ನಿಂಬಳಗೆರೆ ಗ್ರಾಮದ ಶ್ರೀ. ಬಿ. ಕೆ. ವಿ .ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ. ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.
ನಿಂಬಳಗೆರೆ.
ನಿಂಬಳಗೆರೆ ಗ್ರಾಮದ ಶ್ರೀ. ಬಿ. ಕೆ. ವಿ .ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ. ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ
ನಿಂಬಳಗೆರೆ ಗ್ರಾಮದ ಶ್ರೀ ಬಿಕೆವಿ. ಪ್ರೌಢಶಾಲೆ ಆವರಣದಲ್ಲಿರಾಷ್ಟ್ರೀಯ ಗಣಿತ ದಿನಾಚರಣೆ
ಪ್ರಯುಕ್ತಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು.ಸಮಾರೋಪ ಸಮಾರಂಭವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮಮಹಾಂತೇಶ್, ಉಪಾಧ್ಯಕ್ಷರಾದಪಾಲಾಕ್ಷ,ಸರ್ವ ಸದಸ್ಯರು, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯುವರಾಜ್ ನಾಯ್ಕ್ರರ ವರಿಂದ ಉದ್ಘಾಟನೆಮಾಡಲಾಯಿತು. ನಂತರ ಶ್ರೀನಿವಾಸ ರಾಮಾನುಜನ್ ಭಾವಚಿತ್ರಕ್ಕೆ ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಎಂ ಜಿ ಪ್ರಕಾಶ್ ಮತ್ತು ಸರ್ವ ಸದಸ್ಯರು ಪುಷ್ಪ ನಮನ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನವನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಉದ್ಘಾಟಿಸಿದರು. ಈ ಸಮಾರಂಭವನ್ನು ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯುವರಾಜ್ ನಾಯ್ಕರವರು ಮಾತನಾಡಿ ಗಣಿತ ವಿಷಯವು ಕಬ್ಬಿಣದ ಕಡಲೆಯಲ್ಲ ಅರ್ಥೈಸಿಕೊಂಡರೆ ಸುಲಿದ ಕಬ್ಬು ತಿಂದಷ್ಟೇ ಸುಲಭದ ವಿಷಯ ಎಂದು ಹೇಳಿದರು. ಈ ಶಾಲೆಯಲ್ಲಿ ಗಣಿತ ದಿನಾಚರಣೆ ತುಂಬಾ ಅರ್ಥಪೂರ್ಣವಾಗಿ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ.. ಗಣಿತ ಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕರ ಸಹಕಾರದಿಂದ ಪಠ್ಯಕ್ರಮ ಉತ್ತಮವಾಗಿ ನಡೆದಿದೆ ಎಂದರು. ನಿಂಬಳಗೆರೆ ಯ ಶ್ರೀ ಬಿ. ಕೆ. ವಿ.ಸರ್ಕಾರಿ ಪ್ರೌಢಶಾಲೆ ಗಣಿತದ ಮಾದರಿ ಶಾಲೆಹಾಗೂ ಪ್ರೌಢಶಾಲೆ ನಮ್ಮ ತಾಲೂಕಿನ ಹೆಮ್ಮೆಯ ಎಂದು ಸಂದರ್ಭದಲ್ಲಿ ಮಾತನಾಡಿದರು.
ಹಿರಿಯ ಗಣಿತ ಶಿಕ್ಷಕರಾದ ಶ್ರೀ ಮನೋಹರ ಸ್ವಾಮಿ ಅವರು ದಿನನಿತ್ಯ ಜೀವನದಲ್ಲಿ ಗಣಿತ ಎಂಬ ವಿಷಯ ಬಹಳ ಪ್ರಾಮುಖ್ಯತೆ ಎಂಬ ವಿಷಯದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿಸಿಯೂಟ ಯೋಜನೆ ಅಧಿಕಾರಿ ಶ್ರೀಲಕ್ಷ್ಮಣ ಸಿಂಗ್ ರವರು ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಕ್ಕೀರಪ್ಪ ಮುಖ್ಯಗುರುಗಳು ವಹಿಸಿದ್ದರು, ಶ್ರೀ ಕೊಟ್ರೇಶಪ್ಪ ನವರು ಶುಭಕೋರಿದರು, ಶ್ರೀ ಶರ್ಮತ್ ಕಣ್ಣದ ಮನಿ ಸ್ವಾಗತಿಸಿದರು, ಪ್ರಸ್ತವಿಕ ಶ್ರೀ ಮಂಗಳ ಗೌರಮ್ಮ ಮಾತನಾಡಿದರು. ಕನ್ನಡ ಶಿಕ್ಷಕ ವೀರಭದ್ರಪ್ಪನವರು ನಿರೂಪಿಸಿದರು. ಶ್ರೀ. ಶಿವಪುತ್ರ ಗೌಡ ವಂದನಾರ್ಪಣೆ ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಇಸಿಓ ಅಜ್ಜಪ್ಪ ಶಿಕ್ಷಕರಾದ ಎಂಬಿ ನಾಗರಾಜ್, ವಿದ್ಯಾರಣ್ಯ ಹಾಲಪ್ಪ,ಅಂಜಿನಮ್ಮ .ಸಿದ್ದೇಶ್ ಪಾಟೀಲ್.. ಪಾತೇಶ. ಕುಬೇಂದ್ರ ಭೂಷಣ
.ಮಲ್ಲಪ್ಪ.ಅಮೃತ ಮ್ಮ.ವಿದ್ಯಾರ್ಥಿ ವಿದ್ಯಾರ್ಥಿನಿಯರು. ಶಾಲಾ ಸಿಬ್ಬಂದಿ ವರ್ಗ ಸಾರ್ವಜನಿಕರು ಪತ್ರಕರ್ತರು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend