ಆರೋಗ್ಯ ಭದ್ರತೆ ಒದಗಿಸಲು ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆ…!!!

Listen to this article

ಆರೋಗ್ಯ ಭದ್ರತೆ ಒದಗಿಸಲು ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆ

ಯಶಸ್ವಿನಿ ವಿಮಾ ಯೋಜನೆ ಪ್ರಾರಂಭಿಸಿ-ಹಳ್ಳಿಕೇರಿಮಠ

ಗದಗ.ರೈತರ ಯಶಸ್ವಿನಿ ವಿಮಾ ಯೋಜನೆಯನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಒಕ್ಕೊಟ ಮತ್ತು ಸಾರ್ವಜನಿಕ ಹಿತ ಚಿಂತನಾ ವೇದಿಕೆ ಗದಗ ಜಿಲ್ಲೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಾರ್ವಜನಿಕ ಹಿತ ಚಿಂತನಾ ವೇದಿಕೆ ಅಧ್ಯಕ್ಷರಾದ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಕರ್ನಾಟಕ ರಾಜ್ಯದಲ್ಲಿ ಕೃಷಿ ಸಮ್ಮಾನ್ ಯೋಜನೆಯಲ್ಲಿ 59,96,152.ಕುಟುಂಬಗಳು ಒಳಪಟ್ಟಿದ್ಧು ಅವುಗಳು ವ್ಯವಸಾಯವನ್ನು ನಂಬಿ ಜೀವನ ಮಾಡುತ್ತಿರುವ ಕುಟುಂಬಗಳಾಗಿದ್ಧು ಮತ್ತು ಕುಟುಂಬಗಳಿಗೆ ಒಳಪಡುವ 1.5 ಕೋಟಿ ಅವಲಂಭಿತ ಜನರಿದ್ಧು ಯಶಸ್ವಿನಿ ಕನಿಷ್ಠ ವಿಮಾ ಮೋತ್ತದಿಂದ ಇಂದಿನ ಆರ್ಥಿಕ ಸಂಕಷ್ಟದಿಂದ ಮತ್ತು ಯಾವುದೇ ಸೇವಾ ಭದ್ರತೆ ಇಲ್ಲದೆ ಇ ಶ್ರಮಿಕ ವರ್ಗದ ಜನರಿಗೆ ತುರ್ತಾಗಿ ನಾನಾ ರೀತಿಯ ರೋಗ ರುಜಿನಗಳಿಗೆ ಇ ಯೋಜನೆಯಿಂದ ಹಿಂದೆಲ್ಲಾ ಬಹಳ ಅನೂಕುಲವನ್ನು ರೈತ ಸಮುದಾಯದವರು ಪಡೆದಿರುತ್ತಾರೆ .ಇ ಹಿಂದೆ ಯಡಿಯೂರಪ್ಪ ನವರ ಕಾಲದಲ್ಲಿ ತುಮಕೂರಿನ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಪುನರ್ ಆರಂಭಿಸುವ ಭರವಸೆಯನ್ನು ಕೊಟ್ಟಿರುತ್ತಾರೆ.ಇಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಕೂಡಾ ವಿವಿಧ ಜಿಲ್ಲೆಗಳಿಗೆ ಬೇಟಿ ನೀಡಿದಾಗ ಭರವಸೆ ನೀಡಿದ್ಧಾರೆ ಕೂಡಲೇ ಇ ಯೋಜನೆ ಪುನ: ಆರಂಭಿಸಿದರೇ ರೈತ ಸಮುದಾಯಕ್ಕೆ ಅನೂಕುಲವಾಗುತ್ತದೆ ಎಂದರು.

ಜೈ ಭೀಮ ಸಂಘರ್ಷ ಸಮಿತಿಯ ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಗಣೇಶ ವಾಯ್ ಹುಬ್ಬಳ್ಳಿ ಮಾತನಾಡಿ ರೈತ ಸಮುದಾಯ ಹವಮಾನ ವೈಪರೀತ್ಯ, ಮಾರುಕಟ್ಟೆ ಏರಿಳಿತ ರೋಗ ರುಜಿನಗಳ ಬಾಧೆಯಿಂದ ನಷ್ಟ ಅನುಭವಿಸಿ ಬಳಲುತ್ತಿರುವ ಸಂದರ್ಭದಲ್ಲಿ ಇ ರೈತ ಸಮುದಾಯಕ್ಕೆ ಆರೋಗ್ಯ ಭದ್ರತೆಯಿಂದ ನೆಮ್ಮದಿಯಾಗಿ ಜೀವನ ನಡೆಸಲು ನಿಂತು ಹೋಗಿರುವ ರೈತ ಯಶಸ್ವಿನಿ ವಿಮಾ ಯೋಜನೆಯನ್ನು ಜಾರಿಗೆಗೊಳಿಸುವ ಮೂಲಕ ಇ ಬಜೆಟ್‌ ನಲ್ಲಿ ಅನುದಾನವನ್ನು ಬಿಡುಗಡೆಗೊಳಿಸಿ ಇ ಯೋಜನೆಯನ್ನು ಘೋಸಿಸಬೆಕೆಂದು ಆಗ್ರಹ ಮಾಡಿದರು.

ಈ ಸಂದರ್ಭದಲ್ಲಿ ಆರ್ ವಿ ಶೆಟ್ಟರ್ , ರಾಷ್ಟ್ರೀಲ್ ಜೋಸೆಪ್ , ಟಿ.ಮಂಜುನಾಥ, ಶಿವು ಕಡಿದಾಳ , ಬಸವರಾಜ ಬಾದಾಮಿ ,ಶ್ರೀ ಕಾಂತ ಹಲವಾಗಲಿ,ಹೇಮಂತಕುಮಾರ,ಮಹೇಶ ಹ ಕೆರಕಲಮಟ್ಟಿ, ಮಹೇಶ ಹ ಹೊಂಬಳ, ಚಂದ್ರು ಮುದೇನಗುಡಿ, ಮಂಜು ಆರಟ್ಟಿ ,ಮಂಜುನಾಥ ಹೊಂಬಳ, ಹನುಮಪ್ಪ ಅಂದಪ್ಪನವರ, ಬಸಪ್ಪ ಹದ್ಲಿ,ಮಲ್ಲಪ್ಪ ಹೂಗಾರ, ಮುದಿಯಪ್ಪ ಬಸರಕೋಡ ಸೇರಿದಂತೆ ಮುಂತಾದವರು ಪಾಲ್ಗೋಂಡಿದ್ಧರು..

u

ವರದಿ. ಬಸವರಾಜ್. ಗದಗ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend