ಸಿಂಧನೂರು : ವರ್ಷ ಪೂರ್ತಿ ಸಸಿ ನೆಡುವ ಸಂಕಲ್ಪ- ಅಮರೇಗೌಡ ಮಲ್ಲಾಪೂರು…!!!

Listen to this article

ಸಿಂಧನೂರು : ವರ್ಷ ಪೂರ್ತಿ ಸಸಿ ನೆಡುವ ಸಂಕಲ್ಪ- ಅಮರೇಗೌಡ ಮಲ್ಲಾಪೂರು.

ವರ್ಷದ ಮೊದಲನೇ ದಿನವಾದ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಮ್ಮಾಪೂರದಲ್ಲಿ 365ದಿನ 22 ಸಸಿ ನೆಡುವ ವನಸಿರಿ ಸಂಕಲ್ಪಕ್ಕೆ ಚಾಲನೆ ನೀಡಿದ್ದೇವೆ. ಕಲ್ಯಾಣ ಕರ್ನಾಟಕವನ್ನ ಹಸಿರುಮಯ ಮಾಡುವ ಉದ್ದೇಶದಿಂದ ಈ ಸಂಕಲ್ಪ ಮಾಡಿದ್ದೇವೆ.ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ರಾಜ್ಯದ ತುಂಬೆಲ್ಲ ವಿಸ್ತಾರ ಮಾಡುವ ಯೋಚನೆಯಲ್ಲಿ ಇದ್ದೇವೆ ಎಂದು ವನಸಿರಿ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ ತಿಳಿಸಿದರು.

ಸರ್ಕಾರಿ ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲೆ ತಿಮ್ಮಾಪುರು ಶಾಲೆ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ 22 ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ನಿಜಕ್ಕೂ ಸ್ವಾಗತಾರ್ಹ.ವನಸಿರಿ ತಂಡ ಸುಮಾರು ವರ್ಷಗಳಿಂದ ತಾಲೂಕಿನಾದ್ಯಂತ ಪರಿಸರದ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ವೃಕ್ಷ ಬಂಧನ,ಸಸಿಗಳನ್ನು ಬೆಳೆಸುವ ನರ್ಸರಿ,ಬೇಸಿಗೆ ದಿನಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸಲು ಅರವಟ್ಟಿಗೆ,ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಅವರು ಹೀಗೆ ತಮ್ಮ ಕಾಯಕವನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಪ್ರೌಢ ಶಾಲೆಯ ಮುಖ್ಯಗುರುಗಳಾದ ಚಂದ್ರ ಮೌಳೇಶ್ವರ ಮಾತನಾಡಿದರು.

2022ರ ವರ್ಷದಲ್ಲಿ 365 ದಿನ 22 ಸಸಿ ನೆಡುವ ಸಂಕಲ್ಪ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಮರೇಶ್ ಶಿಕ್ಷಕರು,ಸರ್ಕಾರಿ ಪ್ರಾಥಮಿಕ ಗುರುಗಳಾದ ವಿರುಪಾಕ್ಷಪ್ಪ, ರಂಗನಾಥ್, ಪ್ರಕಾಶ್, ಶರಣೆಗೌಡ,ಗಿರಿಸ್ವಾಮಿ,ವಿಶ್ವನಾಥ್ ಪಾಟೀಲ್ ಹರ್ಲಾಪುರ, ವೆಂಕಟರಡ್ಡಿ ಹೇಡಿಗಿನಾಳ, ರಾಜು ಬಳಗಾನೂರ, ವೀರಭದ್ರಯ್ಯಸ್ವಾಮಿ ತಿಮ್ಮಪುರು,ವನಸಿರಿ ಮುದಿಯಪ್ಪ, ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು,ವನಸಿರಿ ಫೌಂಡೇಶನ್ ಸರ್ವ ಸದಸ್ಯರು, ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend