ಕನ್ನಡ ಸೇವಕರಾಗಿ ಕೆಲಸಮಾಡಲು ಅವಕಾಶ ಕೊಡಿ ಎಂದು ನಾ,ಮ,ಜೋ…!!!

Listen to this article

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು…

ಕನ್ನಡ ಸೇವಕನಾಗಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ನಾ,ಮ.ಜೋ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಮಡುಗು ದಾಸೋಹ ಮಠಕ್ಕೆ ಸೋಮವಾರ ಸಂಜೆ ನಾಡೋಜ ಡಾ, ಮಹೇಶ್ ಜೋಶಿ ಭೇಟಿ ಕೊಟ್ಟು ಶ್ರೀ ಐಮಡಿ ಶರಣಾರ್ಯರು ಆಶೀರ್ವಾದ ಪಡೆದು ನಂತರ ಮಾತನಾಡಿ
ನಾನು ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದು. ನಾನು ಸ್ಪರ್ಧೆ ಮಾಡುತ್ತಿರುವುದು ಯಾವುದೇ ಅಧಿಕಾರದ ಆಸೆಗೆ ಅಲ್ಲ ಅಧಿಕಾರ ದಾಸೆಗೆ ಬಂದಿಲ್ಲ, ನಾನು ಕನ್ನಡ, ನಾಡು, ನುಡಿ ,ಜಲ, ಭಾಷೆಗೆ, ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಕನ್ನಡಕ್ಕೆ ಒತ್ತು ನೀಡಲು. ಹಾಗೂ. ಕನ್ನಡ ಸಾಹಿತ್ಯ ಪರಿಷತ್ನ ನೊಂದಾವಣೆ ಶುಲ್ಕ ಹೆಚ್ಚಿದೆ ಎಂದು ಹೇಳುತ್ತಿದ್ದಾರೆ. ಆದರೆ ನಾನು ಅಧಿಕಾರಕ್ಕೆ ಬಂದರೆ ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ, ದೇಶ ಕಾಯುವ ಯೋಧರಿಗೆ, ಉಚಿತ ನೊಂದಣಿ ಮಾಡುವಂತೆ .ತಿಳಿಸಿದರು ನಂತರ ಕನ್ನಡ ಶಾಲೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಡಾ, ನಾಡೋಜ ಮಹೇಶ್ ಜೋಷಿ ನುಡಿದರು.
ನಿವೃತ್ತ ನ್ಯಾಯಮೂರ್ತಿಗಳಾದ ಹಳ್ಳಿ ನಾಗರಾಜ್ ಮಾತನಾಡಿ ನನ್ನ ಎರಡು ದಶಕದ ಸ್ನೇಹಿತ ಮಹೇಶ್ ಜೋಶಿ ಅವರು ಬಹಳ ಒಳ್ಳೆಯ ವ್ಯಕ್ತಿತ್ವವುಳ್ಳವರು. ಅಧಿಕಾರಕ್ಕೆ , ಪದವಿಗೆ ,ಆಸೆಪಡುವ ವರಲ್ಲ. ಅವರು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದರೇ ಬಹಳ ಒಳ್ಳೆಯದು, ಕನ್ನಡದ ಕೆಲಸಗಳುನ್ನು ಮಾಡಲು ಹಾಗೂ ಹೆಚ್ಚು ಹೆಚ್ಚು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡಲು ಅನುಕೂಲ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಐಮಡಿ ಶರಣಾರ್ಯರು,
ಕನ್ನಡ ಪರಿಷತ್ನ ಮಾಜಿ ಅಧ್ಯಕ್ಷರಾದ ಎನ್ ಎಂ ರವಿಕುಮಾರ್, ಕೆ ಸುಭಾಷ್ ಚಂದ್ರ, ಡಾ.ಕರಿಬಸಪ್ಪ ಕುಂಬಾರ ತಿಪ್ಪೇರುದ್ರಪ್ಪ ,ಬಿ ಎಂ ಶಿವಪ್ರಕಾಶ, ಕೆ.ಟಿ. ಮಲ್ಲಿಕಾರ್ಜುನಸ್ವಾಮಿ ಆಲೂರು, ಸಫಾರಿ ರಾಮಣ್ಣ, ಸಫಾರಿ ಶಾಮಸುಂದರ. ಅರವಿಂದ್, ನೀರುಗಂಟಿ ಶರಣಪ್ಪ, ನಾಗಭೂಷಣ ಹಾಗೂ ಇತರರು ಇದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend