ನಿದಾನಗತಿ ಕಲಿಕಾ ವಿದ್ಯಾರ್ಥಿಗಳ ಸಾಮರ್ಥ್ಯಭಿವೃದ್ಧಿಗಾಗಿ ಅಭ್ಯಾಸಹಾಳೆ ಪುಸ್ತಕಗಳನ್ನು ನೀಡಲಾಯಿತು…!!!

Listen to this article

ಕಲಿಕೆಯಲ್ಲಿ ನಿಧಾನ ಗತಿಯಲ್ಲಿ ಕಲಿಯುತ್ತಿರುವ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರ್ಗಿ ಇವರ ಅನುದಾನದಲ್ಲಿ ಆಯುಕ್ತರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸಿದ್ಧಪಡಿಸಿದ 2022 23ನೇ ಸಾಲಿನ ನಿಧಾನ ಗತಿ ಕಲಿಕಾ ವಿದ್ಯಾರ್ಥಿಗಳ ಸಾಮರ್ಥ್ಯ ಅಭಿವೃದ್ಧಿಗಾಗಿ ಅಭ್ಯಾಸ ಹಾಳೆ ಕಲಿಕಾಸರೆ ಕಲಿಕಾಸರೆ ಆಶ್ರಯದಲ್ಲಿ ಸಿದ್ದಪಡಿಸಿದ ಪುಸ್ತಕಗಳನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ, ಎಂ.ಬಿ ಅಯ್ಯನ ಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರು.

ಮತ್ತು ಇದೇ ಊರಿನ ಹಳೇ ವಿದ್ಯಾರ್ಥಿ ಹಾಗೂ ಎಚ್ಚರಿಕೆ ಕನ್ನಡ ನ್ಯೂಸ್ ಹಾಗೂ ಉಕ್ಕಿನ ಕೋಟೆ, ಟೈಮ್ಸ್ ಆಫ್ ಬಳ್ಳಾರಿ ಪತ್ರಿಕೆಗಳ ಸಂಪಾದಕರಾದ ಎನ್ ಮಂಜುನಾಥ ಹಾಗೂ ಕೂಡ್ಲಿಗಿ ತಾಲೂಕು ವರದಿಗಾರ ಬಿ.ಎಂ.ಬಸವರಾಜ ಇವರ ಜೊತೆಗೂಡಿ ಹತ್ತನೇ ತರಗತಿ 24 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುವುದರ ಮೂಲಕ ಈ ಶಾಲೆಯ ಹಳೆ ವಿದ್ಯಾರ್ಥಿಯಾದ ಇವರು ತಮ್ಮ ಅನಿಸಿಕೆಯನ್ನು ಶಿಕ್ಷಕರ ಜೊತೆಗೆ ಚರ್ಚಿಸುವುದರ ಮೂಲಕ ಅಂದಿನ ಕಲಿಕಾ ಮಟ್ಟದ ವಿದ್ಯಾಭ್ಯಾಸವನ್ನು ಕುರಿತು ವಿದ್ಯಾರ್ಥಿಗಳೊಂದಿಗೆ ಸಹ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಮತ್ತು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಗಮನಕ್ಕೆ ಶಿಕ್ಷಣ ಎಂದರೆ”ಹುಲಿಯ ಹಾಲು ಕುಡಿದಂತೆ ಅದನ್ನು ಕುಡಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ಮುಂದೊಂದು ದಿನ ಘರ್ಜಿಸಲೇಬೇಕು “ಹಾಗೂ ವೈಜ್ಞಾನಿಕ ಬೆಳವಣಿಗೆ ಕಾಲದಲ್ಲಿ ಶಿಕ್ಷಣ ಎಂಬುದು ಅತಿ ಮುಖ್ಯವಾದ ಒಂದು ಭಾಗ ಎಂದು ಸಂಪಾದಕರಾದ ಎನ್ ಮಂಜುನಾಥ ಅವರು ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹಾಗೂ ಇಂತಹ ಒಂದು ಸಮಯವನ್ನು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಂಜುನಾಥ ಎಚ್.ಎ ಹಾಗೂ ಸಹ ಶಿಕ್ಷಕರು ನಮಗೆ ಈ ಒಂದು ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕಾಗಿ ತಮ್ಮೆಲ್ಲರಿಗೂ ನಮ್ಮ ಪತ್ರಿಕಾ ಬಳಗದ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend