ಬಾಡಿಗೆಯಾದಾರಿತ ಕೃಷಿ ಯಂತ್ರಧಾರೆ ಉಪಕರಣಗಳಿಗೆ ಕೂಡ್ಲಿಗಿ ಕ್ಷೇತ್ರದ ಶಾಸಕರಿಂದ ಚಾಲನೆ…!!!

Listen to this article

ದಿನಾಂಕ 6/06/2021 ವಿಜಯನಗರ ಜಿಲ್ಲೆ ಕೂಡ್ಲಿಗಿ,ತಾಲೂಕು ಕಾನಹೊಸಹಳ್ಳಿ
ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಬಾಡಿಗೆಯಾದಾರಿತ ಕೃಷಿ ಯಂತ್ರಧಾರೆ ಉಪಕರಣಗಳಿಗೆ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಎನ್ ವೈ ಗೋಪಾಲ ಕೃಷ್ಣ ರವರು ಚಾಲನೆ ನೀಡಿದರು.ಚಾಲನೆ ನೀಡಿ ಮಾತನಾಡಿ ಕೃಷಿ ಚಟುವಟಿಕೆಗಳಿಗೆ ಸೇರಿದಂತೆ ಉಪಕರಣಗಳ ಯಂತ್ರಗಳು ಹಾಗೂ ಪರಿಕರಗಳನ್ನು ಕೃಷಿ ಇಲಾಖೆ ನಿಗದಿಪಡಿಸಿದ ಬಾಡಿಗೆ ದರದಲ್ಲಿ ರೈತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಹೇಳಿದರು. ನಂತರ ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ದ ಕೊರತೆಯಾಗಬಾರದು ಆದಷ್ಟು ಬೇಗ ಶೇಂಗಾ ರೈತರಿಗೆ ಕೊಡಬೇಕಾಗಿ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು, ನಂತರ ಸೂರ್ಯಕಾಂತಿ ಮೆಕ್ಕೆಜೋಳ ತೊಗರಿ ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ವಿತರಿಸ ಇತ್ತೀಚೆಗೆ ಮೇವಿನ ಬಣವೆಗಳು ಸುಟ್ಟ ಫಲಾನುಭವಿಗಳಾದ ಗುಂಡುಮುಣುಗು ಮುಕ್ಕಣ್ಣ ಹಾರಕಬಾವಿ ಬಸಮ್ಮ ಮಾಕನಡಕು ನಾಗೇಂದ್ರಪ್ಪ ಇವರಿಗೆ ಸಹಾಯ ಧನದ ಚೆಕ್ ವಿತರಿಸಿದರು.ರೈತರಿಗೆ ಯಾವುದೇ ರೀತಿ ಬಿತ್ತನೆ ಬೀಜಗಳು ಹಾಗೂ ರಸ ಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ ಎಲ್ಲಾ ದಾಸ್ತಾನುಗಳನ್ನು ಸಂಗ್ರಹಿಸಿಡಲಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿಗಳಾದ ಶ್ರೀ ವಾಮದೇವ ಕೊಳ್ಳಿ ರವರು ಮಾನ್ಯ ಶಾಸಕರಾದ ಗೋಪಾಲಕೃಷ್ಣ ಅವರಿಗೆ ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ನಾಗರತ್ನಮ್ಮ ಕೆ ಲಿಂಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನೀಲಮ್ಮ ಬೊಮ್ಮಯ್ಯ , ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೆಸ್ವಾಮಿ, ಜಿಲ್ಲಾ ಪಂಚಾಯತ್ ಸದಸ್ಯರಾದ ರೇವಣ್ಣ ,ತಾಲೂಕು ಪಂಚಾಯಿತಿ ಸದಸ್ಯರಾದ ಪಾಪಣ್ಣನವರ, ಗ್ರಾಮ ಪಂಚಾಯಿತಿ ಸದಸ್ಯರಾದ ಜೋಗಿಹಳ್ಳಿ ಸಿದ್ದಪ್ಪ ಮತ್ತು ಹೊನ್ನೂರ ಸ್ವಾಮಿ, ಕೃಷಿ ಇಲಾಖೆ ಯೋಜನಾಧಿಕಾರಿ ಶ್ರವಣ್ ಕುಮಾರ್, ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ನಾಗರತ್ನಮ್ಮನವರು ಮತ್ತು ಸಿಬ್ಬಂದಿ ,ಬಿಜೆಪಿ ಮಂಡಲ ಅಧ್ಯಕ್ಷರಾದ ಚನ್ನಪ್ಪನವರು, ಹೊಸಹಳ್ಳಿ ರೈತ ಸಂಪರ್ಕ ಕೇಂದ್ರ ಅಧಿಕಾರಿ ಟೀ ಚೈತ್ರ, ಸಹಾಯಕ ಕೃಷಿ ಅಧಿಕಾರಿ ಮಾನಸ ಕೆಎಂ, ಆತ್ಮ ಯೋಜನೆ ಎಟಿಎಂ ರಾಮಕೃಷ್ಣ. ದಲಿತ ಮುಖಂಡ ಹೇಮಂತ್ ಕುಮಾರ್, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ರಾಕೇಶ್ ,ರಾಜಪ್ಪ ,ಜಿ ನಾಗರಾಜ್, ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend