ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ವತಿಯಿಂದ ಉದ್ಯಮಿದಾರರಿಗೆ ತರಬೇತಿ ಕಾರ್ಯಕ್ರಮ…!!!

Listen to this article

.ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿನ ಸಣ್ಣ ಆಹಾರ ಮಾರಾಟಗಾರರ ಉತ್ಪಾದಕರಿಗೆ ಹಾಗೂ ಆಹಾರ ಸಂಸ್ಕರಣಾ ಉದ್ಯಮದಾರರಿಗೆ ತರಬೇತಿ.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ:
ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಬಳ್ಳಾರಿ ವಿಜಯನಗರ ಜಿಲ್ಲೆ
ಸಣ್ಣ ಆಹಾರ ಮಾರಾಟಗಾರರು ಉತ್ಪಾದಕರು ಆಹಾರ ಸಂಸ್ಕರಣಾ ಉದ್ಯಮದವರು ಸೇರಿದಂತೆ ವಿವಿಧ ರೀತಿಯ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಆಹಾರ ಸೇವೆಗಳ ಗುಣಮಟ್ಟದ ಉದ್ದೇಶಗಳನ್ನು ತಿಳಿಸಿಕೊಡಲು ಆಹಾರ ಸಂರಕ್ಷಣಾ ಹಾಗೂ ಗುಣಮಟ್ಟ ಪ್ರಾಧಿಕಾರ ಹಾಗೂ ಗ್ಲೋಬಲ್ ಇನ್ಸ್ಟಿಟ್ಯೂಟ್ ಫಾರ್ ಎಜುಕೇಶನ್ ಅಂಡ್ ರಿಸರ್ಚ್ ಫೌಂಡೇಶನ್ ಸಹಭಾಗಿತ್ವದಲ್ಲಿ ನಿಗದಿತ ಶುಲ್ಕದೊಂದಿಗೆ ಪೋಸ್ಟ್ ಯಾಕ್ (Fostac) ತರಬೇತಿಯನ್ನು ಆಯೋಜಿಸಿದೆ. ಇದರ ಉದ್ದೇಶ ಆಹಾರ ಗುಣಮಟ್ಟ ಹಾಗೂ ತಾಂತ್ರಿಕ ನೈಪುಣ್ಯತೆ ಗಳಿಸಲು ಹಾಗೂ ಬದಲಾಗುತ್ತಿರುವ ಜಗತ್ತಿನೊಂದಿಗೆ ತಾಂತ್ರಿಕವಾಗಿ ವ್ಯವಹರಿಸಲು ಮುಖ್ಯವಾಗಿ ಆದಾಯ ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಆದ ಕಾರಣ ಎಲ್ಲಾ ಸಣ್ಣ ಹಾಗೂ ದೊಡ್ಡ ಉದ್ದಿಮೆದಾರರು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ತರಬೇತಿಯೊಂದಿಗೆ ಎಲ್ಲಾ ಆಹಾರ ವಹಿವಾಟು ಉದ್ದಿಮೆದಾರರು Fssai ಪರವಾನಿಗೆ ಅಥವಾ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಆದಕಾರಣ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಇರುವಂತಹ ಕಿರಣಿ ಅಂಗಡಿ ,ಹೋಟೆಲ್ ,ಬೇಕರಿ ,ಬೀದಿಬದಿ ವ್ಯಾಪಾರಿಗಳು ಇದರ ಸದುಪಯೋಗವನ್ನು ಕಡ್ಡಾಯವಾಗಿ ತರಬೇತಿಯ ಜೊತೆಗೆ ಪರವಾನಿಗೆ ಹಾಗೂ ನೊಂದಣಿ ಯನ್ನು ಮಾಡಿಕೊಳ್ಳಬೇಕಾಗಿ ಬಳ್ಳಾರಿ ಜಿಲ್ಲೆ ಅಂಕಿತಾ ಧಿಕಾರಿಗಳು ಈ ಮೂಲಕ ತಿಳಿಸಿರುತ್ತಾರೆ

ವಿಶೇಷ ಸೂಚನೆ : ಸದರಿ ತರಬೇತಿಯ ಜೊತೆಗೆ ಎಲ್ಲಾ ಆಹಾರ ವಹಿವಾಟು / ಉದ್ದಿಮೆದಾರರು (FBO’S) ಎಫ್. ಎಸ್. ಎಸ್ .ಎ . ಐ (FSSAI- BALLARI /VIJAYANAGARA) ಪರವಾನಿಗೆ /ನೊಂದಣಿ ಪಡೆದುಕೊಳ್ಳಲು ಕಡ್ಡಾಯವಾಗಿದೆ. ಎಂದು ಈ ಮೂಲಕ ಸೂಚಿಸಲಾಗಿದೆ . ಇಲ್ಲದಿದ್ದಲ್ಲಿ ಸೆಕ್ಷನ್ 63ರ ಪ್ರಕಾರ 5 ಲಕ್ಷದವರೆಗೆ ದಂಡ ಮತ್ತು ಆರು ತಿಂಗಳವರೆಗೆ ಕಾರಾಗೃಹ ಮತ್ತು ಕೋರ್ಟಿನಲ್ಲಿ ಮೊಕದ್ದಮೆ /ದಾವೆ ಹಾಕಲು ಕಾನೂನಿನಲ್ಲಿ ಅವಕಾಶವಿರುತ್ತದೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend