ಎತ್ತಿನ ಬಂಡಿ ಏರಿ ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು…!!!

Listen to this article

ಎತ್ತಿನ ಬಂಡಿ ಏರಿದ ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು
ಕನಕಗಿರಿ ಉತ್ಸವದ ಮೆರುಗು ಹೆಚ್ಚಿಸಿದ ಎತ್ತಿನ ಬಂಡಿ ಸಿಂಗಾರ ಸ್ಪರ್ಧೆ
ಕೊಪ್ಪಳ  ಕನಕಗಿರಿ ಉತ್ಸವ-2024ರ ಅಂಗವಾಗಿ ಎ.ಪಿ.ಎಮ್.ಸಿ ಆವರಣದಲ್ಲಿ ಮಾ.03ರಂದು ಆಯೋಜಿಸಲಾಗಿದ್ದ, ಎತ್ತಿನಬಂಡಿ ಸಿಂಗಾರ ಸ್ಪರ್ಧೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ಚಾಲನೆ ನೀಡಿದರು.
ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ರೈತರ ಸಂಗಾತಿ, ಉಳುಮೆಗೆ ಸಹಕಾರಿಯಾಗಿರುವ ವಿವಿಧ ದೇಶಿ ತಳಿಯ ಎತ್ತಿನಬಂಡಿ ಸಿಂಗಾರ ಸ್ಪರ್ಧೆಯು ಬಹಳ ಆಕರ್ಷಕವಾಗಿ ಪ್ರದರ್ಶನವಾಯಿತು. ಸ್ಪರ್ಧೆಯಲ್ಲಿ ಎತ್ತಿನಬಂಡಿಗಳ ಸಿಂಗಾರ ಪ್ರದರ್ಶನ ಜನಮನ ಸೂರೆಗೊಂಡಿತ್ತು.


ಸ್ಪರ್ಧೆಯಲ್ಲಿ ವಿವಿಧ ರೀತಿಯ ದೇಶಿ ತಳಿಯ ಎತ್ತಿನಬಂಡಿಗಳು ಪಾಲ್ಗೊಂಡಿದ್ದವು. ರೈತರು ತಮ್ಮ ಎತ್ತಿನಬಂಡಿಗಳಿಗೆ ಬಾಳೆಗೊನೆ, ಬಲೂನ್, ಗೆಜ್ಜೆ, ಮಗೋಡ, ಹಾಗೂ ಪುಷ್ಪಾಲಂಕಾರ ಮಾಡುವುದರ ಮೂಲಕ ಸಾರ್ವಜನಿಕರನ್ನು ತಮ್ಮತ್ತ ಗಮನಸೆಳೆದರು. ಮದುವನಗಿತ್ತಿಯ ಹಾಗೇ ಸಿಂಗಾರಗೊಂಡ ಎತ್ತು ಮತ್ತು ಬಂಡಿ ನೋಡುಗರ ಕಣ್ಣನ್ನು ಕಂಗೋಳಿಸುತ್ತಿದ್ದವು. ಜಿಲ್ಲಾ ಉಸ್ತುವಾರಿ ಸಚಿವರು ಅಲಂಕಾರಗೊಂಡ ಎತ್ತಿನಬಂಡಿ ಏರಿ, ಎತ್ತಿನಬಂಡಿ ಓಡಿಸಿದ್ದು, ಬಹಳ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಉತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷರಾದ ವಿಠ್ಠಲ್ ಜಾಬಗೌಡರ, ಕನಕಗಿರಿ ತಹಶೀಲ್ದಾರರಾದ ವಿಸ್ವನಾಥ ಮುರುಡಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಲವು ಗಣ್ಯರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು….

ವರದಿ. ಮಂಜುನಾಥ್ ಉಪ್ಪಾರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend