ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗಳು,..!!!

Listen to this article

ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗಳು, ಆಂಧ್ರಪ್ರದೇಶದ ವ್ಯಕ್ತಿಯ ತನ್ನ ಹೆಂಡತಿ ಶವ ಸಾಗಿಸಲು ಮತ್ತು ಶವ ಸಂಸ್ಕಾರ ಮಾಡಲು ಸಹಾಯ ಮಾಡಿ ಪೊಲೀಸ್ ಅಧಿಕಾರಿಗಳು. ಆಂಧ್ರಪ್ರದೇಶದ ವಿಶಾಖ ಪಟ್ಟಣ ದಲ್ಲಿ ನಡೆದಿರುವ ಮನುಕುಲವೆ ತಲೆ ತಗ್ಗಿಸುವ ಘಟನೆ..

ಒರಿಸ್ಸಾ ಮೂಲದ ಮಹಿಳೆ ಅನಾರೋಗ್ಯ ಸಮಸ್ಯೆಯಿಂದ ವಿಶಾಖ ಪಟ್ಟಣದ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಆಗುತ್ತಾರೆ… ವೈದ್ಯರು ಆಕೆಗೆ ಹಲವು ಬಗೆಯ ಔಷದೂಪಚಾರ ಮಾಡಿದ ಬಳಿಕ ಡಾಕ್ಟರು ಈಕೆಯು ಬದುಕುವ ಸಾಧ್ಯತೆ ತೀರ ಕಮ್ಮಿ ಇರುವ ಕಾರಣ ನೀವು ಆಕೆಯನ್ನು ಕರೆದುಕೊಂಡು ಹೋಗಬಹುದು ಎಂದು ತಿಳಿಸುತ್ತಾರೆ..

ಗಂಡ ವೈದ್ಯರ ಮಾತು ಕೇಳಿ ಒಂದು ಕ್ಷಣ ಕುಸುದು ಬೀಳುತ್ತಾನೆ. ನಿದಾನವಾಗಿ ಎದ್ದು ಹೆಂಡಿತಿ ಬಳಿ ತೆರಳಿ ಗಟ್ಟಿಯಾಗಿ ತಬ್ಬಿಕೊಂಡು ಹಣೆಗೆ ಮುತ್ತಿಕ್ಕಿ ಕಣ್ಣೀರು ಹಾಕುತ್ತಾನೆ. ಹೆಂಡತಿಯನ್ನು ಕರ್ಕೊಂಡು ಒಂದು ಆಟೋ ರಿಕ್ಷಾದಲ್ಲಿ ಊರಿನ ಕಡೆ ಪ್ರಯಾಣ ಮಾಡುತ್ತಾನೆ…
ಆತನ ದುರ್ದೈವ ಮಾರ್ಗದ ಮಧ್ಯದಲ್ಲಿ ಹೆಂಡತಿ ಕೊನೆ ಉಸಿರೇಳೆಯೂತ್ತಾಳೆ…

ಆಟೋ ಚಾಲಕ ನಾನು ಇನ್ನು ಅಷ್ಟೂ ದೂರ ಶವವನ್ನು ಸಾಗಿಸಲು ಆಗುವುದಿಲ್ಲ ನನ್ನ ಬಾಡಿಗೆ ಕೊಟ್ಟು ಬಿಡಿ ಅಂತಾ ಆಟೋ ನಿಲ್ಲಿಸಿ ಬಿಡುತ್ತಾನೆ. ದಿಕ್ಕು ತೋಚದೆ ಗಂಡ ತನ್ನ ಬಳಿ ಇರುವ ₹2000 ಹಣವನ್ನು ಆತನಿಗೆ ಕೊಟ್ಟು ಹೆಂಡತಿ ಶವ ರಸ್ತೆ ಪಕ್ಕ ಹಾಕಿ ಯೋಚಿಸುತ್ತ ಕುಳಿತು ಬಿಡುತ್ತಾನೆ..

ಗಂಟೆಗಟ್ಟಲೆ ಕುಳಿತು ಅತ್ತರು ಆತನಿಗೆ ಯಾರದು ಸಹಾಯ ದೊರಕಲಿಲ್ಲ ಕೊನೆಗೆ ಇರುವ ಸ್ಥಳದಿಂದ ತನ್ನ ಊರು 130 km ಇದ್ದರು ಸಹ ಹೆಂಡತಿಯನ್ನು ಹೊತ್ತುಕೊಂಡು ನಡಿಯಲು ನಿರ್ಧಾರಿಸುತ್ತಾನೆ.

ಆ ಸಮಯದಲ್ಲಿ ಅದೆ ಮಾರ್ಗಮಧ್ಯದಲ್ಲಿ ಹಾದು ಹೋಗುತ್ತಿದ್ದ ತಿರುಪತಿ ರಾವ್ ಹಾಗೂ ಕಿರಣ್ ಕುಮಾರ್ ಎಂಬ ಪೊಲೀಸ್ ಅಧಿಕಾರಿಗಳು ಈತನ ಅವಸ್ಥೆ ನೋಡಿ ಮರುಕ ಪಟ್ಟುಕೊಳ್ಳುತ್ತಾರೆ..

ಆ ಮಹಿಳೆಯ ಗಂಡ ನಡೆದ ರಾದ್ಧಾಂತವೇಲ್ಲ ಪೊಲೀಸ್ ಅಧಿಕಾರಿಗಳಿಗೆ ಹೇಳುತ್ತಾನೆ ಆಗ ತಿರುಪತಿ ರಾವ್ ಹಾಗೂ ಕಿರಣ್ ಕುಮಾರ್ ರವರು ಆತನ ಊರಿನ ವರೆಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡುವುದರ ಜೊತೆಗೆ
ಶವ ಸಂಸ್ಕಾರಕ್ಕೆ ಅದುಕ್ಕೆ ಇದುಕ್ಕೆ ಅಂತ ಖರ್ಚಿಗೆ ₹10,000 ಕೊಟ್ಟು ಊರಿಗೆ ಕಳುಹಿಸಿ ಕೊಡುತ್ತಾರೆ..

ಬೆಳಗಾದರೆ ಸಾಕು ಆ ರಸ್ತೆ ಬದಿ ಪೊಲೀಸ್ ರು ವಸೂಲಿಗೆ ಇಲದಿದ್ದಾರೆ ಅಲ್ಲಿ ಇಷ್ಟು ಲಂಚ್ ಇದ್ರೂ ಇಲ್ಲಿ ಇಷ್ಟು ತಿಂದ್ರು ಅಂತಾ ಪತ್ರಿಕೆಯಲ್ಲಿ ಓದುತ್ತಿರುತ್ತೇವೆ ಇಂತಹ ಸಂದರ್ಭದಲ್ಲಿ ತಿರುಪತಿ ರಾವ್ ಹಾಗೂ ಕಿರಣ್ ಕುಮಾರ ಅಂತಹ ಪೊಲೀಸ್ ಅಧಿಕಾರಿಗೂ ರಾಜ್ಯಕ್ಕೆ ಮಾದರಿಯಾಗುತ್ತಾರೆ..

ತಿರುಪತಿರಾವ್, ಕಿರಣಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇನೆ.

 

ವರದಿ. ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend