ವಿಜಯನಗರ ಜಿಲ್ಲೆ .ಕೂಡ್ಲಿಗಿ ತಾಲೂಕು. ಪಟ್ಟಣದಲ್ಲಿ ಕೊರೊನಾ ಆರ್ಭಟ…!!

Listen to this article

*ದಿನಾಂಕ 2.5 .2021. ವಿಜಯನಗರ ಜಿಲ್ಲೆ .ಕೂಡ್ಲಿಗಿ ತಾಲೂಕು.* *ಕೂಡ್ಲಿಗಿ:* *ಪಟ್ಟಣದಲ್ಲಿ ಕೊರೊನಾ ಆರ್ಭಟ* ರುದ್ರ ತಾಂಡವಾಡುತ್ತಾ ದಿನಾಲೂ ಸೊಂಕಿತರ ಸಂಖ್ಯೆಯ ಪ್ರಕರಣಗಳು ಮಾತ್ರ ಹೆಚ್ಚುತ್ತಾ ಹೋದರೂ ಜನಕ್ಕೆ ಮಾತ್ರ ಅದರ ಪರಿವೆ ಇಲ್ಲ, ಕೆಲವು ಜನರು,ಸಾರ್ವಜನಿಕರ ಕೆಲಸ ಸುತ್ತಾಡುವುದೇ ಅವರ ಕೆಲಸವಾಗಿಬಿಟ್ಟಿದೆ. ಡಿವೈಎಸ್ಪಿ ಹರೀಶರೆಡ್ಡಿ ರಸ್ತೆಯಲ್ಲಿ ಲಾಟಿ ಇಡಿದು ಬೆಳಿಗ್ಗೆ ೮.೩೦ಕ್ಕೆ ವಿಕೆಂಡ್ ಇದ್ದರು ಅಂಗಡಿ ಮುಕ್ಕಟ್ಟು ತೆರೆದವರಿಗೆ, ಅನವಶ್ಯಕವಾಗಿ ಬೈಕ್‌ನಲ್ಲಿ ಸುತ್ತಾಡುತ್ತಿದ್ದವರಿಗೆ ಹಾಗೂ ಅಂಗಡಿ ಮಾಲೀಕರಿಗೆ, ಅಟೋ,ಕಾರ್ ಓಡಿಸುವ ಕಾರ ಚಾಲಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕೊರೊನಾ ಕರ್ಪ್ಯೂ ಜಾರಿಯಲ್ಲಿದ್ದರೂ ಯಾರಿಗೂ ಅಂಜಿಕೆಯಾಗದ ರೀತಿಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಸಿಪಿಐ ವಸಂತ್.ವಿ.ಅಸುದೇ ಹಣ್ಣುಮಾರುವ ವರ್ತಕರಿಗೆ ತಿಳಿ ಹೇಳಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ವಿಕೆಂಡ್ ಲಾಕ್ ಡೌನವಿದ್ದರೂ ವ್ಯಾಪಾರ ಮಾಡುತ್ತಿದ್ದರೆ ಹೇಗೆ ಎಂದು ಪ್ರಶ್ನೆ ಮಾಡುತ್ತಾ ಮಾಲೀಕರಿಗೆ ತಿಳಿಸಿ ಅಂಗಡಿಗಳನ್ನು ಮುಚ್ಚಿಸಿದರು. ಜನ ಮಾತ್ರ ಅಲೆದಾಟ ಮಾತ್ರ ಎದ್ದು ಕಾಣುತ್ತಿತ್ತು ಈ ಸಮಯದಲ್ಲಿ ಕಡಿವಾಣ ಹಾಕಿಸಿ,ನಂತರ ಕಿರಾಣಿ ಅಂಗಡಿ, ಹೋಟೆಲ್, ಬೇಕರಿ ತರಕಾರಿಮಾರುಕಟ್ಟೆಯನ್ನು ಬಂದ್ ಮಾಡಿಸಿದರು.
ಡಿವೈಎಸ್ಪಿ ಹರೀಶ ರೆಡ್ಡಿಯವರು ತಮ್ಮ ವಾಹನದ ಮೂಲಕ ಪ್ರತಿ ಗಲ್ಲಿ ಗಲ್ಲಿಗಳಲ್ಲಿ ತಾವೇ ಸ್ವತ: ಸುತ್ತಾಡುತ್ತಾ ಯಾರೇ ಅನವಶ್ಯಕವಾಗಿ ಕಟ್ಟೆಯ ಮೇಲೆ ಹರಟೆ ಹೊಡೆಯುತ್ತಿದ್ದರೆ ಅಂತವರನ್ನು ಕೊರೊನಾ ವೈರಾಸ್ ರೋಗ ಹೆಮ್ಮರವಾಗಿ ಹೆಚ್ಚಾಗುತ್ತಿದೆ ಆದ ಕಾರಣ ತಾವು ನಿಮ್ಮ ಮನೆಗಳಿಗೆ ತೆರಳಿ ಆರೋಗ್ಯವಾಗಿರಿ ಎಂದು ಜನರಿಗೆ ಸೂಕ್ಷ್ಮವಾಗಿ ಎಚ್ಚರಿಸಿದರು.ಕೆಲವರು ಬೈಕ್‌ನಲ್ಲಿ ಆಸ್ಪತ್ರೆ ತೆರಳುವವರಿಗೆ ಗಮನಹರಿಸಿ ಯಾವುದೇ ತೊಂದರೆಯಾಗದಂತೆ ಕಳುಹಿಸಿಕೊಟ್ಟರು.
ಬೈಕ್ ಮತ್ತು ಕಾರ್ ಸವಾರರಿಗೆ ದಂಡ: ಲಾಕ್ ಡೌನ್ ಇದ್ದರು ಸುಮ್ಮನೆ ರಸ್ತೆಗಿಳಿದ ಸವಾರರಿಗೆ ಪೋಲಿಸರಿಂದ ದಂಡ.ಒಟ್ಟು ೨೭ ಬೈಕ್,೧೦ ಕಾರು,೧ಲಾರಿ ಹಿಡಿದು ಐಎಂಇ ಕೇಸ್ ಹಾಕಿದ್ದಾರೆ.ಪಟ್ಟಣದ ಪ್ರಮುಖ ಸರ್ಕಲ್ ಬಳಿ ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ರಸ್ತೆಗಳು ಲಾಕ್ ಡೌನನಿಂದಾಗಿ ಜನರ ಓಡಾಟವಿಲ್ಲದೇ ಬೀಕೊ ಎನ್ನುತ್ತಿದ್ದವು.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend