ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರೆವೆರಿಸಿದರು…!!!

Listen to this article

ದಿನಾಂಕ 29-04-2021 ರಂದು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಸಿಡೇಗಲ್ ಹಾಗೂ ಕುದುರೆಡವೂ ಗ್ರಾಮಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಕೂಡ್ಲಗಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರೆವೆರಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಏ.29.ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೆಡೆಯ ಬೇಕಿದ್ದ 49 ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಈ ಸಲ ಕರೋನಾ ಕಾರಣದದಿಂದ ಜೋಡಿಗಳ ಒಪ್ಪಿಗೆಯಂತೆ ಅವರವರ ಊರುಗಳಲ್ಲಿಯೇ ನೆರವೆರಿಸಲಾಯಿತು . ನೋಂದಾಯಿತ ಜೋಡಿಗೆ ತಾಳಿ. ಸಹಿತ . ಮಂಗಳ ಸೂತ್ರ. ಸೀರೆ .ದೋತಿ .ಶಲ್ಯದ. ಉಡುಗೋರೆ ಯ ಎಲ್ಲಾ ವೆಚ್ಚವನ್ನು ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರೇಸ್ಟ್ .ವತಿಯಿಂದ ವಿವಾಹದ ಖರ್ಚು ನಿಭಾಯಿಸಲು ವಧು-ವರರಿಗೆ ತಲಾ 10.000 ರೂ ವನ್ನು ಧರ್ಮಸ್ಥಳ ದಿಂದ ಒದಗಿಸಲಾಯಿತು.ಶ್ರೀ ಕ್ಷೇತ್ರದ ಪರಮ ಪೂಜ್ಯರಾದ ಡಾ.ವೀರೇಂದ್ರ ಹೆಗ್ಗಡೆ .ಯವರು ಕಳುಹಿಸಿ ಕೋಟ್ಟಿರುವ ಉಡುಗೋರೆಯನ್ನು ವಧು-ವರರಿಗೆ ನೀಡಿ ಶುಭ ಹಾರೈಸಲಾಯಿತು.
ಆರ್ಥಿಕವಾಗಿ ಹಿಂದುಳಿದವರಿಗಾಗಿ ಹಾಗೂ ದುಂಧು ವೆಚ್ಚ ತಡೆಯುವು ಉದ್ದೇಶದಿಂದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು 1972 ರಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿದರು .ಈ ತನಕ 12.262.ಜೋಡಿಗೆ ಮದುವೆಯಾಗಿದೆ.ದಿನಾಂಕ .29-4-2021 ರಂದು ಗುರುವಾರದಂದು ರಾಜ್ಯಾದ್ಯಂತ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 121 ಜೋಡಿಗಳು ಸಪ್ತಪದಿ ತುಳಿದರು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು.ಹೆಗ್ಗಡೆಯವರಿಗೆ ವಿಡಿಯೋ ಸಂದೇಶ ಕಳುಹಿಸಿ ನೂತನ ದಂಪತಿಯನ್ನು ಆರ್ಶೀವಾದಿಸಿದರು. ಈ ಸಂಧರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಯೋಜನಾಧಿಕಾರಿ.ಮಂಜುನಾಥ್.ಗುಡೇಕೋಟೆ ವಲಯದ ಮೆಲ್ವೀಚಾರಕರಾದ.ಕೆ.ಕರಿಯಪ್ಪ.ಯೋಜನೆಯ ಕೃಷಿ ಆಧಿಕಾರಿ ಮಹಾಲಿಂಗಯ್ಯ.ಗುಡೇಕೋಟೆ ವಲಯದ ಕೃಷಿಯಂತ್ರಧಾರೆ ಇಲಾಖೆಯ ವ್ಯವಸ್ಥಾಪಕರಾರ ಮಂಜುನಾಥ್ .ವಲಯದ ಸೇವಾ ಪ್ರತಿನಿಧಿಗಳು.ಊರಿನ ಮುಖಂಡರು ಉಪಸ್ಥಿತರಿದ್ದರು..

ವರದಿ, ಡಿ, ಎಂ, ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend