ಅಪ್ಪರ್ ಭದ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ತಹಸೀಲ್ದಾರ್ ಮನವಿ ಸಲ್ಲಿಸಿದ ರೈತರು….!!!

Listen to this article

ಅಪ್ಪರ್ ಭದ್ರ ನೀರಾವರಿಗೆ ಆಗ್ರಹಿಸಿ ಕೈಗೊಂಡ ಬಂದ್ ಯಶಸ್ವಿ : ೫೩೦೦ ಅನುದಾನ ಬಿಡುಗಡೆಗೆ ಆಗ್ರಹ : ಸರಕಾರಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ ರೈತರು. ವಾಹನ ಸಂಚಾರಕ್ಕೆ ಅನುಮಾಡಿದ ಪೊಲೀಸ್ ವಿರುದ್ದ ರೈತರ ಆಕ್ರೋಶ

ಹೊಳಲ್ಕೆರೆ : ಮಧ್ಯ ಕರ್ನಾಟಕ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಹೊಳಲ್ಕೆರೆ ಪಟ್ಟಣದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಹೊಳಲ್ಕೆರೆ ಬಂದ್ ನಡೆಸಿ ಪ್ರತಿಭಟನೆ ನಡೆಸಿ ನಡೆಸಲಾಯಿತು.

ಪಟ್ಟಣದ ಅಂಗಡಿ ಮುಂಗಟ್ಟು, ಹೋಟಲ್, ಗ್ಯಾರೇಜ್, ಬ್ಯಾಂಕ್, ಸರಕಾರಿ ಕಚೇರಿಗಳು, ಸಂಘ ಸಂಸ್ಥೇಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಬೆಂಬಲ ನೀಡಲಾಗಿತ್ತು. ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಾರ‍್ಯಕಲಾಪಗಳಿಂದ ಹೊರಗುಳಿದು ಬಂದ್‌ನಲ್ಲಿ ಭಾಗವಹಿಸಿ ಬಂದ್‌ಗೆ ಬೆಂಬಲ ನೀಡಲಾಗಿತ್ತು.

ಮುಂಜಾನೆಯ ಬಂದ್ ಇದ್ದ ಪರಿಣಾಮ ವಾಹನಗಳ ಸಂಚಾರ ಅಸ್ಥವ್ಯಸ್ಥಗೊಂಡಿತ್ತು. ಆಟೋ, ಟ್ಯಾಕ್ಸಿ, ಬಸ್ ಸಂಚಾರ ಸ್ಥಗೀತಗೊಂಡಿತ್ತು. ಪ್ರಯಾಣಿಕರು ವಾಹನಗಳ ಸೌಲಭ್ಯಗಳಿಲ್ಲಿದೆ ಪರದಾಡಿದರು. ಪಿಯು ಪರೀಕ್ಷೆ ತೊಂದರೆಯಾಗದಂತೆ ವಾಹನಗಳ ವ್ಯವಸ್ಥೇ ಕೈಗೊಳ್ಳಲಾಗಿತ್ತು. ಗಣಪತಿ ಸರ್ಕಲ್‌ ನಲ್ಲಿ ಮಾನವ ಸರಪಳಿ ರಚಿಸಿದ ರೈತರು, ವಕೀಲರು ಸರಕಾರದ ಯೋಜನೆ ಜಾರಿಗೆ ಸರಕಾರಕ್ಕೆ ಒತ್ತಾಯಿಸಿದರು.

ರೈತ ಸಂಘ ದಿಂದ ಪಟ್ಟಣದ ಗಣಪತಿ ಸರ್ಕಲ್‌ ನಲ್ಲಿ ಪ್ರತಿಭಟನೆ ಗೋಡಾರ ಹಾಕಿ ಬಂದ್ ಕೈಗೊಂಡಿದ್ದು, ವಿವಿಧ ಕಡೆಗಳಿಂದ ಆಗಮಿಸಿದ್ದ ಹತ್ತಾರು ಸಂಘಟನೆ ಮುಖಂಡರು ನಿರಾವರಿ ಯೋಜನೆ ಅನುಷ್ಠಾನ ಕುರಿತು ಮಾತನಾಡಿ, ಸರಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕೂಡಲೆ ಯೋಜನೆ ಜಾರಿಗೆ ತರಲು ಮುಂದಾಗಬೇಕೆಂದು ಒತ್ತಾಯಿಸಲಾಗಿತ್ತು. ಬಳಿಕ ತಹಸೀಲ್ದಾರ್ ಬೀಬಿ ಪಾತೀಮಗೆ ಮನವಿ ಪತ್ರ ಸಲ್ಲಿಸಲಾಗಿತ್ತು.

ಬಂದ್ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ೧೫ ವರ್ಷ ಕಳೆದರೂ ಅಪ್ಪರ್ ಭದ್ರಾ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಕೇಂದ್ರ ರಾಜ್ಯ ಸರ್ಕಾರದ ಜನವಿರೋದಿ ನೀತಿಯಿಂದ ಜಿಲ್ಲೆಗೆ ಅನ್ಯಾಯವಾಗಿದೆ. ಕೇಂದ್ರ ಸರಕಾರ ಭರವಸೆಯಂತೆ ೫೨೦೦ ಕೋಟಿ ಅನುದಾನ ತಕ್ಷಣವೇ ಬಿಡುಗಡೆ ಮಾಡಬೇಕು. ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷಿತನ ಹಾಗೂ ಭೀಕರ ಬರಗಾಲ ಚಿತ್ತದುರ್ಗ ಜಿಲ್ಲೆಯನ್ನ ಹಿಂದುಳಿಯುವಂತೆ ಮಾಡಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ತೊಂದರೆಯಾಗಿದೆ. ನಾವು ಕಳೆದ ೨೫ ದಿನಗಳಿಂದ ಸಂಸದರ ಕಚೇರಿ ಎದುರು ಹೋರಾಟ ನಡೆಸಿದ್ದೇವೆ. ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ ಬಂದ್ ಮಾಡಿದೆ. ಇಂದು ಇಲ್ಲಿ ಬಂದ್ ಮಾಡುವ ಮೂಲಕ ಯಶಸ್ವಿಯಾಗಿದೆ. ಸರ್ಕಾರ ಏನಾದರೂ ಎಚ್ಚೆತ್ತುಕೊಂಡು ನೀರಾವರಿ ಸೌಲಭ್ಯಕ್ಕೆ ಬೇಕಾದ ಹಣಕಾಸು ಸೌಲಭ್ಯವನ್ನು ಕಲ್ಪಿಸಿಕೊಡಬೇಕು. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಗೆ ನೀರನ್ನ ಹರಿಸಬೇಕು. ನಿರ್ಲಕ್ಷ ಮಾಡಿದ್ದಲ್ಲಿ ಕೇಂದ್ರ ಸರ್ಕಾರದ ಡಿ.ಆರ್.ಟಿ ಗೆ ಸರಬರಾಜು ಆಗುವ ವಾಣಿವಿಲಾಸ ಸಾಗರದ ನೀರನ್ನು ತಡೆಯುತ್ತೇವೆ. ಸರ್ಕಾರ ಎಂಥ ಕ್ರಮಗಳನ್ನು ರೈತರ ಮೇಲೆ ಕೈಗೊಂಡರು ಬಗ್ಗದೆ ಜಗ್ಗದೆ ಜೈಲಿಗೆ ಹೋದರು ಚಿಂತೆ ಇಲ್ಲ ಜಿಲ್ಲೆಯನ್ನು ನೀರಾವರಿಗೊಳಿಸಲು ಉಗ್ರರೂಪದ ಹೋರಾಟವನ್ನು ಕೈಗೊಳ್ಳಬೇಕಾಗಿದೆ ಎಂದು ಎಚ್ಚರಿಸಿದರು.

ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಲಿಂಗಾರೆಡ್ಡಿ ಮಾತನಾಡಿ, ಇಲ್ಲಿನ ರಾಜಕಾರಣಿಗಳು ಇಚ್ಚ ಶಕ್ತಿ ಕೊರತೆ ಹಿನ್ನೇಲೆ ಜಿಲ್ಲೆ ನೀರಾವರಿಯಾಗಿಲ್ಲ. ನೀರಾವರಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಎಚ್ಚರಿಸಲಾಗುತ್ತದೆ. ಕೇಂದ್ರ ಸರಕಾರ ೫೩೦೦ ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಜಿಲ್ಲೆಯನ್ನು ನೀರಾವರಿಗೊಳಿಸಬೇಕೆಂದು ಆಗ್ರಹಿಸಿದರು.

ನಿವೃತ್ತ ಪ್ರ‍್ರಾಚಾರ್ಯ ಯಾದವ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿರುವ ಕೈಲಾಗದ ಶಾಸಕರು, ಸಂಸದರ ದಿಂದಾಗಿ ಜಿಲ್ಲೆಯ ನೀರಾವರಿ ಯೋಜನೆ ಕುಂಠಿತಗೊಂಡಿದೆ. ಜನರ ಕಲ್ಯಾಣದ ವಿರೋಧಿಗಳು. ಬೇಜವಾಬ್ದಾರಿತನದಿಂದಾಗಿ ಯೋಜನೆಗೆ ಅನುದಾನ ಬಂದಿಲ್ಲ. ಜಿಲ್ಲೆಯ ಜನರ ಮತ ಪಡೆದು ಜನರಿಗೆ ದ್ರೋಹ ಮಾಡಿದ್ದಾರೆ. ನೀರಾವರಿ ಕಲ್ಪಿಸಲು ಸಾಧ್ಯವಾಗದ ಆಶಕ್ತ ಶಾಸಕರು, ಸಂಸದರ ಕೈಲಿ ವಿಧಾನಸೌಧ ಹಾಗೂ ಸಂಸತ್ತಿನಲ್ಲಿ ಮಾತನಾಡುವ ಯೋಗ್ಯತೆ ಇಲ್ಲದಿದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕೆಂದರು.

ರೈತರ ಸಂಘದ ರಾಜ್ಯಾಧ್ಯಕ್ಷ ಬಸವರಾಜಪ್ಪ, ವಕೀಲರ ಸಂಘದ ಅಧ್ಯಕ್ಷ ಎಲ್.ಕೆ.ಶಿವಕುಮಾರ್, ವಕೀಲರಾದ ರಂಗಸ್ವಾಮಿ ಡಿ.ಜಯಣ್ಣ, ಪ್ರಶಾಂತ್ ಬಿ.ಎನ್, ಮೂಲೆಮನೆ, ಎಸ್.ವೇದಮೂರ್ತಿ, ತಾ.ಪಂ.ಮಾಜಿ ಅಧ್ಯಕ್ಷ ಎಸ್.ಆರ್.ಮೋಹನ್ ನಾಗರಾಜ್,. ಬಸವರಾಜಪ್ಪ, ರವಿಕುಮಾರ್, ನೀರಾವರಿ ಸಮಿತಿ ಕಾರ್ಯದರ್ಶಿ ದಯಾನಂದ್, ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ, ದುಮ್ಮಿ ಚಿತ್ತಪ್ಪ, ಮದು, ಸುರೇಶ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ, ರಾಮರೆಡ್ಡಿ, ಕರಿಸಿದ್ದಯ್ಯ, ಮಲ್ಲಿಕಾರ್ಜುನ್, ತಾಲೂಕು ಅಧ್ಯಕ್ಷ ರಮೇಶ್, ಸದಾಶಿವಪ್ಪ, ಮುರುಗೇಂದ್ರಪ್ಪ, ಸೇರಿದಂತೆ ಸಾವಿರಾರು ರೈತರು, ವರ್ತಕರು, ವಕೀಲರು, ಮಹಿಳೆಯರು, ವಿವಿಧ ಸಂಘದ ಪದಾಧಿಕಾರಿಗಳು ಬಂದ್‌ನಲ್ಲಿ ಪಾಲ್ಗೊಂಡಿದ್ದರು.

ಪೊಲೀಸರ ಜತೆ ಜಟಾಪಟಿ : ವಾಹನಗಳ ಸಂಚಾರಕ್ಕೆ ಅನುಮಾಡಿಕೊಟ್ಟ ಪೋಲಿಸ್ ವಿರುದ್ದ ರೈತ ಸಂಘದವರು ಆಕ್ರೊಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ವಾಹನಗಳನ್ನು ಉದ್ದೇಶಪೂರ್ವಕವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದನ್ನು ಖಂಡಿಸಿ ಲಾರಿಯನ್ನು ತಡೆದರು ಇದರಿಂದ ಪೋಲಿಸ್ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತ್ತು.

ವರ್ತಕರ ಸಂಘ, ಅಮಾಲರ ಸಂಘ, ಆಟೋ ಸಂಘ, ಟ್ಯಾಕ್ಸಿ ಮಾಲೀಕರ, ಚಾಲಕರ ಸಂಘ, ಕಾರ್ಮಿಕ ಒಕ್ಕೂಟಗಳು, ಕಟ್ಟಡ ಕಾರ್ಮಿಕರ ಸಂಘ ವಿವಿಧ ಸಂಘಗಳ ಸದಸ್ಯರು ಬಂದ್ ನಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲಾಯಿತು.

ಬಾಕ್ಸ್ :
ಬೇಡಿಕೆಗಳು : ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರ ಘೋಷಣೆಯಂತೆ ೫೩೦೦ ಕೋಟಿ ಹಣವನ್ನು ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಚಿತ್ರದುರ್ಗದವರೆಗೆ ಭದ್ರಾ ಮೇಲ್ದಂಡೆ ಕಾಮಗಾರಿಯನ್ನ ಕೂಡಲೇ ಪೂರ್ಣಗೊಳಿಸಬೇಕು. ತುಂಗಾ ನದಿಯಿಂದ ಭದ್ರಕ್ಕೆ ನೀರು ಹರಿಸುವ ಕಾಮಗಾರಿಗೆ ಹೆಚ್ಚಿಸಬೇಕು. ಚಿತ್ರದುರ್ಗದ ಏಕೈಕ ಅಕ್ಷಯ ಪಾತ್ರೆ ವಾಣಿವಿಲಾಸ ಸಾಗರಕ್ಕೆ ೫ ಟಿಎಂಸಿ ನೀರು ಬಿಡಬೇಕು. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಸಾಸಿವೆಹಳ್ಳಿ ಏತ ನೀರಾವರಿ, ಎತ್ತಿನಹೊಳೆ ಹೇಮಾವತಿ ನದಿ ನೀರನ್ನ ಬಳಸಿ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗೆ ಕೈಗೊಳ್ಳಬೇಕು, ಆಂಧ್ರ ತೆಲಂಗಾಣ ತಮಿಳುನಾಡು ಮಾದರಿಯಲ್ಲಿ ಜಿಲ್ಲೆಯ ರೈತರ ಹಿತ ಕಾಪಾಡಬೇಕು.
ಪೋಟೋ :
೪ಹೆಚ್.ಎಲ್.ಕೆ.೧ ಅಪ್ಪರ್ ಭದ್ರ ನೀರಾವರಿಕ್ಕಾಗಿ ಕೈಗೊಂಡ ಬಂದ್ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿರುವುದು.
೪ಹೆಚ್.ಎಲ್.ಕೆ.೨ ಅಪ್ಪರ್ ಭದ್ರ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ವಕೀಲರು, ರೈತರು ಮಾನವ ಸರಪಳಿ ರಚಿಸಿ ಪ್ರತಿಭಟನೆ.


ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪೊಲೀಸ್ ಹಾಗೂ ರೈತ ವಿರುದ್ದ ಜಟಾಪಟಿ.
ಅಪ್ಪರ್ ಭದ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ತಹಸೀಲ್ದಾರ್ ಮನವಿ ಸಲ್ಲಿಸಿದ ರೈತರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend