ಕೊರೋನಾ ಎರಡನೇ ಅಲೆಯಲ್ಲಿಯು ಸಹ ಸಾಮಾಜಿಕ ಅಂತರದಿಂದ ಕೆಲಸವನ್ನು ಮಾಡಲು ಸೂಚನೆ…!!!

Listen to this article

ದಿನಾಂಕ 4 5. 2021 . ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ಗ್ರಾಮಪಂಚಾಯಿತಿ
ಪೂಜಾರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಧ ಶ್ರೀಮತಿ ಶಿಲ್ಪಾ ಬಸಪ್ಪನವರು ಹಾಗೂ ಸದಸ್ಯ ಗೌರಮ್ಮ ಮಂಜುನಾಥ್ ರವರು ತಿಪ್ಪೇನಹಳ್ಳಿ ಗ್ರಾಮದ ಕೆರೆಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸಮಾಡುತ್ತಿರುವ ಮಾಡುತ್ತಿರುವ ಕೂಲಿಕಾರ್ಮಿಕರಿಗೆ ,ಕೋವಿಡ್ 19 ವೈರಸ್ ವ್ಯಾಪಕವಾಗಿ ಹರಡುವದರ ಬಗ್ಗೆ, ಜಾಗೃತಿ ಮೂಡಿಸುವ ಕುರಿತು ಕಾರ್ಮಿಕರು ಕೆಲಸ ಮಾಡುತ್ತಿರುವ ಕೆರೆಗೆ ಹೋಗಿ ಮಾತನಾಡಿ ಕರೋನವೈರಸ್ ವ್ಯಾಪಕವಾಗಿ ಹರಡುವುದರಿಂದ ಪ್ರತಿಯೊಬ್ಬರು ಕೂಲಿಕಾರ್ಮಿಕರು ಮಾಸ್ಕನ್ನು ಧರಿಸಬೇಕು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡಬೇಕು ಮನೆಗೆ ಹೋದಮೇಲೆ ಪ್ರತಿಯೊಬ್ಬರು ಸ್ನಾನ ಮಾಡಿಕೊಂಡು ಊಟ ಮಾಡುವ ಕುರಿತು ಮಾತನಾಡಿದರು. ಅಧ್ಯಕ್ಷರು ಮಾತನಾಡಿ ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಕರೋನವೈರಸ್ ಹರಡುವುದು ಕುರಿತು ಜಾಗೃತಿ ಮೂಡಿಸಿದಾಗ ಹಾಗೂ ಪ್ರತಿಯೊಬ್ಬರು ಅನಾವಶ್ಯಕವಾಗಿ ತಿರುಗಾಡಿದೆ ಮನೆಯಲ್ಲಿ ಇದ್ದಾಗ ಮಾತ್ರ ತಡೆಯಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ ಎಫ್ ಟಿ ದಾನೇಶ್ ಮಾತನಾಡಿ ಲಾಕ್ ಡೌನ್ ಇರುವುದರಿಂದ ಪ್ರತಿಯೊಬ್ಬ ಕೂಲಿಕಾರ್ಮಿಕರಿಗೆ ಬೇರೆ ಕಡೆ ಎಲ್ಲೂ ಹೋಗದೆ ಉದ್ಯೋಗ ಖಾತ್ರಿ ಯೋಜನೆಗಳು ಕಾರ್ಮಿಕರಿಗೆ ಬಹಳ ಸಹಕಾರಿಯಾಗಿವೆ ಪ್ರತಿಯೊಬ್ಬರಿಗೂ ಮಾಸ್ಕದರಿ ಸುವಂತೆ ,ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸಮಾಡುವಂತೆ ಕೂಲಿಕಾರ್ಮಿಕರಿಗೆ ಹೇಳಿದರು. ದಲಿತ ಮುಖಂಡ ಹಾಗೂ ಮೇಟಆದ ಮಾರೇಶ್ ಪ್ರತಿಯೊಬ್ಬ ನಾಗರಿಕರು ಕರೋನ ವಾರಿಯರ್ಸ್ ಆದಲ್ಲಿ ಈ ಮಹಾಮಾರಿ ಕರೋನವನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿ ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಮಾಸಿಕ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಸಪ್ಪ. ಪೂಜಾರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ್ .ಶ್ರೀಮತಿ ಗೌರಮ್ಮ ಮಂಜುನಾಥ್ , ಗ್ರಾಮ ಪಂಚಾಯತಿ ಸದಸ್ಯರು ಬಿ.ಎಫ್. ಟಿ. ದಾನೇಶ್ ಕಾಯಕಬಂದು ಬಂದು ಮಾರೇಶ್. ತಿಪ್ಪೆ ಹಳ್ಳಿ ಗ್ರಾಮದ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು..

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend