ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮಡಕಲ ಕಟ್ಟೆ ಸಮಸ್ತ ಗ್ರಾಮಸ್ಥರಿಂದ ಮನವಿ ಪತ್ರ…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು

ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ
ಮಡಕಲ ಕಟ್ಟೆ ಸಮಸ್ತ ಗ್ರಾಮಸ್ಥರಿಂದ ಮನವಿ ಪತ್ರ.

ತಾಲೂಕಿನ ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಡ ಕಲ ಕಟ್ಟೆ ಗ್ರಾಮವು ತಾಲೂಕಿನಿಂದ 35 ಕಿಲೋಮೀಟರ್ ದೂರವಿದ್ದು ಇಲ್ಲಿ ವಾಸ ಮಾಡುವ ಜನರು ಮೂಳೆ ಸವೆತ ಮೊಣಕಾಲು ನೋವು ಗಳಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಕಾರಣ ಇಲ್ಲಿ ಸವಳು ಮಿಶ್ರಿತ ನೀರು ಇದ್ದು ಕುಡಿಯುವ ನೀರಿನ ಪ್ರಮಾಣ ಶೇಕಡ 600tds ಇರುತ್ತದೆ ಈ ನೀರನ್ನು ಕುಡಿದು ಇಲ್ಲಿ ಮಕ್ಕಳು ವಯಸ್ಕರು ವೃದ್ಧರು ಮೊಣಕಾಲು ನೋವು ಮೂಳೆ ನೋವು ಸೊಂಟ ನೋವುಗಳಿಂದ ಬಳಲುತ್ತಿದ್ದಾರ ಶುದ್ಧ ನೀರನ್ನು ತರಬೇಕೆಂದರೆ ನಮ್ಮ ಊರಿಂದ ಬೇರೆ ಊರಿಗೆ ಮೂರು ಕಿಲೋಮೀಟರ್ ಹೋಗಿ ನೀರು ತರಬೇಕು ಕಾರಣ ಮಡ ಕಲಕಟ್ಟೆ ಗ್ರಾಮದಲ್ಲಿ ಶುದ್ಧ ನೀರಿನ ಘಟಕವನ್ನು ಸ್ಥಾಪಿಸುವಂತೆ ಹಾಗೂ ಊರಿನ ವಯಸ್ಕರು ಬೇರೆ ಊರಿಗೆ ದುಡಿಯಲಿಕ್ಕೆ ವಲಸೆ ಹೋಗುವುದರಿಂದ ಮನೆಯಲ್ಲಿ ವೃದ್ಧರ ಮಾತ್ರ ಉಳಿದುಕೊಳ್ಳುತ್ತಾರೆ.

ಬೇರೆ ಊರಿನಿಂದ ನೀರು ತರಲು ಅಥವಾ ದಿನನಿತ್ಯ ಚಟುವಟಿಕೆಗಳಿಗೆ ಸರ್ಕಾರಿ ಕೆಲಸಗಳಿಗೆ ಹೋಗಲು ಸಾರಿಗೆ ವ್ಯವಸ್ಥೆಯೂ ಕೂಡ ಇಲ್ಲಿರುವುದಿಲ್ಲ ಸಾರಿಗೆ ವ್ಯವಸ್ಥೆಯ ಕೂಡ ತಾವು ಕಲ್ಪಿಸಿಕೊಡಬೇಕೆಂದು ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಶಾಸಕರು ಕೂಡ್ಲಿಗಿ ಕ್ಷೇತ್ರ, ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಮತ್ತು ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಪ್ರಧಾನಮಂತ್ರಿಗಳಿಗೆ ಮಡಕಲ ಕಟ್ಟೆ ಗ್ರಾಮದ ಸಮಸ್ತ ಗ್ರಾಮಸ್ಥರು ಅರ್ಜಿ ಸಲ್ಲಿಸುವುದರ ಮೂಲಕ ಮನವಿ ಮಾಡಿಕೊಂಡರು. ಈಸಂದರ್ಭದಲ್ಲಿ ಗ್ರಾಮಸ್ಥರಾದ ಬಸಣ್ಣ ನವರು ಸಿದ್ದೇಶ ,ಮಂಜುನಾಥ ,ಜೀ ನಾಗಣ್ಣ ,ಸೋಮಶೇಖರ, ರತ್ನಮ್ಮ ,ಅನುಸೂಯಮ್ಮ , G. ನಾಗಣ್ಣ , ಜಾತಪ್ಪ. ಬಸಲಿಂಗಪ್ಪ, ಸಮಾಜ ಸೇವಕ ಓಬಣ್ಣ್ಣನವರು ಸೇರಿದಂತೆ ಮಡ ಕಲ ಕಟ್ಟೆ ಯಜಮಾನರು ಸಾರ್ವಜನಿಕರು ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend