ಮಾಹಿತಿ ಹಕ್ಕು ಜೊತೆಗೆ ಮಾನವೀಯತೆಗೆ ಹೆಚ್ಚು ಹೊತ್ತು ಕೊಡಬೇಕಾಗಿದೆ, ಪ್ರಶಾಂತ್ ಸಾಗರ ಸ್ವಾಮೀಜಿ…,,,

Listen to this article

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಮಾಹಿತಿ ಹಕ್ಕು ಜೊತೆಗೆ ಮಾನವೀಯತೆಗೆ ಹೆಚ್ಚು ಒತ್ತು ಕೊಡಬೇಕಾಗಿದೆ-ಪ್ರಶಾಂತ ಸಾಗರ ಸ್ವಾಮೀಜಿ*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ,ಸಮಾನ ಮನಸ್ಕ ಸಾಮಾಜಿಕ ಕಳ ಕಳಿಯ ಯುವಕರಿಂದ ಮಾಹಿತಿ ಹಕ್ಕು ಅಧಿನಿಯಮ ಕಾರ್ಯಗಾರ ಜರುಗಿತು.ಕಾರ್ಯಗಾರ ಸಾನಿಧ್ಯ ವಹಿಸಿದ್ದ ಶ್ರೀಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು,ಪ್ರತಿಯೊಬ್ಬರೂಮಾಹಿತಿ ಹಕ್ಕು ಜ್ಞಾನ ಹೊಂದಬೇಕು ಜೊತೆಗೆ ಜೊತೆಗೆ ಮಾನವೀಯ ಮೌಲ್ಯಗಳನ್ನ ಮೈಗೂಡಿಸಿಕೊಂಡಲ್ಲಿ ಮಹಾ ಮಾನವನಾಗಬಹುದಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಮಾತ್ರವಲ್ಲ ಬಹುತೇಕ ಎಲ್ಲಾ ಹಂತದಲ್ಲಿಯೂ ಬ್ರಷ್ಟಾಚಾರ ತಾಂಡವಾಡುತ್ತಿದೆ, ಮಾನವೀಯ ಮೌಲ್ಯಗಳು ಕಾಣದಾಗಿವೆ ಎಂದು ಅವರು ಭಾವುಕರಾಗಿ ಕಳವಳ ವ್ಯಕ್ತಪಡಿಸಿದರು.

ಪ್ರತಿಯೊಬ್ಬರೂ ಮಾಹಿತಿ ಹಕ್ಕು ಜ್ಞಾನ ಹೊಂದಬೇಕು ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಡಿವೈಎಸ್ಪಿ ಹರೀಶ್ ಮಾತನಾಡಿದರು, ಹಕ್ಕುಗಳ ಸದುಪಯೋಗ ಪಡಿಸಿಕೊಳ್ಳಬೇಕೆ ಹೊರತು ದುರುಪಯೋಗ ಪಡಿಸಿಕೊಳ್ಳಬಾರದು,ಜೊತೆಗೆ ಮೂಲಭೂತ ಕರ್ಥವ್ಯಗಳನ್ನು ಸರ್ವರೂ ಅರಿತು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ.ಸಂವಿಧಾನದ ಸದಪಯೋಗ ಆಗಲಿ ದುರುಪಯೋಗ ಆಗದಿರಲಿ ಎಂದರು.ಪ್ರಾಸ್ಥಾವಿಕವಾಗಿ ವಕೀಲರು ಹಾಗೂ ಹೋರಾಟಗಾರ ಕಾರ್ಮಿಕ ಮುಖಂಡ ಸಿ.ವಿರುಪಾಕ್ಷಪ್ಪ ಮಾತನಾಡಿದರು.ವೇದ್ಯಾಧಿಕಾರಿ ವಿನಯಕುಮಾರ ಮಾತನಾಡಿದರು.ಪ.ಯ.ಗಣೇಶ ಹಾಗೂ ಅಮರ ಬಿ.ಕಳ್ಳಿಗುಡ್ಡ ಟಿ.ಹೆಚ್.ಎಮ್.ರಾಜಕುಮಾರ ಸೇರಿದಂತೆ ಇತರರು ಮಾತನಾಡಿದರು.ತಾಪಂ ಅಧ್ಯಕ್ಷೆ ಶ್ರೀಮತಿ ನಾಗರತ್ನಮ್ಮ ವೇದಿಕೆಯಲ್ಲಿದ್ದರು.ಬುಳ್ಳಪ್ಪ ಪ್ರಾರ್ಥಿಸಿದರು,ಕೆ.ಅಜ್ಜಯ್ಯ ಸ್ವಾಗತಿಸಿದರು,ಟಿ.ಎಲ್.ಕೃಷ್ಣ ನಿರೂಪಿಸಿದರು.ಗ್ರಾಪಂ ಹಾಗೂ ಪಪಂ ಸದಸ್ಯರು,ಸೇರಿದಂತೆ ವಿವಿದ ಜನಪ್ರತಿನಿಧಿಗಳು ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಗಾರದಲ್ಲಿ ಭಾಗಿಯ‍ಾಗಿದ್ದರು.ಮಾಜಿ ಸೈನಿಕ ಹೆಚ್.ರಮೇಶ,ಸಾಲುಮನಿ ರಾಘವೇಂದ್ರ,ಬಿ.ಆರ್.ಇಮ್ರಾನ್,ಸಿ.ನೂರುಲ್ಲಾ,ಮಹಮ್ಮದ್ ಇಸಾಕ್,ಕೆ.ಗುರು,ಮಹೇಶ ಹೆಗ್ಡ‍ಾಳು ಸೇರಿದಂತೆ.ಸಾಮಾಜಿಕ ಕಳ ಕಳಿಯುಳ್ಳ ಸಮಾನ ಮನಸ್ಕರೆಲ್ಲರೂ ಸೇರಿ ಕಾರ್ಯಕ್ರಮ ಆಯೋಜಿಸಿದ್ದರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend