ಕರೋನಾ ಲಾಕ್ಡೌನ್ ಇಂದ ರಂಗ ಕಲಾವಿದರ ಬದುಕು ಮೂರಬಟ್ಟೆ..

Listen to this article

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ.*
*ಕರೋನಾ ಲಾಕ್ಡೌನ್ ಇಂದ ರಂಗ ಕಲಾವಿದರ ಬದುಕು* *ಮೂರಬಟ್ಟೆ:—- ರಂಗ ಕಲಾವಿದ ದುರುಗೇಶ ನಾಗರ ಹುಣಸೆ.*
ವಿಜಯನಗರ ಜಿಲ್ಲೆ ಕಲೆಯ ತವರೂರು ಕೂಡ್ಲಿಗಿ ತಾಲೂಕಿನಲ್ಲಿ ಕಮರುತ್ತಿದೆ ರಂಗಭೂಮಿ ಕಲಾವಿಧರ ಬದುಕು. ನಶಿಸುತ್ತಿರುವ ಕಲೆಯಲ್ಲಿ ರಂಗಭೂಮಿಯೂ ಒಂದು.ಈಗ ಈ ಕಲೆಗೆ ಮತ್ತೆ ಸಂಕಷ್ಟ ಎದುರಾಗಿದೆ.ಕರೋನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ ಡೌನ್ ವಿಧಿಸಲಾಗಿದ್ದು ರಂಗಭೂಮಿ ಕಲಾವಿಧರ ಕುಟುಂಬಗಳು ಪ್ರಯಶ್ಹ ಬೀದಿಗೆ ಬಿದ್ದಿವೆ.ನಾಟಕಗಳ ಪ್ರಧರ್ಶನವಿಲ್ಲದೆ ರಂಗಭೂಮಿ ಕಲಾವಿಧರ ಕುಟುಂಬಗಳಿಗೆ ನಾಟಕ ಪ್ರಧರ್ಶನದ ದುಡಿಮೆಯ ಮೇಲೆಯೇ ಅವಲಂಭಿತರಾಗಿದ್ದ ಕಲಾವಿಧರು ಪರದಾಡುವಂತಾಗಿದೆ.ಕಲೆಯನ್ನೆ ಅವಲಂಭಿಸಿದ ವೃತ್ತಿ ರಂಗಭೂಮಿ ಕಲಾವಿಧರು ಒಂದು ಹೋತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.ಈಗಾಗಿ ರಂಗಭೂಮಿ ಕಲಾವಿಧರ ಬದುಕಿನ ಬಂಡಿ ಸಾಗಿಸುವುದು ಕಷ್ಟವಾಗಿದೆ ಎಂದು.ರಂಗಭೂಮಿ ಕಲಾವಿಧ ದುರುಗೇಶ್ ನಾಗರಹುಣಸೆ ಹೇಳಿದರು.
ಕಲೆ & ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದ ಲಕ್ಷಾಂತರ ಮಂದಿ ರಂಗ ಕಲಾವಿಧರು ಸಂಕಷ್ಟದಲ್ಲಿದ್ದಾರೆ.ಮನಸ್ಸಿನಲ್ಲಿ ಸಾವಿರಾರು ನೋವುಗಳಿದ್ದರೂ ತಮ್ಮ ಹಾಡು ಅಭಿನಯ ಮಾತಿನ ಮೂಲಕ ಜನರನ್ನು ನಕ್ಕು ನಲಿಸಿ. ನೋವು ದೂರ ಮಾಡುತ್ತಿದ್ದ ಕಲಾವಿದರು ವಿಧಿಯಾಟದಂತೆ ಇಂದು ತಾವೇ ನೋವು ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಕಲಾವಿಧರ ಬದುಕೆಂದರೆ ಆತ ಸದಾ ಪ್ರಚಲಿತದಲ್ಲಿರಬೇಕು ಕಲೆಯನ್ನಾ ಬಿಟ್ಟು.ನೀರಿನಿಂದ ಹೋರಬಂದ ಮೀನಿನಂತಾಗುವಾ ಸ್ಥಿತಿ ರಂಗಭೂಮಿ ಕಲಾವಿಧರಿಗೆ ಬಂದಿದೆ.
ರಂಗಭೂಮಿ ಕಲಾವಿದರು ಕೋವೀಡ್ ನಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ಈಗಾಗಿ ರಂಗಭೂಮಿ ಉಳಿವಿಗಾಗಿ ಜನರ ಪ್ರೋತ್ಸಾಹದ ಜೋತೆಗೆ ಸರ್ಕಾರವೂ ಸಹ ಹೆಚ್ಚಿನ ಅನುಧಾನ ನೀಡುವ ಮೂಲಕ ಹಾವ್ಯಾಸಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಇಲ್ಲಾದಿದ್ದರೆ ಮುಂದೋಂದು ದಿನ ರಂಗಭೂಮಿ ಕಲಾವಿದರು ಬೀದಿಗೆ ಬೀಳುವಾ ಸ್ಥಿತಿ ನಿರ್ಮಾಣವಾಗುತ್ತದೆ .ಕಂಗಲಾಗಿರುವಾ ರಂಗ ಕಲಾವಿಧರಿಗೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾಲೂಕಿನ ಶಾಸಕರು ಜನಪ್ರತಿನಿಧಿಗಳು ಕಲಾವಿಧರ ನೆರವಿಗೆ ಸ್ಫಂದಿಸಿ ಆರ್ಥಿಕ ನೆರವು ಆಹಾರ ಪದಾರ್ಥಗಳನ್ನು ಕಲ್ಪಿಸಿಕೋಡಬೇಕೆಂದು ಅವಳಿ ಜಿಲ್ಲೆಯ ತಾಲೂಕಿನ ಎಲ್ಲಾ ಕಲಾವಿದರ ಪರವಾಗಿ ನಾನು ಮನವಿ ಮಾಡಿಕೋಳ್ಳುತ್ತೆನೆ..

(ಲಾಕ್ ಡೌನ್ ಹಿನ್ನೆಲೆಯಲ್ಲಿ ರಂಗಭೂಮಿ ಕಲಾವಿದರು ಬಹಳ ಕಷ್ಟದ ಜೀವನ ನೆಡೆಸುತ್ತಿದ್ದಾರೆ.ಸರ್ಕಾರದ ನೆರವು ಕೇಳಲೂ ಆಗುವುದಿಲ್ಲಾ ಇತ್ತ ಜೀವನ ನಿರ್ವಹಣೆಯೂ ಬಿಡಲಾಗುತ್ತಿಲ್ಲಾ ಏನು ಮಾಡುವುದು ಎಂದು ಬಹಳಷ್ಟು ರಂಗಭೂಮಿ ಕಲಾವಿದರು ತೆಲೆಮೇಲೆ ಕೈ ಹೋತ್ತು ಕೂತಿದ್ದಾರೆ…ತಿಪ್ಪೇಸ್ವಾಮಿ.ನಾಟಕ ನಿರ್ಧೆಶಕರು .ಗುಡೇಕೋಟೆ.).

ವರದಿ. ಎಂ. ಎಲ್. ವೆಂಕಟೇಶ್.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend