ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ.!!

Listen to this article

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು/ ಮೂಢನಂಬಿಕೆಗಳ ಸೃಷ್ಠಿಯಿಂದ ಜನರು ಮೌಡ್ಯತೆ, ಅಸ್ಪಶ್ಯತೆ, ಕಂದಾಚಾರ ಇಂತಹ ಸಾಮಾಜಿಕ ಕಟ್ಟುಪಾಡುಗಳ ಆಚರಣೆಯಿಂದ ಶಿಕ್ಷಣ ಅವಕಾಶ ವಂಚಿತರಾಗುತ್ತಿದ್ದಾರೆ. ಅನೇಕ ಸಾಮಾಜಿಕ ಅಸಮಾನತೆಯಿಂದ ಮಡಿವಾಳ ಸಮು ದಾಯದ ಜನತೆ ಶೋಷಣೆಗೊಳಗಾಗಿದ್ದಾರೆ. ಎಂದು ಜನಸಂಸ್ಥಾನದ ಪಿ.ವಿರುಪಾಕ್ಷಪ ತಿಳಿಸಿದರು. ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಸಮಪಾಲು-ಸಮಬಾಳು ಸರ್ವರಿಗೂ ಒದಗಿಸಲು ಬಸವ ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ದಕ್ಷ ಬ್ರಹ್ಮನನ್ನು ಸಂಹರಿಸಿ ಅತಿ ಉತ್ಸಾಹದಿಂದ ವಿಜಯೋನ್ಮತ್ತವಾಗಿ ಶಿವನನ್ನು ಕಾಣಲು ವೀರಭದ್ರ ಶಿವನ ಸಭೆಯೊಳಗೆ ನಡೆದುಬರುತ್ತಾನೆ. ಸಭೆಯಲ್ಲಿದ್ದ ಶಿವಗಣನಿಗೆ ಈತನ ಶಿಯಸೆರಗು ತಾಕುತ್ತದೆ. ವಿಜಯದ ಉದ್ವೇಗದಲ್ಲಿ ಆದ ತಪ್ಪಿಗೆ, ಭೂಲೋಕದಲ್ಲಿ ಮಡಿವಾಳನಾಗಿ ಜನಿಸಿ ಶರಣರ ವಸ್ತ್ರಗಳನ್ನು ಮಡಿ ಮಾಡುವ ಕಾಯಕ ಪೂರೈಸಿ ದೋಷ ಮುಕ್ತನಾಗಿ ಬರು ವಂತೆ ಶಿವನ ಆದೇಶವಾಗುತ್ತದೆ. ಅದಕ್ಕಾಗಿ ಮಾಚಿದೇವರು ವೀರಭದ್ರ ದೇವಾಂಶ ಸಂಭೂತೆ ಅವಕಾಶ ಪುರುಷನೆಂದು ತಿಳಿಸಿದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಏಳುಕೋಟಿ, ರಂಗನಾಥ, ಅಂಜಿನಪ್ಪ, ಮಾಜಿ ಪ.ಪಂ.ಸದಸ್ಯ ರಘು, ಶಿಕ್ಷಕರಾದ ಗುರುಮೂರ್ತಿ, ಗಂಗಾರೆಡ್ಡಿ, ತಿಪ್ಪೇಸ್ವಾಮಿ, ಶಿಕ್ಷಕಿ ಮಹಾದೇವಿ, ದೊಡ್ಡಲಿಂಗ, ಗೂಳೇಶ್ವರ, ನೇಮಕಲ್ಲಪ್ಪ, ಎಂ.ನಾಗರಾಜ, ಹನು ಮಂತಪ್ಪ, ರಾಧಕೃಷ್ಣ, ಚಂದ್ರ, ಮಡಿವಾಳದ ಸಮುರ ಸಮುದಾಯದವರು ಭಾಗವಹಿಸಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend