ಅಂಬೇಡ್ಕರ್ ಭವನದ ಸ್ವಚ್ಛತೆ ಕಾಪಾಡಿ…!!!

Listen to this article

 

ಅಂಬೇಡ್ಕರ್ ಭವನದ ಸ್ವಚ್ಛತೆ ಕಾಪಾಡಿ
ಕನಹೊಸಹಳ್ಳಿ :- ಸಮೀಪದ ಹಾರಕಬಾವಿ ಗ್ರಾಮದಲ್ಲಿ 2005–6 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ ಹಾಗೂ 2009-10 ಮೇ ಸಾಲಿನ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ಮಿನಿ ಅಂಬೇಡ್ಕರ್ ಭವನ ದ ಮುಂಭಾಗದಲ್ಲಿ ಗಿಡಗಂಟೆಗಳು ಮುಳ್ಳಿನ ಗಿಡಗಳು ಬೆಳೆದು ನಿಂತಿದ್ದು, ಕೆಲವು ಜನರು ಕಸದ ರಾಶಿಗಳನ್ನು ಹಾಕಿರುತ್ತಾರೆ, ಭವನದ ಮುಂಭಾಗದಲ್ಲಿ ಚರಂಡಿಯ ನೀರು ಹರಿದು ಬಂದು ನಿಂತು ಕೆಟ್ಟ ವಾಸನೆ ಬರುತ್ತದೆ, ಈ ಭವನದ ಮುಂದೆ ವಿಷ ಜಂತುಗಳು ವಾಸಿಸುವ ತಾಣವಾಗಿದೆ. ಸಾರ್ವಜನಿಕರ ಕಾರ್ಯಕ್ರಮಗಳಿಗೆ ಸಮುದಾಯದ ಕಾರ್ಯಕ್ರಮಗಳಿಗೆ ಉಪಯೋಗ ಆಗಬೇಕಾಗಿದ್ದ ಈ ಭವನ ಯಾರಿಗೂ ಬೇಡವಂತಾಗಿದೆ. ಲಕ್ಷಾಂತರ ರೂಪಾಯಿಗಳಲ್ಲಿ ನಿರ್ಮಿಸಲಾದ ಈ ಭವನವನ್ನು ಸಾರ್ವಜನಿಕರು ಒಳ್ಳೆಯ ಕಾರ್ಯಕ್ರಮಗಳಿಗೆ ಉಪಯೋಗಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆ ಮಾಡಿಸುವಲ್ಲಿ ಮುಂದಾಗಬೇಕಾಗಿದೆ. ಈ ಭವನದ ಮುಂದೆ ಬೆಳೆದು ನಿಂತಿರುವ ಗಿಡಗಂಟೆಗಳನ್ನು ತೆರವುಗೊಳಿಸಿ, ಸಾರ್ವಜನಿಕರಕಸದ ರಾಶಿಗಳನ್ನು ಹಾಗೂ ಭವನದ ಮುಂಭಾಗದಲ್ಲಿ ನಿಂತಿರುವ ಚರಂಡಿ ನೀರನ್ನು ಬೇರೆ ಕಡೆಗೆ ಹೋಗುವಂತೆ ಕಾಮಗಾರಿ ನಿರ್ಮಿಸಿ ಅಂಬೇಡ್ಕರ್ ಭವನದ ಒಳಗೆ ಮತ್ತು ಹೊರಗೆ ಸ್ವಚ್ಛತೆ ಮಾಡಿಸಿ ಅಂಬೇಡ್ಕರ್ ಭವನದ ಮುಚ್ಚಿದ ಬಾಗಿಲನ್ನು ತೆರೆದು ಗ್ರಾಮದ ಸಾರ್ವಜನಿಕರ ಒಳ್ಳೆಯ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಹೊರಕಬಾವಿ ದಲಿತ ಸಮುದಾಯದವರು ಸಾರ್ವಜನಿಕರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
ಆದಷ್ಟು ಬೇಗ ಈ ಭವನದ ಹಿಂದೆ ಮುಂದೆ ಹಾಗೂ ಒಳಗಡೆ ಸ್ವಚ್ಛತೆ ಮಾಡಿಸಿ ಸಮುದಾಯದ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಲಾಗುವುದು
ಗ್ರಾ. ಪಂ ಅಭಿವೃದ್ಧಿ ಅಧಿಕಾರಿ:- ವೀರಣ್ಣ..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend