ಸಾಂಕ್ರಾಮಿಕ ರೋಗಗಳಿಗೆ ಉಗಮಸ್ಥಾನವಾದ ಕಾನಾಹೋಸಹಳ್ಳಿಯ ಉಜ್ಜಯಿನಿ ರಸ್ತೆ…!!!

Listen to this article

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ. ಹೊಸಹಳ್ಳಿ ಗ್ರಾಮದ ಉಜ್ಜಿನಿ ರಸ್ತೆಯಲ್ಲಿರುವ ಎರಡು ಹೋಟೆಲ್ ಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಸಾರ್ವಜನಿಕರು ತ್ಯಾಜ್ಯವಸ್ತುಗಳು ಪೇಪರ್ ಪ್ಲಾಸ್ಟಿಕ್ ಗಳನ್ನು ಹಾಕಿದ್ದು ನಂತರ ಇದೇ ಜಾಗದಲ್ಲಿ ಕೆಲವರು ಮೂತ್ರ ಮಾಡಿ ಹೋಗುತ್ತಾರೆ, ಇಲ್ಲಿ ವಾಸನೆ ಉಂಟಾಗಿದ್ದು ಸಾಂಕ್ರಮಿಕ ರೋಗಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ ಕಾರಣ ಸಂಬಂಧಪಟ್ಟವರು ಇಲ್ಲಿ ಹಾಕಿರುವ ಘನತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಿ. ನಂತರ ಕಾನಹೊಸಹಳ್ಳಿ ಗ್ರಾಮವು ಹೋಬಳಿ ಕೇಂದ್ರವಾಗಿದ್ದು ಈ ಕೇಂದ್ರಕ್ಕೆ ಸಂಬಂಧಪಟ್ಟ ಎಲ್ಲಾ ಹಳ್ಳಿಯ ಜನರು ನಾಡಕಚೇರಿಗೆ ಕೆಲಸದ ನಿಮಿತ್ಯ ಬಂದು ಹೋಗುತ್ತಾರೆ, ಹಾಗೂ ಬ್ಯಾಂಕುಗಳಿಗೆ ಕಿರಾಣಿ ಅಂಗಡಿಗಳಿಗೆ ತರಕಾರಿಗಳಿಗೆ ಇನ್ನು ಮುಂತಾದ ಸಾಮಗ್ರಿಗಳನ್ನು ಕೊಳ್ಳಲು ಕಾನ ಹೊಸಹಳ್ಳಿಯ ಗ್ರಾಮಕ್ಕೆ ಸುಮಾರು ಜನ ಬಂದು ಹೋಗುತ್ತಿದ್ದಾರೆ. ಈಗ ಕೋವಿಡ್ 19 ರ ನಿಯಮ ಜಾರಿ ಇರುವುದರಿಂದ ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿದೆ,ಹಾಗು ಅತಿಮುಖ್ಯವಾಗಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಇದರಿಂದ ಹಳ್ಳಿಗಳಿಂದ ಬಂದ ಮಹಿಳೆಯರಿಗೆ ಹಾಗೂ ಪುರುಷರಿಗೆ, ಸಾರ್ವಜನಿಕರಿಗೆ ಬಹಳ ತೊಂದರೆ ಯಾಗಿರುತ್ತದೆ ಕಾರಣ ಕಾನ ಹೊಸಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಿ ಕೊಡಬೇಕಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆದಲಿತ ಮುಖಂಡರಾದ ಟಿ ಗಂಗಾಧರ ಬಸವರಾಜ ದಲಿತ ಮುಖಂಡ ಹಾಗೂ ಪತ್ರಕರ್ತರಾದ ಸಿದ್ದಾಪುರದ ಡಿ ಎಂ ಈಶ್ವರಪ್ಪ, ದಲಿತ ಮುಖಂಡರಾದ ತುಂಬರಗುದ್ದಿ ದುರುಗೇಶ ಕಾನಾಮಡಗು ದುರ್ಗೇಶ .ಹೇಮಂತಕುಮಾರ್. ಸುತ್ತಮುತ್ತಲಿನ ಹಳ್ಳಿಯ ಜನರು ಸಾರ್ವಜನಿಕರು ಮನವಿ ಮಾಡಿಕೊಂಡಿರುತ್ತಾರೆ.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend