ಮಾನ್ಯ ಆನಂದ್ ಸಿಂಗ್ ರವರಿಗೆ ಹೃದಯಾಂತರಾಳದ ನೋವಿನ ಮನವಿ…!!!

Listen to this article

*ಮಾನ್ಯ ಆನಂದ್ ಸಿಂಗ್ ರವರಿಗೆ ಹೃದಯಾಂತರಾಳದ ನೋವಿನ ಮನವಿ*:-ಕೋವಿಡ್ ಎರಡನೇಯ ಅಲೆ ಹಾಗೂ ಲಾಕ್ ಡೌನ್ ನಿಂದಾಗಿ ಸಾರ್ವಜನಿಕರಿಗೆ ಹಾಗೂ ಪತ್ರಕರ್ತರಾದಂತ ನಮಗೂ ತೀವ್ರ ಸಂಕಷ್ಟ ಎದುರಾಗಿರುವುದು ತಮ್ಮ ಗಮನಕ್ಕೆ ಇದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಯಾದ (ಬಂಗ್ಲೆ ಮಲ್ಲಿಕಾರ್ಜುನ) ನನ್ನ ಭಾವನೆ.ಸರ್ಕಾರ ಇತ್ತೀಚೆಗೆ ಪತ್ರಕರ್ತರನ್ನು ಕೋವಿಡ್ ಫ್ರಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಿ ಕೇವಲ ಲಸಿಕೆಗೆ ಮಾತ್ರ ಸೀಮಿತಗೊಳಿಸಿದಂತೆ ಮೇಲ್ನೋಟಕ್ಕೆ ಪ್ರತಿಯೊಬ್ಬ ಪತ್ರಕರ್ತರಿಗೆ ಭಾಸವಾಗುತ್ತಿದೆ. ಕೊರೋನಾ ವಾರಿಯರ್ಸ್ ಗೆ ನೀಡುವಂತೆ ವಿಮಾ ಪರಿಹಾರವನ್ನು ಪತ್ರಕರ್ತರುಗಳ ಕುಟುಂಬಕ್ಕೂ ವಿಸ್ತರಿಸಬೇಕು. ಬಳ್ಳಾರಿ ಜಿಲ್ಲಾ ಜೊತೆಗೆ ವಿಜಯನಗರದ ಜವಾಬ್ದಾರಿಯನ್ನು ಹೊತ್ತಿರುವ ಲಕ್ಷ್ಮಿ ಪುತ್ರ ರಾದ ತಾವುಗಳು ಪ್ರತಿನಿಧಿಸುವ ಈ ಹನ್ನೊಂದು ತಾಲೂಕುಗಳಲ್ಲಿ (ಬಳ್ಳಾರಿ,ಸಿರುಗುಪ್ಪ,ಕುರುಗೋಡು,ಕಂಪ್ಲಿ,ಸಂಡೂರು,ಹೊಸಪೇಟೆ,ಹಗರಿಬೊಮ್ಮನಹಳ್ಳಿ,ಕೂಡ್ಲಿಗಿ,ಕೊಟ್ಟೂರು,ಹೂವಿನಹಡಗಲಿ ಹಾಗೂ ಹರಪನಹಳ್ಳಿ) 400 ಪತ್ರಕರ್ತರಿದ್ದಾರೆ. ಈ ಎಲ್ಲಾ ಪತ್ರಕರ್ತರ ಕುಟುಂಬಗಳು ಇಂದು ತೀವ್ರ ಆರ್ಥಿಕ ಸಂಕಷ್ಟದ ಜೊತೆಗೆ ಜೀವ ಹಾಗೂ ಜೀವನ ಸವೆಸಲು ಬಹಳ ನೋವು ಪಡುತ್ತಿದ್ದಾರೆ. ಕೆಲ ಬೆರಳೆಣಿಕೆಯ ಪ್ರಮುಖ ದಿನಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿ ಮಾಡುವಂತವರು ಮಾತ್ರವೇ ಪತ್ರಕರ್ತರಾ ಅಥವಾ ವಾರ್ತಾ ಇಲಾಖೆಯ ಪತ್ರಕರ್ತರ ಮಾಧ್ಯಮ ಪತ್ರ ಪಡೆದಂತವರು ಮಾತ್ರನಾ ಎಂಬಂತ ಯಕ್ಷ ಪ್ರಶ್ನೆ ಪ್ರತಿಯೊಬ್ಬರನ್ನು ಇಂದು ಕಾಡುತ್ತಿದೆ. ರಾಜ್ಯ ಸರ್ಕಾರ ಹಾಗೂ ವಾರ್ತಾ ಇಲಾಖೆಯವರು, ಅಕ್ರಿಡೇಷನ್ ಹೊಂದಿರುವಂತ ಪತ್ರಕರ್ತರನ್ನು ಮಾತ್ರ ಪತ್ರಕರ್ತರೆಂದು ಪರಿಗಣಿಸಿದೆ. ರಾಜ್ಯದಲ್ಲಿ ಹನ್ನೆರೆಡು ಸಾವಿರ ಪತ್ರಕರ್ತರಲ್ಲಿ ಕೇವಲ ಒಂದು ಸಾವಿರದ ಐದುನೂರು ಪತ್ರಕರ್ತರಿಗೆ ಮಾತ್ರ ಪತ್ರಕರ್ತರ ಮಾನ್ಯತಾ ಪತ್ರ(Accridation card) ವನ್ನು ನೀಡಿ ತಾರತಮ್ಯ ಅನುಸರಿಸಿದೆ. ಜಿಲ್ಲೆಗೆ ಸಂಬಂಧ ಪಟ್ಟಂತೆ 400 ಜನ ಪತ್ರಕರ್ತರಲ್ಲಿ ಕೇವಲ 40 ಜನ ಪತ್ರಕರ್ತರಿಗೆ ಮಾತ್ರ ಬಳ್ಳಾರಿ ವಾರ್ತಾ ಇಲಾಖೆಯ ಮಾನ್ಯತಾ ಪಟ್ಟಿಯಲ್ಲಿ ಹೆಸರು ನಮೂದಾಗಿದೆ. ರಾಜ್ಯ ಮಟ್ಟದ ಪತ್ರಿಕೆ,ಪ್ರಾದೇಶಿಕ,ಜಿಲ್ಲಾ ಮಟ್ಟದ ಜೊತೆಗೆ ಮಾಸಿಕ ,ಪಾಕ್ಷಿಕ,ವಾರ ಪತ್ರಿಕೆಗಳ ಸಂಪಾದಕರು,ವರದಿಗಾರರು ತಮ್ಮದೆ ಆದ ಹಿತಿಮಿತಿಯಲ್ಲಿ ಸಮಾಜವನ್ನು ಎಚ್ಚರಿಸುವುದರ ಜೊತೆಗೆ ಪ್ರಸ್ತುತ ಕೋವಿಡ್ ಸಂದರ್ಭದಲ್ಲಂತೂ ತಮ್ಮ ಪ್ರಾಣದ ಹಂಗನ್ನು ತೊರೆದು ಸಮಾಜಕ್ಕೆ ಬೆಳಕನ್ನು ಚೆಲ್ಲುತ್ತಾ ತಮ್ಮ ಬುಡದಲ್ಲಿ ಕತ್ತಲನ್ನಾವರಿಸಿದ್ದರೂ ಲೆಕ್ಕಿಸದೆ ಸಾಗುತ್ತಿರುವ ಈ ಸಂದರ್ಭದಲ್ಲಿ ತಾವುಗಳು ಉಸ್ತುವಾರಿ ಮಂತ್ರಿಯಾಗಿರುವುದರಿಂದ ಪತ್ರಕರ್ತರ ಇಂದಿನ ನೋವಿಗೆ ಧ್ವನಿಯಾಗಿ ಬೆಳಕು ಚೆಲ್ಲುತ್ತಾರೆಂಬ ಆಶಾಮನೋಭಾವದೊಂದಿಗೆ. ಸಾವಿರಾರು ಕೋಟಿಗಳ ಒಡೆಯರಾಗಿರುವ ತಾವುಗಳು ನಾಲ್ಕು ನೂರು ಪತ್ರಕರ್ತರುಗಳಿಗೆ ತಲಾ ಹತ್ತುಸಾವಿರ ನೀಡದರೂ ನಲವತ್ತು ಲಕ್ಷ ರೂ ಗಳಾಗುತ್ತೇ. ಅಥವಾ ಜಿಲ್ಲಾ ಮಟ್ಟದ ಖನಿಜ ಕೆ.ಎಂ.ಎಫ್. ಫಂಡ್ ನಲ್ಲಾದದೂ ಪತ್ರಕರ್ತರುಗಳಿಗೆ ತಮ್ಮಿಂದ ಸಹಾಯ ಮಾಡುತ್ತೀರಿ ಎಂಬ ಆಶಯದೊಂದಿಗೆ.

ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯ ಕಾರ್ಯದರ್ಶಿಗಳು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ( ಗಮನಕ್ಕೆ:-ಜಿಲ್ಲಾ ಪದಾಧಿಕಾರಿಗಳು,ಕಾರ್ಯಕಾರಿಸಮಿತಿ ಸದಸ್ಯರುಗಳು ಹಾಗೂ ತಾಲೂಕು ಅಧ್ಯಕ್ಷರುಗಳು ಈ ಕೂಡಲೇ ಮಾನ್ಯ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ರವರಿಗೆ ಸಮಸ್ತ ಪತ್ರಕರ್ತರುಗಳಿಗೆ ಕೋವಿಡ್ ಪರಿಹಾರದ ಕುರಿತಂತೆ ಈ ಕೂಡಲೇ ಖುದ್ದಾಗಿ ಮನವಿ ಸಲ್ಲಿಸಲು ಕೋರಲಾಗಿದೆ.)…

ವರದಿ. ಮಂಜುನಾಥ್, ಎನ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend