ಬಿಜೆಪಿ ಆಡಳಿತದಿಂದ ಬೇಸತ್ತ ಜನರು ತಕ್ಕ ಪಾಠ ಕಲಿಸಿದ್ದಾರೆ-ಕಾಂಗ್ರೆಸ್ ಜಯಭೇರಿಗೆ ಪಾತ್ರರಾಗಿದ್ದಾರೆ-ಶಾಸಕ ಬಿ.ನಾಗೇಂದ್ರ…!!!

Listen to this article

*ಬಿಜೆಪಿ ಆಡಳಿತದಿಂದ ಬೇಸತ್ತ ಜನರು ತಕ್ಕ ಪಾಠ ಕಲಿಸಿದ್ದಾರೆ-ಕಾಂಗ್ರೆಸ್ ಜಯಭೇರಿಗೆ ಪಾತ್ರರಾಗಿದ್ದಾರೆ-ಶಾಸಕ ನಾಗೇಂದ್ರ*
ಬಳ್ಳಾರಿ:ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿರುವ ಬಗ್ಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಮಾದ್ಯಮದೊಂದಿಗೆ ಮಾತನಾಡಿದ ಅವರು ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿ. ಬಿಜೆಪಿ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಇದೆ ಎಂದು ನಾನು ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೇ ಹೇಳಿದ್ದೆ. ಜನ ಬೆಲೆ ಏರಿಕೆ, ರೇಷನ್ ಖಡಿತ, ಫಾರಂ 2 ನೀಡುವಲ್ಲಿ ಜನತೆಗೆ ಕಿರುಕುಳ, ಕರೋನಾ ಸಂಕಷ್ಟದಲ್ಲಿ ಸಾಮಾನ್ಯ ಜನತಗೆ ನೆರವಾಗದಿರುವುದು, ಗ್ಯಾಸ್ ಸಬ್ಸಿಡಿ ಖಡಿತ ಮೊದಲಾದ ಕಾರಣದಿಂದ ಬೇಸತ್ತು ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದರು.
ನನ್ನ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ 11 ವಾರ್ಡಿನಲ್ಲಿ 9 ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಒಂದು ವಾರ್ಡಿನಲ್ಲಿ ಪಕ್ಷೇತರರು ಸಹ ನಮ್ಮಪಕ್ಷದವರೇ ಆಗಿದ್ದಾರೆ ಎಂದರು.ಚುನಾವಣಾ ಫಲಿತಾಂಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕರೆ ಮಾಡಿ ಸಂತಸ ವ್ಯಕ್ತಪಡಿಸಿದ್ದು ಮುಂದಿನ ಕಾರ್ಯಗಳಿಗೆ ನಿನೇ ಲೀಡ್ ತೆಗೆದುಕೊಳ್ಳುವಂತೆ ಹೇಳಿದ್ದಾರೆಂದು ತಿಳಿಸಿದರು.ಒಟ್ಟಾರೆ ಪಕ್ಷದ ಮುಖಂಡರ ಸಾಮೂಹಿಕ ಪ್ರಯತ್ನ, ಮತದಾರರ ಒಲವಿನಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವಂತಾಗಿದೆ ಎಂದರು. ಈಸಂದರ್ಭದಲ್ಲಿ ಗೆಲುವನ್ನು ನೀಡಿದ ಮತ ಭಾಂದವರಿಗೆ ಅಭಿನಂದನೆಗಳನ್ನು ತಿಳಿಸಿದರು. ಈಸಂಧರ್ಭದಲ್ಲಿ ಗೆಲುವು ಸಾಧಿಸಿದ ಸದಸ್ಯರು, ಮುಖಂಡರು,ಪಕ್ಷದ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.
ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆ ಮತ ಎಣಿಕೆ
ಬಳ್ಳಾರಿ ಮಹಾನಗರ ಪಾಲಿಕೆ ಕಾಂಗ್ರೆಸ್ ವಶಕ್ಕೆ
ಬಳ್ಳಾರಿ,ಏ.30:ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆಯು ಶುಕ್ರವಾರ ಅತ್ಯಂತ ಸುಸೂತ್ರವಾಗಿ ಜರುಗಿತು.
ಅಭ್ಯರ್ಥಿಗಳ ಸಮಕ್ಷಮದಲ್ಲಿ ಸ್ಟಾçಂಗ್ ರೂಂಗಳನ್ನು ಒಪನ್ ಮಾಡಲಾಯಿತು. 39 ವಾರ್ಡ್ಗಳ ಮತ ಎಣಿಕೆಯು ಒಟ್ಟು 8 ಕೋಣೆಗಳಲ್ಲಿ 5 ಸುತ್ತುಗಳಲ್ಲಿ ನಡೆಯಿತು. ಒಟ್ಟು 39 ವಾರ್ಡ್ಗಳಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಪಡೆದರೆ, ಬಿಜೆಪಿಯು 13 ಸ್ಥಾನಗಳನ್ನು ಪಡೆಯಿತು. 05 ಜನ ಪಕ್ಷೇತರರು ಗೆಲುವಿನ ನಗೆಬೀರಿದ್ದಾರೆ.

*ವಿಜೇತ ಅಭ್ಯರ್ಥಿಗಳ ವಿವರ ಇಂತಿದೆ: 1ನೇ ವಾರ್ಡ್ ವಿವರ:-* ವಿಜೇತ ಅಭ್ಯರ್ಥಿ ಹನುಮಂತ(ಬಿಜೆಪಿ) ಪಡೆದ ಮತಗಳು:2606, ಸಮೀಪದ ಪ್ರತಿಸ್ಪರ್ಧಿ ಕೆ.ವೀರೇಂದ್ರ ಕುಮಾರ್(ಕಾಂಗ್ರೆಸ್)ಪಡೆದ ಮತಗಳು 1714, 892 ಮತಗಳ ಅಂತರದ ಜಯ.
2ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಕೆ.ಈರಮ್ಮ ಸೂರಿ(ಬಿಜೆಪಿ) ಪಡೆದ ಮತಗಳು: 1446, ಸಮೀಪ ಅಭ್ಯರ್ಥಿ ಜವೇರಿಯಾ ಸಾಬ್ (ಕಾಂಗ್ರೆಸ್) ಪಡೆದ ಮತಗಳು:1300, 146 ಮತಗಳ ಅಂತರದಿAದ ಜಯಿಸಿದ್ದಾರೆ.
3ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ಪ್ರಭAಜನ ಕುಮಾರ್(ಪಕ್ಷೇತರ ಅಭ್ಯರ್ಥಿ), ಪಡೆದ ಮತಗಳು:4110,ಸಮೀಪದ ಅಭ್ಯರ್ಥಿ ಬಸವರಾಜ ಗೌಡ ಬಿ(ಕಾಂಗ್ರೆಸ್) ಪಡೆದ ಮತಗಳು:1308, 2802 ಮತಗಳ ಅಂತರದಿAದ ಜಯ.
4ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಡಿ.ತ್ರಿವೇಣಿ(ಕಾಂಗ್ರೆಸ್) ಪಡೆದ ಮತಗಳು:1791, ಸಮೀಪದ ಪ್ರತಿಸ್ಪರ್ಧಿ ವನಿತಾ ಷ(ಬಿಜೆಪಿ) ಪಡೆದ ಮತಗಳು:1290, 501 ಮತಗಳ ಅಂತರದ ಜಯ.
5ನೇ ವಾರ್ಡ್ನ ವಿವರ: ವಿಜೇತ ಅಭ್ಯರ್ಥಿ ಹೆಚ್.ರಾಜಶೇಖರ(ಕಾಂಗ್ರೆಸ್) ಪಡೆದ ಮತಗಳು:2699, ಸಮೀಪದ ಪ್ರತಿಸ್ಪರ್ಧಿ ವೆಂಕಟೇಶ್(ಬಿಜೆಪಿ) ಪಡೆದ ಮತಗಳು:2602, 97 ಮತಗಳ ಅಂತರದ ಜಯ.
6ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ಕೆ.ಪದ್ಮರೋಜ(ಕಾAಗ್ರೆಸ್) ಪಡೆದ ಮತಗಳು:2853, ಸಮೀಪ ಪ್ರತಿಸ್ಪರ್ಧಿ ಹುಂಡೇಕರ್ ಶ್ರೀವರ್ಧಿನಿ(ಬಿಜೆಪಿ),ಪಡೆದ ಮತಗಳು:1871, 982 ಮತಗಳ ಅಂತರದ ಜಯ.
7ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಉಮಾದೇವಿ ಶಿವರಾಜ(ಕಾಂಗ್ರೆಸ್) ಪಡೆದ ಮತಗಳು:3859,ಸಮೀಪದ ಪ್ರತಿಸ್ಪರ್ಧಿ ಲಕ್ಷಿö್ಮ ಹೊನ್ನೂರಪ್ಪ(ಬಿಜೆಪಿ) ಪಡೆದ ಮತಗಳು 1874, 1985 ಮತಗಳ ಅಂತರದ ಜಯ.
8ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ರಾಮಾAಜನೇಯುಲು(ಕಾAಗ್ರೆಸ್)ಪಡೆದ ಮತಗಳು:2794, ಸಮೀಪದ ಪ್ರತಿಸ್ಪರ್ಧಿ ವೈ.ಬಿ.ಸೀತಾರಾಮ್(ಬಿಜೆಪಿ) ಪಡೆದ ಮತಗಳು:2152, 642 ಮತಗಳ ಅಂತರದ ಜಯ.
9ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಜಬ್ಬರ್ ಸಾಬ್ (ಕಾಂಗ್ರೆಸ್)ಪಡೆದ ಮತಗಳು:2626, ಸಮೀಪದ ಪ್ರತಿಸ್ಪರ್ಧಿ ಎಸ್.ಶರ್ಮಾಸ್(ಬಿಜೆಪಿ)ಪಡೆದ ಮತಗಳು:1480, 1146 ಮತಗಳ ಅಂತರದ ಜಯ.
10ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ತಿಲಕ್ ಕುಮಾರ್(ಬಿಜೆಪಿ)ಪಡೆದ ಮತಗಳು:4050, ಸಮೀಪದ ಪ್ರತಿಸ್ಪರ್ಧಿ ವಿ.ಎಸ್.ಮರಿದೇವಯ್ಯ(ಕಾಂಗ್ರೆಸ್)ಪಡೆದ ಮತಗಳು:2064, 1986 ಮತಗಳ ಅಂತರದ ಜಯ.
11ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎನ್.ಗೋವೀದರಾಜುಲು(ಬಿಜೆಪಿ)ಪಡೆದ ಮತಗಳು 2383,ಸಮೀಪದ ಪ್ರತಿಸ್ಪರ್ಧಿ ಟಿ.ಲೋಕೇಶ್(ಕಾಂಗ್ರೆಸ್)ಪಡೆದ ಮತಗಳು:1865, 518 ಮತಗಳ ಅಂತರದ ಜಯ.
12ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಕೆ.ಎ.ಚೇತನ ವೇಮಣ್ಣ(ಬಿಜೆಪಿ) ಪಡೆದ ಮತಗಳು:1422, ಸಮೀಪದ ಪ್ರತಿಸ್ಪರ್ಧಿ ಕೆ.ಜ್ಯೋತಿ(ಕಾಂಗ್ರೆಸ್) ಪಡೆದ ಮತಗಳು:1375, 47 ಮತಗಳ ಅಂತರದ ಜಯ.
13ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಸಿ.ಇಬ್ರಾಹಿಂ(ಬಿಜೆಪಿ) ಪಡೆದ ಮತಗಳ ವಿವರ 3203, ಸಮೀಪದ ಪ್ರತಿಸ್ಪರ್ಧಿ ಕೆ.ಮಾರುತಿ(ಕಾಂಗ್ರೆಸ್) ಪಡೆದ ಮತಗಳು 3159, 44 ಮತಗಳ ಅಂತರದ ಜಯ.
14ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಬಿ.ರತ್ನಮ್ಮ(ಕಾಂಗ್ರೆಸ್) ಪಡೆದ ಮತಗಳು 2709,ಸಮೀಪದ ಪ್ರತಿಸ್ಪರ್ಧಿ ಜಿ.ಎಂ.ಕವಿತ(ಬಿಜೆಪಿ) ಪಡೆದ ಮತಗಳು:1223, 1486 ಮತಗಳ ಅಂತರದ ಜಯ.
15ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ನೂರ್ ಮೊಹಮ್ಮದ್ (ಪಕ್ಷೇತರ) ಪಡೆದ ಮತಗಳು: 1801, ಸಮೀಪದ ಪ್ರತಿಸ್ಪರ್ಧಿ ಬಿ.ಕವಿತಾ ನಾಗಭೂಷಣ(ಬಿಜೆಪಿ) ಪಡೆದ ಮತಗಳು:1013, 788 ಮತಗಳ ಅಂತರದ ಜಯ.
16ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ನಾಗರತ್ನ(ಬಿಜೆಪಿ)ಪಡೆದ ಮತಗಳು:2661,ಸಮೀಪದ ಪ್ರತಿಸ್ಪರ್ಧಿ ಕೌಶಲ್ಯ.ವಿ.(ಕಾಂಗ್ರೆಸ್) ಪಡೆದ ಮತಗಳು:2363, 298 ಮತಗಳ ಅಂತರದ ಜಯ.
17ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಕವಿತಾ ಕೆ.ಹೊನ್ನಪ್ಪ(ಪಕ್ಷೇತರ)ಪಡೆದ ಮತಗಳು:2116, ಸಮೀಪದ ಪ್ರತಿಸ್ಪರ್ಧಿ ಅರುಣಾ ಬಿ.ಕೆ.(ಕಾಂಗ್ರೆಸ್) ಪಡೆದ ಮತಗಳು:2051, 65 ಮತಗಳ ಅಂತರದ ಜಯ.
18ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ನAದೀಶ್(ಕಾAಗ್ರೆಸ್)ಪಡೆದ ಮತಗಳು:2509,ಸಮೀಪದ ಪ್ರತಿಸ್ಪರ್ಧಿ ಗಾಲಿ ಶ್ರವಣ್ ಕುಮಾರ್ ರೆಡ್ಡಿ(ಬಿಜೆಪಿ) ಪಡೆದ ಮತಗಳು 2376, 133 ಮತಗಳ ಅಂತರದ ಗೆಲುವು.
19ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಕೆ.ಎಸ್.ಆಶೋಕ್ ಕುಮಾರ್ (ಬಿಜೆಪಿ) ಪಡೆದ ಮತಗಳು:3725, ಸಮೀಪದ ಅಭ್ಯರ್ಥಿ ಮುರುಳಿ(ಕಾಂಗ್ರೆಸ್) ಪಡೆದ ಮತಗಳು 702, 3023 ಮತಗಳ ಅಂತರದ ಜಯ.
20ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಪಿ.ವಿವೇಕ್(ವಿಕ್ಕಿ) (ಕಾಂಗ್ರೆಸ್) ಪಡೆದ ಮತಗಳು:2825 ಸಮೀಪದ ಪ್ರತಿಸ್ಪರ್ಧಿ ಕೆ.ಕೃಷ್ಣಾ(ಬಿಜೆಪಿ) ಪಡೆದ ಮತಗಳು:2232, 593 ಮತಗಳ ಅಂತರದ ಜಯ.
21ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಸುರೇಖಾ ಮಲ್ಲನಗೌಡ(ಬಿಜೆಪಿ) ಪಡೆದ ಮತಗಳು:2559, ಸಮೀಪದ ಪ್ರತಿಸ್ಪರ್ಧಿ ಲತಾ ಚಾನಾಳ್ ಶೇಖರ್(ಕಾಂಗ್ರೆಸ್) ಪಡೆದ ಮತಗಳು:1500, 1059 ಮತಗಳ ಅಂತರದ ಗೆಲುವು.
22ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಹನುಮಂತಪ್ಪ ಕೆ.(ಬಿಜೆಪಿ) ಪಡೆದ ಮತಗಳು:2370, ಸಮೀಪದ ಪ್ರತಿಸ್ಪರ್ಧಿ ಚಂದ್ರಶೇಖರ್(ಪಕ್ಷೇತರ) ಪಡೆದ ಮತಗಳು:846, 1524 ಮತಗಳ ಅಂತರದ ಜಯ.
23ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಪಿ.ಗಾದೆಪ್ಪ(ಕಾಂಗ್ರೆಸ್) ಪಡೆದ ಮತಗಳು:2663, ಸಮೀಪದ ಪ್ರತಿಸ್ಪರ್ಧಿ ಜಿ.ಶ್ರೀನಿವಾಸ್(ಬಿಜೆಪಿ) ಪಡೆದ ಮತಗಳು 1928, 735 ಮತಗಳ ಅಂತರದ ಜಯ.
24ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಶ್ರೀನಿವಾಸ್ ಮೋತ್ಕರ್(ಬಿಜೆಪಿ) ಪಡೆದ ಮತಗಳು:1705, ಸಮೀಪದ ಪ್ರತಿಸ್ಪರ್ಧಿ ನಾರಾ ವಿನಯ್ ಕುಮಾರ್ ರೆಡ್ಡಿ(ಕಾಂಗ್ರೆಸ್) ಪಡೆದ ಮತಗಳು:1333, 372 ಮತಗಳ ಅಂತರದ ಜಯ.
25ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ಗೋವಿAದರಾಜುಲು(ಬಿಜೆಪಿ) ಪಡೆದ ಮತಗಳು:2178 ಸಮೀಪದ ಪ್ರತಿಸ್ಪರ್ಧಿ ಅಕ್ಬರ್ (ಕಾಂಗ್ರೆಸ್) ಪಡೆದ ಮತಗಳು 1917, 261 ಮತಗಳ ಅಂತರದ ಜಯ.
26ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಡಿ.ಸುಕುಂ(ಕಾAಗ್ರೆಸ್) ಪಡೆದ ಮತಗಳು:3677, ಸಮೀಪದ ಪ್ರತಿಸ್ಪರ್ಧಿ ಜಿ.ಮಂಜುಳಾ (ಬಿಜೆಪಿ) ಪಡೆದ ಮತಗಳು:1772, 1905 ಮತಗಳ ಅಂತರದ ಜಯ
27ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ನಿಯಾಜ್ ಅಹ್ಮದ್ ಟಿ (ಕಾಂಗ್ರೆಸ್) ಪಡೆದ ಮತಗಳು:3255, ಸಮೀಪದ ಪ್ರತಿಸ್ಪರ್ಧಿ ಎಸ್ ಮಹಮ್ಮದ್(ಬಿಜೆಪಿ) ಪಡೆದ ಮತಗಳು: 1013 2242 ಮತಗಳ ಅಂತರದ ಜಯ
28ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಮುಬೀನಾ ಬಿ(ಕಾಂಗ್ರೆಸ್) ಪಡೆದ ಮತಗಳು 3019, ಸಮೀಪದ ಪ್ರತಿಸ್ಪರ್ಧಿ ಸಾಹೇರಾಬಿ (ಬಿಜೆಪಿ) ಪಡೆದ ಮತಗಳು:1221, 1898 ಮತಗಳ ಅಂತರದ ಜಯ
29ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಜಿ.ಶಿಲ್ಪಾ(ಕಾಂಗ್ರೆಸ್) ಪಡೆದ ಮತಗಳು:4557 ಸಮೀಪದ ಪ್ರತಿಸ್ಪರ್ಧಿ ಗಂಗಮ್ಮ ಚೌದರಿ (ಬಿಜೆಪಿ) ಪಡೆದ ಮತಗಳು:2097, 2460 ಮತಗಳ ಅಂತರದ ಜಯ.
30ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎನ್.ಎಂ.ಡಿ.ಆಸೀಫ್ ಭಾಷಾ(ಕಾಂಗ್ರೆಸ್) ಪಡೆದ ಮತಗಳು:4055, ಸಮೀಪದ ಪ್ರತಿಸ್ಪರ್ಧಿ ವಿ.ನಾಗರಾಜ (ಬಿಜೆಪಿ) ಪಡೆದ ಮತಗಳು:1519, 2536 ಮತಗಳ ಅಂತರದ ಜಯ.
31ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಶ್ವೇತಾ ಬಿ(ಕಾಂಗ್ರೆಸ್) ಪಡೆದ ಮತಗಳು:2269, ಸಮೀಪದ ಪ್ರತಿಸ್ಪರ್ಧಿ ಜೆ.ಉಮಾದೇವಿ (ಬಿಜೆಪಿ) ಪಡೆದ ಮತಗಳು:1050, 1219 ಮತಗಳ ಅಂತರದ ಜಯ
32ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಕೆ.ಮಂಜುಳಾ(ಸ್ವತAತ್ರ) ಪಡೆದ ಮತಗಳು:3442, ಸಮೀಪದ ಪ್ರತಿಸ್ಪರ್ಧಿ ಕೆ.ಎಂ.ಗAಗಮ್ಮ(ಬಿಜೆಪಿ) ಪಡೆದ ಮತಗಳು:2313, 1129 ಮತಗಳ ಅಂತರದ ಜಯ.
33ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಬಿ.ಜಾನಕಿ(ಕಾಂಗ್ರೆಸ್) ಪಡೆದ ಮತಗಳು:2046, ಸಮೀಪದ ಪ್ರತಿಸ್ಪರ್ಧಿ ಬಿ.ಸುನಿತಾ (ಬಿಜೆಪಿ) ಪಡೆದ ಮತಗಳು:1784, 262 ಮತಗಳ ಅಂತರದ ಜಯ
34ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ರಾಜೇಶ್ವರಿ(ಕಾAಗ್ರೆಸ್) ಪಡೆದ ಮತಗಳು2762, ಸಮೀಪದ ಪ್ರತಿಸ್ಪರ್ಧಿ ಪಿ.ಉಜ್ವಲ(ಬಿಜೆಪಿ) ಪಡೆದ ಮತಗಳು:1425, 1337 ಮತಗಳ ಅಂತರದ ಜಯ.
35ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ವಿ.ಶ್ರೀನಿವಾಸುಲು(ಸ್ವತಂತ್ರ) ಪಡೆದ ಮತಗಳು:3189, ಸಮೀಪದ ಪ್ರತಿಸ್ಪರ್ಧಿ ಹೆಚ್.ಸಿದ್ದೇಶ್(ಕಾಂಗ್ರೆಸ್) ಪಡೆದ ಮತಗಳು:1452, 1737 ಮತಗಳ ಅಂತರದ ಜಯ.
36ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಪಿ.ಕಲ್ಪನಾ (ಬಿಜೆಪಿ) ಪಡೆದ ಮತಗಳು:2640, ಸಮೀಪದ ಪ್ರತಿಸ್ಪರ್ಧಿ ಟಿ.ಸಂಜೀವಮ್ಮ(ಕಾAಗ್ರೆಸ್) ಪಡೆದ ಮತಗಳು:2189, 451 ಮತಗಳ ಅಂತರದ ಜಯ.
37ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಮಾಲನ್ ಬೀ(ಕಾಂಗ್ರೆಸ್) ಪಡೆದ ಮತಗಳು:2005, ಸಮೀಪದ ಪ್ರತಿಸ್ಪರ್ಧಿ ಹೇಮಾವತಿ (ಬಿಜೆಪಿ)ಪಡೆದ ಮತಗಳು 1992, 13 ಮತಗಳ ಅಂತರದ ಜಯ.
38ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ವಿ.ಕುಬೇರ(ಕಾಂಗ್ರೆಸ್) ಪಡೆದ ಮತಗಳು:3660, ಸಮೀಪದ ಪ್ರತಿಸ್ಪರ್ಧಿ ವಿ.ಅನೂಪ್ ಕುಮಾರ್(ಬಿಜೆಪಿ) ಪಡೆದ ಮತಗಳು:2151, 1509 ಮತಗಳ ಅಂತರದ ಜಯ.
39ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಪಿ.ಶಶಿಕಲಾ(ಕಾಂಗ್ರೆಸ್) ಪಡೆದ ಮತಗಳು:3006, ಸಮೀಪದ ಪ್ರತಿಸ್ಪರ್ಧಿ ಕೆ.ಉಮಾದೇವಿ (ಬಿಜೆಪಿ) ಪಡೆದ ಮತಗಳು:1620, 1386 ಮತಗಳ ಅಂತರದ ಜಯ ಸಾಧಿಸಿದ್ದಾರೆ…

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend