ಯೋಗ ಮಾಡುವುದರಿಂದ ಮನ ಶಾಂತಿ ಲಭ್ಯ…!!!

Listen to this article

ಯೋಗ ಮಾಡುವುದರಿಂದ ಮನ ಶಾಂತಿ ಲಭ್ಯ… ತಾಲೂಕಿನ ಕೂಡ್ಲಿಗಿ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಆಶ್ರಮ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಯೋಗಾಸನದ ತರಗತಿ ಆಯೋಜಿಸಿ ಅವರಿಗೆ ಹೊಸ ಬಟ್ಟೆಗಳನ್ನು ನೀಡಲಾಗಿದೆ. ಪ್ರತಿನಿತ್ಯ ಯೋಗ ಮಾಡಿದರೆ ದೇಹ, ಮನಸ್ಸು ಹಾಗೂ ಆತ್ಮ ಶುದ್ಧೀಕರಣಕ್ಕೆ ಸಹಕಾರಿಯಾಗುತ್ತದೆ. ಯೋಗಭ್ಯಾಸವು ಅನೇಕ ಕಾಯಿಲೆಗಳ ನಿವಾರಣೆಗೆ ಪ್ರಮುಖ ಪಾತ್ರ ವಹಿಸುತ್ತದೆ, ಸದೃಢ ದೇಹ ಒಳ್ಳೆಯ ಶಾರೀರಿಕ ಪಡೆಯಬಹುದು ವಿದ್ಯಾರ್ಥಿನಿಯರು ಓದಿನ ಜೊತೆಗೆ ಯೋಗ ತರಗತಿಗಳನ್ನು ನುರಿತ ಮಾರ್ಗದರ್ಶಕರಿಂದ ನೀಡಲಾಗುತ್ತದೆ. ಯೋಗ ತರಬೇತಿಯಲ್ಲಿ ಮಾರ್ಗದರ್ಶನ ನೀಡಿದ ಪಟ್ಟಣದ ಯೋಗ ಭಂಗಿ ಗೌರಮ್ಮನವರು ಯೋಗ ತರಬೇತಿ ನೀಡುತ್ತಿದ್ದಾರೆ, ಸುಮಾರು 50ಕ್ಕೂ ಹೆಚ್ಚು ಯೋಗಭ್ಯಾಸಗಳಿವೆ ಒಂದೊಂದು ಯೋಗವು ಆರೋಗ್ಯದ ಮಹತ್ವವನ್ನು ಹೊಂದಿದೆ ಎನ್ನುತ್ತಾರೆ ಗೌರಮ್ಮನವರು. ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಾತನಾಡುತ್ತಾ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರಿಗೆ ಈಗಾಗಲೇ ಯೋಗಾಸನದ ಜೊತೆಗೆ ಶ್ವೇತವರ್ಣದ ಉಡುಪು ನೀಡಲಾಗಿದೆ. ವಿದ್ಯಾರ್ಥಿನಿಯರು ನಿತ್ಯ ಯೋಗ, ಧ್ಯಾನ, ಕರಾಟೆ ತರಗತಿಗಳಲ್ಲಿ ಪಾಲ್ಕೊಳ್ಳುತ್ತಿದ್ದಾರೆ ಮಾನಸಿಕ, ದೈಹಿಕ ಸ್ವಾಸ್ಥ್ಯ ಹೊಂದಿರುತ್ತಾರೆ ಎಂದು ಬಿಸಿಎಂ  ಕಲ್ಯಾಣ ಅಧಿಕಾರಿಎಚ್. ಪಂಪಾಪತಿ ಮಾತನಾಡುತ್ತಾ ತಿಳಿಸಿದರು…

ವರದಿ. ಬಸಪ್ಪ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend