೀತಿಯಲ್ಲಿ ಜನಸಾಮಾನ್ಯರ ಕಷ್ಟದಲ್ಲಿ ಸ್ವಂದಿಸಲಿ…!!!

Listen to this article

ಎಚ್ಚರ ಪತ್ರಕರ್ತ ಎಚ್ಚರ..!
1) ಬಾಗಲಕೋಟ ಜಿಲ್ಲೆಯಲ್ಲಿ ನಿರಂತರವಾಗಿ ವಾರಪತ್ರಿಕೆಯ  ಸಂಪಾದಕ/  ಪತ್ರಕರ್ತರ ಮೇಲೆ ಆಗುತ್ತಿರುವ ಕೇಸುಗಳನ್ನು ಗಮನಿಸಿದಾಗ ನಡೆದ  ಘಟನೆಗೂ ದಾಖಲಿಸಿರುವ ಪಿರ್ಯಾದಿಗೂ ಸಮಂಜಸವಾಗುತ್ತಿಲ್ಲ. ಸುದ್ದಿಗಾಗಿ ತೇರಳಿದ ಪತ್ರಕರ್ತರ ಮೇಲೆ ಹಲ್ಲೆಗಳು ನಡೆದು ಅವರ ಮೇಲೆ ನಂಬಲರ್ಹ ದೂರುಗಳು ದಾಖಲಾಗುತ್ತಿರುವುದು ಖಂಡನೀಯ… ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ಅವ್ಯಾಹತವಾಗಿ   ಪಡಿತರ ಚೀಟಿಯ ಕಾಳು (ಅಕ್ಕಿ) ಅಕ್ರಮವಾಗಿ ಸಾಗಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸುದ್ದಿ ಮಾಡಲು ಹೋದ ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಸುದ್ದಿಗಾಗಿ ತೇರಳಿದ ಮಾರುತಿ ಎರ್ಟಿಕಾ ಕಾರಿಗೆ ಕಲ್ಲಿನಿಂದ ಹೊಡೆದು ಜಖಂ ಗೊಳಿಸಿರುತ್ತಾರೆ.  ಇಷ್ಟೆಲ್ಲ ಹಾಡು ಹಗಲೇ ನಡೆದರು ಒಂದು ಟಂಟಂ ವಾಹನದಲ್ಲಿರುವ 20 ಸಾವಿರ ರೂಪಾಯಿಯ ಮೌಲ್ಯವಿಲ್ಲದ ಕಾಳಿಗೆ 2 ಲಕ್ಷ ರೂಪಾಯಿ ನೀಡಲು ಪತ್ರಕರ್ತರು ಬೇಡಿಕೆ ಇಟ್ಟಿದ್ದಾರೆ ಎಂದು ನಂಬಲರ್ಹ ದೂರು ನೀಡಿ ಮಾಧ್ಯಮದವರನ್ನು ಜೈಲಿಗೆ ಅಟ್ಟಿದ್ದು ದುರಂತವೇ ಸರಿ.  ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ
2) ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನ ಸುನಗ ಗ್ರಾಮದ ಹೊಲದಲ್ಲಿ ಇಸ್ಪೀಟು ಆಡಿಸುವ ತಂಡವಿರುವ ಸುದ್ದಿ ಗುಲ್ಲೆದ್ದಿತು. ಇದನ್ನು ತಿಳಿದು ಒಬ್ಬಿಬ್ಬರು ಇಂತಹ ಜಾಗಕ್ಕೆ ಹೋಗುವುದು ಸರಿಯಲ್ಲ ಎಂದು ಮಾಧ್ಯಮದ 7 ಜನರು ಹೋದರು. ಅಲ್ಲಿದ್ದ ಇಸ್ಪೀಟು ಆಡುವ ತಂಡ ಮಾಧ್ಯಮದವರು ಭಾವಚಿತ್ರ ಹಾಗೂ ವಿಡಿಯೋ ಚಿತ್ರೀಕರಣ ಮಾಡುವುದನ್ನು ಕಂಡು ಹಲ್ಲೆ ಮಾಡಿದ್ದು ಅಲ್ಲದೇ  ಈ ಘಟನೆಯಿಂದ ತಾವು ತಪ್ಪಿಸಿಕೊಳ್ಳಲು ಮಾಧ್ಯಮದವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಮಾಧ್ಯಮದವರು ಎಸ್ಪಿ ಸ್ಕ್ವಾಡದವರು ಎಂದು ಸುಳ್ಳು ಹೇಳಿದ್ದಾರೆ ಎಂಬ ಸುಳ್ಳು ಆರೋಪ ಮಾಡಿ ದೂರು ನೀಡಿದ್ದಾರೆ ಇಲ್ಲಿ ದೂರು ಪಡೆದ ಬೀಳಗಿಯ ಪೊಲೀಸರು ಪ್ರಕರಣದ ಸತ್ಯಾಸತ್ಯತೆ ಕಂಡುಕೊಳ್ಳದೆ ಸರಿಯಾದ ತನಿಖೆ ಮಾಡದೇ ಮಾಧ್ಯಮದವರನ್ನು ಜೈಲಿಗೆ ಕಳುಹಿಸುತ್ತಾರೆ. ಇದರ ಹಿಂದಿನ ಮರ್ಮ ನಾನು ಬಿಡಿಸಿ ಹೇಳುವ ಅವಶ್ಯವಿರುವದಿಲ್ಲ
3) ಬಾಗಲಕೋಟ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ನಡೆದ ವಿಚಿತ್ರ ಘಟನೆಯ ಕುರಿತು ಹೇಳಬೇಕೆಂದರೆ ಸಿದ್ದಪ್ಪ ಹಂಚಿನಾಳ ಎಂಬ ಸಂಪಾದಕ   ಕರ್ತವ್ಯ ಮೇಲಿದ್ದ ಹುನಗುಂದ PWD ಅಧಿಕಾರಿಯ ಸರ್ಕಾರಿ ವಾಹನಕ್ಕೆ ಅಡ್ಡಲಾಗಿ ತನ್ನ ಕಾರು ನಿಲ್ಲಿಸಿ ಕೇವಲ 3 ಸಾವಿರ ರೂಪಾಯಿ ಕೊಡಲು ಕೇಳಿದನಂತೆ ಹಣ ನೀಡಲಿಲ್ಲವೇಂದರೆ ಇಲ್ಲ ಸಲ್ಲದ ಆರೋಪ ಮಾಡಿ ಪತ್ರಿಕೆಯಲ್ಲಿ ಬರೆಯುವದಾಗಿ ಹೇಳಿ ಜೀವದ ಬೆದರಿಕೆ ಹಾಕಿದ ಎಂದು ದೂರು ದಾಖಲಾಗಿದೆ.  ಸಾಮಾಜಿಕ ತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಸಿದ್ದಪ್ಪ ಹಂಚಿನಾಳ ಸದರ ಅಧಿಕಾರಿಯ ಸರ್ಕಾರದ ವಾಹನಕ್ಕೆ ಅಡ್ಡಲಾಗಿ ತನ್ನ ಕಾರು ನಿಲ್ಲಿಸಿದ ಮತ್ತು ದುಡ್ಡು ಕೇಳಿ ಜೀವ ಬೆದರಿಕೆ ಹಾಕಿದ ಕುರಿತಾದ ವಿಷಯವಿಲ್ಲ. ಸಿದ್ದಪ್ಪ ಹಂಚಿನಾಳ ಮತ್ತು  ಪಿರ್ಯಾದಿ ಇಬ್ಬರು ಸವರ್ಣಿಯರು ದೂರಿನಲ್ಲಿ ದಲಿತ ಹೋರಾಟಗಾರ ಎಂದು ಬರೆಯುವ ಉದ್ದೇಶವೇನು…?
ಈ ಎಲ್ಲ ಪ್ರಕರಣಗಳ ಬಗ್ಗೆ ನಾನು ಬಿಡಿಸಿ ಹೇಳಬೇಕಾಗಿಲ್ಲ ತಾವೇ ಅರ್ಥ ಮಾಡಿಕೊಳ್ಳಿ…   ಇದರ ಹಿಂದೆ ಸಾಕಷ್ಟು ಭ್ರಷ್ಟಾಚಾರ/ ರಾಜಕೀಯ ನಡೆಯುತ್ತಿದೆ. ಈ ಪ್ರಕರಣದಲ್ಲಿ MOB ಯಂತಹ ಕಲಂ ಸೇರಿಸಿ ಪತ್ರಕರ್ತರಿಗೆ ಅನ್ಯಾಯವಾಗಿದೆ..
CBI ನಿಂದ ಮಾತ್ರ ಸತ್ಯಾಂಶ ಹೋರಬೀಳಲು ಮಾತ್ರ ಸಾಧ್ಯ…
ಪತ್ರಕರ್ತ ಯಾರ ಮಿತ್ರನೂ ಅಲ್ಲ ಹಾಗಂತ ಯಾರ ಶತ್ರನೂ ಅಲ್ಲ….ಎಚ್ಚರಿಕೆ ಇದು

ಪತ್ರಿಕೆ ಅಲ್ಲ ಹೋರಾಟದ ಅಸ್ತ್ರ….

ಎನ್, ಮಂಜುನಾಥ್ ಸಂಪಾದಕರು ಎಚ್ಚರಿಕೆ ವಾರ ಪತ್ರಿಕೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend