ಕಣ್ಣಿಗೆ ಕಾಣದ ಕಾನಾಹೊಸಹಳ್ಳಿಯ ಗ್ರಂಥಾಲಯದ ಅವ್ಯವಸ್ಥೆ ಆಗರ….!!!

Listen to this article

ವರದಿ. ವಿರೇಶ್ ಕಾನಾಹೋಸಹಳ್ಳಿ

ಪ್ರತಿಯೊಂದು ಗ್ರಾಮಪಂಚಾಯಿತಿ ಮಟ್ಟದಲ್ಲಿ ನಮ್ಮ ಘನತೆಯೆತ್ತ ರಾಜ್ಯ ಸರ್ಕಾರ ಗ್ರಂಥಾಲಯಗಳನ್ನು ಸ್ಥಾಪಿಸಿರುವುದು ಎಲ್ಲಾ, ಬಡ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಲವು ವಿಷಯಗಳು ತಲುಪಿ ಉನ್ನತ ಮಟ್ಟದಲ್ಲಿ ಯೋಚನೆಯ ಶಕ್ತಿ ಬೆಳೆಯಲಿ ಹಾಗೂ ಆ ಒಂದು ಗ್ರಂಥಾಲಯದಲ್ಲಿ ಎಲ್ಲಾ ರೀತಿಯ ಜನರು ಸೇರುವುದರಿಂದ ಅಲ್ಪ ಸ್ವಲ್ಪ ವಿಷಯಗಳ ಬಗ್ಗೆ ಜ್ಞಾನರ್ಜನೆ ಸಿಗಲಿ ಎನ್ನುವ ಒಂದು ಉದ್ದೇಶದಿಂದ ಹೊರೆತು ಮತ್ತು ಹಳ್ಳಿಗಳ ಮಟ್ಟದಲ್ಲಿ ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಳ್ಳಲಿ ಎಂದು ಅದನ್ನು ಬಿಟ್ಟು ಇನ್ನವ್ವಉದ್ದೇಶದಿಂದ ಅಲ್ಲ.ನೀವೇ ನೋಡಿ ಈ ವಿಡಿಯೋವನ್ನು.

ಅದೆಲ್ಲ ಇರಲಿ ಬಿಡಿ ನಾವು ಈಗ ಹೇಳಹೊರಟಿರುವ ಗ್ರಂಥಾಲಯವಿರುವುದು,ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ  ಕಾನಾಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಒಂದು ಗ್ರಂಥಾಲಯ, ಈ ಒಂದು ಗ್ರಂಥಾಲಯ ಖಾನಾಹೊಸಹಳ್ಳಿ ಜನರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳಿಗೆ ಜ್ಞಾನಬಂಡಾರವೆಂದರೂ ತಪ್ಪಿಲ್ಲ ಏಕೆಂದರೆ. ಖಾನಾಹೊಸಹಳ್ಳಿ ಹೋಬಳಿಯೂ ಸುತ್ತ ಮುತ್ತಲಿನ ಸುಮಾರು 20 ಕಿಲೋಮೀಟರ್ ಹಳ್ಳಿಗಳ ಒಂದು ವ್ಯಾಪ್ತಿಗೆ ಇಲ್ಲಿ ವ್ಯವಹಾರಿಕಾ ಹಾಗೂ ವಿದ್ಯಾಭ್ಯಾಸಕ್ಕೆ ಸೂಕ್ತವಾದ ಸ್ಥಳ ಹಾಗೂ ಸಾರಿಗೆ ಅನುಕೂಲಕ್ಕೂ ಸಹ ಸೂಕ್ತ ಸ್ಥಳ.
ಇದನೆಲ್ಲ ಗಮನಕ್ಕೆ ಇದ್ದರು ಸಹ ಈ ಒಂದು ಗ್ರಂಥಾಲಯದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡುವಲ್ಲಿ ಇಲ್ಲಿನ ಸಂಬಂಧ ಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಮಾತ್ರ ತುಂಬಾ ವಿಷಾದನೀಯ ಸಂಗತಿ ಎಂದರು ತಪ್ಪಾಗಲಾರದು ಮತ್ತು ಈ ಒಂದು ಗ್ರಂಥಾಲಯಕ್ಕೆ ಸರಿಯಾದ ರೀತಿಯ ಸೂರಿಲ್ಲ, ಓದುಗರಿಗೆ ಸರಿಯಾದ ಸ್ಥಳವಕಾಶವಿಲ್ಲ ಹಾಗೂ ಕುರ್ಚಿ,ಚೇರ್ ಗಳ ಒಂದು ಸೌಲಭ್ಯವಿಲ್ಲ ಮತ್ತುಇದನ್ನೆಲ್ಲಾ ನೋಡುತ್ತಿದ್ದರೆ ಗ್ರಂಥಾಲಯದ  ಮೇಲ್ವಿಚಾರಕರ ನಿರ್ಲಕ್ಷ್ಯ ಇವೆಲ್ಲವೂ ಎದ್ದು ಕಾಣುತ್ತಿರುವುದು ಮಾತ್ರ ತುಂಬಾ ಒಂದು ದುಃಖ್ಖದ ಸಂಗತಿ.ಮತ್ತು ಮಳೆಗಾಲದ ಸಮಯದಲ್ಲಿ ಯಾರಾದರೂ ಓದುಗ ಪ್ರಿಯರು ಓದುತ್ತ ಕುಳಿತ ಸಮಯದಲ್ಲಿ ಮಳೆಏನಾದ್ರು ಬರಲು ಪ್ರಾರಂಭಿಸಿದರೆ ಸಾಕು ಅಲ್ಲಿಂದ ತಮ್ಮ ಒಂದು ಜೀವವನ್ನು ಕೈಯಲ್ಲಿ ಇಡಿದು ಕೊಂಡು ಹೊರನಡೆಯುತ್ತಾರೆ ಎನ್ನುತ್ತಾರೆ ಸತ್ಯವನ್ನು ಕಂಡ ಸಾರ್ವಜನಿಕರು.

ಇಷ್ಟೆಲ್ಲಾ ಅವ್ಯವಸ್ತೆ ಇಲ್ಲಿ ಇದ್ದರು ಯಾವೊಬ್ಬ ಅಧಿಕಾರಿಗಳು ಇದರ ಒಂದು ಸೂಕ್ತ ವ್ಯವಸ್ಥೆಯನ್ನು ಸರಿಯಾಗಿ ಕಲ್ಪಿಸಿಕೊಡುವಲ್ಲಿ ಸಂಪೂರ್ಣ ವಿಫಲರಾಗಿರುವುದು ಮಾತ್ರ ದುಃಖ್ಖದ ಸಂಗತಿ ಈ ಒಂದು ಗ್ರಂಥಾಲಯದ ಅಭಿವೃದ್ಧಿಗೆ ಬಂದಿರುವ ಸರ್ಕಾರದ ಅನುದಾನ ಯಾವ ದುಷ್ಟ ಅಧಿಕಾರಿಯ ಕೈಯಲ್ಲಿ ಸಿಕ್ಕು ನರಳುತ್ತಿದೆಯೋ ಆ ದೇವರಿಗೆ ಗೊತ್ತು ಎನ್ನುತ್ತಾರೆ, ಅಲ್ಲಿನ ಸ್ಥಳೀಯರು ಮತ್ತು ಇದನ್ನು ಅಭಿವೃದ್ಧಿ ಪಡಿಸುವಲ್ಲಿ ಅಲ್ಲಿನ ಗ್ರಾಮಪಂಚಾಯಿತಿಯ ಆಡಳಿತ ವ್ಯವಸ್ಥೆ, ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗಲಿ ಮತ್ತು ತಾಲೂಕಿನ ಅಭಿವೃದ್ಧಿ ಹರಿಕಾರರು ಎಂದು ಬಿಂಬಿತವಾಗಿರುವ ಶಾಸಕರು ಕೂಡಲಿ ಗಮನವನ್ನು ಹರಿಸಿ ಅಲ್ಲಿರುವ ಅವ್ಯವಸ್ತೆಯನ್ನು ಸರಿಪಡಿಸಲಿ ಎಂಬುದು ನಮ್ಮ ಒಂದು ಆಶಯ….
ಇನ್ನೂ ಹೆಚ್ಚಿನ ಮಾಹಿತಿ ಮುಂದಿನ ಸಂಚಿಕೆಯಲ್ಲಿ ಬಿತ್ತರಿಸಲಾಗುವುದು….

 

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend