ಹುಟ್ಟೂರಿಗೆ ಹಾಗೂ ಪ್ರತಿ ಜಿಲ್ಲೆ, ತಾಲೂಕು ಮತ್ತು ಹೋಬಳಿ ವೃತ್ತಗಳಿಗೆ ಜಕಣಾಚಾರಿ ಹೆಸರನ್ನಿಡಬೇಕು-ಬಡಿಗೇರ ನಾಗರಾಜ…!!”

Listen to this article

ಹುಟ್ಟೂರಿಗೆ ಹಾಗೂ ಪ್ರತಿ ಜಿಲ್ಲೆ, ತಾಲೂಕು ಮತ್ತು ಹೋಬಳಿ ವೃತ್ತಗಳಿಗೆ ಜಕಣಾಚಾರಿ ಹೆಸರನ್ನಿಡಬೇಕು-ಬಡಿಗೇರ ನಾಗರಾಜ.

ವಿಜಯನಗರ ಜಿಲ್ಲೆ ಕೂಡ್ಲಿಗಿ, ಅಮರ ಶಿಲ್ಪಿ ಜಕಣಾಚಾರಿ ರವರ ಹುಟ್ಟೂರು ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಕೈಗಳಾಪುರ ಗ್ರಾಮವಾಗಿದ್ದು,ಆ ಗ್ರಾಮವನ್ನು ಅಮರ ಶಿಲ್ಪಿ ಜಲಣಾಚಾರಿ ಗ್ರಾಮ ಎಂದು ನಾಮಕರಣ ಮಾಡಬೇಕಿದೆ. ರಾಷ್ಟ್ರದ ಪ್ರತಿ ಜಿಲ್ಲೆ ಯ ತಾಲೂಕು ಹಾಗೂ ಹೋಬಳಿಗಳಲ್ಲಿ, ವೃತ್ತವೊಂದಕ್ಕೆ ಜಕಣಾಚಾರಿ ಹೆಸರಿಡಬೇಕು ಎಂದು ವಿಶ್ವ ಕರ್ಮ ಸಮಾಜ ಮುಖಂಡ ಬಡಿಗೇರ ನಾಗರಾಜಾಚಾರಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.ಅವರು ತಹಶಿಲ್ದಾರರ ಕಚೇರಿಯಲ್ಲಿ ತಾಲೂಕಾಡಳಿತದಿಂದ ಆಯೋಜಿಸಲಾಗಿದ್ದ,ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಸರಳ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆಗೈದು ಮಾತನಾಡಿದರು. ತಮ್ಮ ವಾಸ್ತುಶಿಲ್ಪ ಹಾಗೂ ಶಿಲ್ಪ ಕಲೆಯಿಂದ ಜಗತ್ತಿಗೇ ರಾಷ್ಟವನ್ನು ಪರಿಚಯಿಸಿದ್ದಾರೆ,ಈ ಕಾರಣಕ್ಕಾಗಿ ಭವಿಷ್ಯದ ಪೀಳೆಗೆಗೆ ಪರಿಚಯಿಸುವ ಯೋಜನೆಗಳನ್ನು ರೂಪಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಮರ ಶಿಲ್ಪಿ ಜಕಣಾಚಾರಿಯವರ ಪುತ್ಥಳಿಯನ್ನು,ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ನಿರ್ಮಿಸಿಬೇಕಿದೆ ಮತ್ತು ಪ್ರಮುಖ ಗಲ್ಲಿಗಳಿಗೆ,ಪ್ರಮುಖ ಸಾರ್ವಜನಿಕ ಸ್ಥಳಗಳಿಗೆ ಅಥವಾ ವೃತ್ತಗಳಿಗೆ ಜಕಣಾಚಾರಿ ಹೆಸರಿಡಬೇಕಿದೆ, ಈ ಗುರುತರ ಹೊಣೆಗಾರಿಕೆಯನ್ನು ಸರ್ಕಾರಗಳು ಹಾಗೂ ಜಿಲ್ಲಾಡಳಿತಗಳು ಮಾಡಬೇಕಿದೆ ಎಂದರು. ಈ ನಿಟ್ಟಿನಲ್ಲಿ ಕೂಡ್ಲಿಗಿ ತಾಲೂಕಾಡಳಿತಕ್ಕೆ ಈ ಮೂಲಕ ಸಮಾಜದ ಬಂಧುಗಳು ಮನವಿ ಮಾಡುತ್ತಿದ್ದು, ಪಟ್ಟಣದ ವೃತ್ತಕ್ಕೆ ಅಥವಾ ಪ್ರಮುಖ ಸಾರ್ವಜನಿಕ ಸ್ಥಳಕ್ಕೆ ಅಥವಾ ಸಾರ್ವಜನಿಕ ಸ್ಥಳಗಳಕ್ಕೆ ಜಕಣಾಚಾರಿ ಹೆಸರನ್ನ ಇಡಬೇಕಿದೆ ಎಂದು ಅವರು ತಹಶಿಲ್ದಾರರಿಗೆ ಕೋರಿದರು. ತಹಶಿಲ್ದಾರರಾದ ಟಿ.ಜಗದೀಶರವರು ಮಾತನಾಡಿ,ಜಕಣಾಚಾರಿ ರವರ ಶಿಲ್ಪ ಕಲೆ ಕೊಡುಗೆ ಜಗತ್ತಿಗೇ ಮಾದರಿಯಾಗಿದೆ,ಅವರು ಅಮರ ಶಿಲ್ಪಿಯಾಗಿದ್ದಾರೆ ಅವರ ಹೆಸರನ್ನು ಇಡುವ ಕೋರಿಕೆಯನ್ನ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಯುವ ಮುಖಂಡ ಶರಣಪ್ಪಾಚಾರಿ ಮಾತನಾಡಿ,ರಾಷ್ಟಕ್ಕೆ ಭಾರತವನ್ನು ಪರಿಚಯಿಸಿಕೊಡೋದರಲ್ಲಿ ಜಕಣಾಚಾರಿ ರವರ ಕೊಡುಗೆ ಅಪಾರವಾದದ್ದು, ಪ್ರವಾಸಿ ತಾಣಗಳನ್ನು ನಿರ್ಮಿಸುವಲ್ಲಿ ಜಕಣಾಚಾರಿ ಕೊಡುಗೆ ಅಪಾರವಾದ್ದು,ಶಿಲ್ಪಕಲೆಗಳಿರುವ ಕಡೆಗಳಲ್ಲಿ ಅವರ ಪುತ್ಥಳಿಗಳನ್ನು ನಿರ್ಮಿಸಬೇಕಿದೆ. ಅವರನ್ನು ಹೊಸ ಪೀಳಿಗೆಗೆ ಪರಿಚಯಿಸುವ ಯೋಜನೆಗಳನ್ನು,ಸರ್ಕಾರಗಳು ಜಿಲ್ಲಾಡಳಿತ ತಾಲೂಕಾಡಳಿತ ಕಾರ್ಯರೂಪಕ್ಕೆ ತರಬೇಕಿದೆ. ಪ್ರಥಮವಾಗಿ ಜಕಣಾಚಾರಿ ನಿರ್ಮಿಸಿರುವ ಪ್ರತಿ ಶಿಲ್ಪಕಲೆಯೊಂದಿಗೆ, ಅವರ ಹೆಸರನ್ನು ನಮೂದಿಸುವ ಮಹತ್ತರ ಕಾರ್ಯ ಮೊದಲು ಮಾಡಬೇಕಿದೆ.ಈ ಮೂಲಕ ಭವಿಷ್ಯದ ಪೀಳಿಗೆಗೆ ಜಕಣಾಚಾರಿ ರವರ ಹೆಸರು ಪರಿಚಯಿಸುವ ಜವಾಬ್ದಾರಿಯನ್ನು, ಪ್ರಮುಖ ಜನಪ್ರತಿ ನಿಧಿಗಳು ಜಿಲ್ಲಾಡಳಿತ ತಾಲೂಕಾಡಳಿತಗಳು ಮಾಡಬೇಕೆಂದರು. ವಿಶ್ವ ಕರ್ಮ ಸಮಾಜದ ಸಂಘಟನೆ ಪದಾಧಿಕಾರಿಗಳು,ಸಮಾಜ ಹೋಬಳಿ ಮುಖಂಡರು, ಸಮಾಜದ ಮುಖಂಡರು,ವಿವಿದ ಸಂಘಟನೆಗಳ ಪದಾಧಿಕಾರಿಗಳು,ಗ್ರಾಮ ಲೆಕ್ಕಿಗ ನವೀನ ಕುಮಾರ ಹಾಗೂ ತಾಲೂಕಾಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿ,ನಾಗರೀಕರು ಮತ್ತಿತರರು ಉಪಸ್ಥಿತರಿದ್ದರು…….

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend