ಕೊಪ್ಪಳ ನಗರದ  ಉದ್ಯಾನವನಗಳ ನಿರ್ಮಾಪಕ  ಕೊಟ್ರಪ್ಪ ಸೋಂಪುರ ಇನ್ನಿಲ್ಲ.

Listen to this article
*ಕೊಪ್ಪಳ ನಗರದ  ಉದ್ಯಾನವನಗಳ ನಿರ್ಮಾಪಕ  ಕೊಟ್ರಪ್ಪ ಸೋಂಪುರ ಇನ್ನಿಲ್ಲ.*

ನಿವೃತ್ತ  ತೋಟಗಾರಿಕೆ ಇಲಾಖೆಯ ಅಧಿಕಾರಿಯಾದ ಶ್ರೀ ಕೊಟ್ರಪ್ಪ ಸೋಂಪುರ ರವರು ಇಂದು ದಿನಾಂಕ  11-5-2021 ರಂದು ಮಧ್ಯಾಹ್ನ ಲಿಂಗೈಕ್ಯರಾದರು.ತುಂಗಭದ್ರಾ ಡ್ಯಾಮ್ ನಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಸೇವೆಯಲ್ಲಿದ್ದಾಗ ಸುಮಾರು ಇಪ್ಪತ್ತು ವರ್ಷ ತುಂಗಭದ್ರ ಡ್ಯಾಮ್ ಮತ್ತು ಮುನಿರಾಬಾದ್ ನಲ್ಲಿರುವ ಎಲ್ಲ ಉದ್ಯಾನಗಳ ಮೇಲು ಸ್ತವಾರಿಯನ್ನು ಹೊತ್ತು ಉದ್ಯಾನಗಳ ಸುಂದರವಾಗಿ ಬೆಳೆಸುತ್ತಾ ಕಾಪಾಡಿಕೊಂಡು ಬಂದಿದ್ದ ವ್ಯಕ್ತಿ.

ಗಿಡ ಮರಗಳನ್ನೇ ದೇವರೆಂದು ನಂಬಿ ಅವುಗಳ ನಿರ್ವಹಣೆಗಾಗಿ ತಮ್ಮ ಕೊನೆಯ ಉಸಿರಿರುವವರೆಗೂ ದುಡಿದ ಕಾಯಕ ಜೀವಿ.ಕೊಪ್ಪಳ ಗವಿ ಮಠ,ಆಯುರ್ವೇದಿಕ್ ಕಾಲೇಜ್,ಹಾಗೂ ಯಾತ್ರಿ ನಿವಾಸದ ಆವರಣದಲ್ಲಿ ಬೆಳೆಸಿರುವ ಉದ್ಯಾನ  ಮತ್ತು ಗಿಡಮರಗಳನ್ನು ನೋಡಿದರೆ ಥಟ್ಟಂತ ನೆನಪಾಗುವುದು ಶ್ರೀ ಕೊಟ್ರಪ್ಪ ಸೋಂಪುರವರು.ಶ್ರೀ ಗವಿಮಠದ ಪೂಜ್ಯರ ಆಶಯದಂತೆ ಇಡೀ ಗವಿಮಠದ ಪರಿಸರವನ್ನು ಹಸಿರನ್ನಾಗಿ ಮಾಡುವಲ್ಲಿ ಕೊಟ್ರಪ್ಪ ಸೋಂಪುರವರ ಶ್ರಮವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.ಹಾಗೆಯೇ ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ ನಾಡಿನಲ್ಲಿಯೇ ಉದ್ಯಾನಗಳನ್ನು ನಿರ್ಮಾಣ ಮಾಡಬೇಕೆಂದರೆ ಎಲ್ಲರೂ ಕರೆಯುತ್ತಿದ್ದದ್ದು ಕೊಟ್ರಪ್ಪ ಸೋಂಪುರವರನ್ನೇ.

ಇತ್ತಿತ್ತಲಾಗಿ ಹೊಸಮನೆಗಳ  ಆವರಣದಲ್ಲಿ ಸುಂದರವಾದ ಉದ್ಯಾನ ಹಾಗೂ ಗಿಡ ಮರಗಳು  ಬೆಳೆದಿದ್ದಾವೆಂದರೆ ಅವು ಕೊಟ್ರಪ್ಪ ಸೋಂಪುರವರ ಕೊಡುಗೆ ಎಂಬುದರಲ್ಲಿ ಸಂಶಯವೇ ಇಲ್ಲ.ಯಾರ ಮನೆಯಲ್ಲಾದರು ಅಥವಾ ಸಾರ್ವಜನಿಕ ಸ್ಥಳದಲ್ಲಾದರು ಉದ್ಯಾನಗಳನ್ನು  ನಿರ್ಮಾಣ ಮಾಡಿಕೊಟ್ಟರೆ ಪ್ರತಿಫಲವಾಗಿ ಹಣಕ್ಕಾಗಿ ಪೀಡಿಸಿದವರಲ್ಲ.

ಕೊಪ್ಪಳದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಯಶಸ್ವಿನಿ ಲೇ ಔಟ್, ಪದಕಿ ಲೇಔಟ್ ಗಳಲ್ಲಿ ಗಿಡ ಮರಗಳನ್ನು ಬೆಳೆಸಲು ಪ್ಲ್ಯಾನಿಂಗ್ ನ್ನು ರೂಪಿಸಿದವರು ಕೊಟ್ರಪ್ಪ ಸೋಂಪುರವರು ಎಂದು ಆ ಲೇಔಟ್ ಗಳ ಮಾಲೀಕರು ಅಭಿಮಾನದಿಂದ ಹೇಳುತ್ತಾರೆ.ಕೊಪ್ಪಳದಲ್ಲಿ ಆಧುನಿಕ ತಳಿಯ ಗಿಡ ಮರಗಳನ್ನು ಪರಿಚಯಿಸಿದವರು ಕೊಟ್ರಪ್ಪ ಸೋಂಪುರವರು.

ಎಲ್ಲರೊಂದಿಗೆ ವಿನಮ್ರಭಾವದಿಂದ ನಡೆದುಕೊಳ್ಳುತ್ತಿದ್ದ ಕೊಟ್ರಪ್ಪ ಸೋಂಪುರವರು ಶ್ರಮಜೀವಿ.ತಾವು ಮಾಡುವ ಕಾಯಕದಲ್ಲಿ ಶ್ರದ್ಧೆ,ನಿಷ್ಠೆ, ಪ್ರಾಮಾಣಿಕತೆಯನ್ನು ಹೊಂದಿದ್ದ ಇವರು ಇಂದಿನ ನಮ್ಮ ಯುವಕರಿಗೆ ಆದರ್ಶ.ಕೊಪ್ಪಳ ಗವಿಮಠದ  ಪೂಜ್ಯ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರಿಗೆ ಕೊಟ್ರಪ್ಪ ಸೋಂಪುರವರೆಂದರೆ ಬಹಳ  ಅಚ್ಚುಮೆಚ್ಚು.ಪೂಜ್ಯರ ಪ್ರೀತಿಗೆ ಪಾತ್ರವಾಗಿದ್ದ ಕೊಟ್ರಪ್ಪನವರು ಸಾರ್ಥಕ ಬದುಕನ್ನು ಬದುಕಿದ್ದಾರೆ. ಇನ್ನಷ್ಟು ದಿವಸ ಅವರು ನಮ್ಮ ಜೊತೆಗಿದ್ದಿದ್ದರೆ ಕೊಪ್ಪಳ ನಗರದ ಸುತ್ತಮುತ್ತ ಮತ್ತಷ್ಟು ಉದ್ಯಾನಗಳು  ನಿರ್ಮಾಣವಾಗಿ ಸಾವಿರಾರು ಸಂಖ್ಯೆಯಲ್ಲಿ ಗಿಡಮರಗಳು ಬೆಳೆಯುತ್ತಿದ್ದವು.

ಕೊಪ್ಪಳದ ಸಾಲುಮರದ *ತಿಮ್ಮಕ್ಕನೆಂದೆ ಪ್ರಸಿದ್ಧರಾಗಿದ್ದ ಕೊಟ್ರಪ್ಪ ಸೋಂಪುರವರೆ,ಕೊಪ್ಪಳ ಗವಿಸಿದ್ದೇಶ್ವರನ ಪ್ರೀತಿ ಪಾತ್ರರಾಗಿ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಶ್ರೀಗಳ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದೀರಿ,ಮಹಾತ್ಮಾ ಬಸವೇಶ್ವರ ತಮ್ಮ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ತಮ್ಮ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದಯಪಾಲಿಸಲಿ, ಮತ್ತೊಮ್ಮೆ ಹುಟ್ಟಿಬನ್ನಿ ಕೊಟ್ಟಪ್ಪನವರೇ…

ವರದಿ. ಮಂಜುನಾಥ್, ದೊಡ್ಡಮನಿ
Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend