ಕೂಡ್ಲಿಗಿ:ಪಟ್ಟಣಕ್ಕೆ ಡ್ಯಾಂ ನೀರು ಪೂರೈಕೆಗೆ ಕ್ಷಣಗಣನೆ- ಮುಖ್ಯಾಧಿಕಾರಿ ಫಿರೋಜ್ ಖಾನ್…!!!

Listen to this article

ಕೂಡ್ಲಿಗಿ:ಪಟ್ಟಣಕ್ಕೆ ಡ್ಯಾಂ ನೀರು ಪೂರೈಕೆಗೆ ಕ್ಷಣಗಣನೆ- ಮುಖ್ಯಾಧಿಕಾರಿ ಫಿರೋಜ್ ಖಾನ್- ತುಂಗ ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ, ಗಣನೀಯ ಪ್ರಮಾಣದಲ್ಲಿ ಕಡಿಮೆಯಾದ ಹಿನ್ನಲೆಯಲ್ಲಿ. ಕಳೆದೆರೆಡು ತಿಂಗಳುಗಳಿಂದ ಕೂಡ್ಲಿಗಿ ಪಟ್ಟಣ ಸೇರಿದಂತೆ, ಹಗರಿಬೊಮ್ಮನಹಳ್ಳಿ ಹಾಗೂ ಕೊಟ್ಟೂರು ಪಟ್ಟಣಗಳಿಗೆ. ಡ್ಯಾಂ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು, ಪರಿಣಾಮ ಸಾರ್ವಜನಿಕ ವಲಯದಲ್ಲಿ ನೀರಿಗಾಗಿ ಆಹಾಕಾರ ಸೃಷ್ಠಿಯಾಗಿ. ಜೀವ ಜಲಕ್ಕಾಗಿ ನಾಗರೀಕರು, ತೀವ್ರ ಪರದಾಡುವ ದುಸ್ಥಿತಿ ಪಟ್ಟಣಗಳಲ್ಲಿ ನಿರ್ಮಾಣವಾಗಿತ್ತು. ಆದರೀಗ ಈ ಪರಿಸ್ಥಿತಿ ತಿಳಿಯಾಗುವ ಸಮಯ ಬಂದಿದ್ದು, ಕೆಲವೇ ತಾಸುಗಳಲ್ಲಿ ಪಟ್ಟಣಗಳಿಗೆ ನೀರು ಪೂರೈಕೆಯಾಗಲಿದೆ ಎಂದು ಸಂಬಂಧಿಸಿದ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. *ಕೆಲವೇ ತಾಸುಗಳಲ್ಲಿ ನೀರು ಪೂರೈಕೆ*- ಈ ಕುರಿತು ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ, ಫಿರೋಜ್ ಖಾನ್ ಅಧೀಕೃತವಾಗಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಸಿಂಗಟಲೂರು ಬ್ಯಾರೇಜ್ ನಿಂದ, ತುಂಗಾಭದ್ರಾ ಜಲಾಶಯಕ್ಕೆ ಸಾಕಷ್ಟು ನೀರು ಪೂರೈಸಿಸಲಾಗಿದೆ. ಅಲ್ಲಿಂದ ನೀರು ಬನ್ನಿಗೋಳ ಜಾಕೆವೆಲ್ ತಲುಪಿದ್ದು, ಜಾಕೆವೆಲ್ ಪಂಪ್ ಚಾಲನೆಗೊಳಿಸಿದಾಕ್ಷಣವೇ ನೀರು ಪಟ್ಟಣಕ್ಕೆ ಸರಬರಾಜಾಗಲಿದೆ. ಹೀಗಾಗಿ ಇವತ್ತು ರಾತ್ರಿ (ಎ15) ನೀರು ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣಗಳಿಗೆ ಸರಬರಾಜಾಗಲಿದೆ ಎಂದು. ತಮಗೆ ಸಂಬಂಧಿಸಿದ ಇಲಾಖಾಧಿಕಾರಿಗಳಿಂದ ಖಚಿತ ಮಾಹಿತಿ, ತಮಗೆ ದೊರಕಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಮಾಹಿತಿ ನೀಡಿದ್ದಾರೆ. ವಿಶೇಷ ಸೂಚನೆ- ಕಳೆದ ತಿಂಗಳಿನಿಂದ ನದಿಪಾತ್ರದಲ್ಲಿ ನೀರಿಲ್ಲದ ಕಾರಣ ಸದ್ಯ ಹರಿದು ಬಂದ ನೀರು, ಹೆಚ್ಚಿನ ಮಟ್ಟದಲ್ಲಿ ಕಲುಷಿತಗೊಂಡಿರುವ ಸಾಧ್ಯತೆ ಇದ್ದು. ಕಾರಣ ನೀರನ್ನು ಸಾಕಷ್ಟು ಶುದ್ಧಿಕರಿಸಿದ ನಂತರವೇ ಪೂರೆೆೈಸಲಿದ್ದು, ಆದರೂ ಕೂಡ ನೀರು ಸ್ವಲ್ಪ ಪ್ರಮಾಣದಲ್ಲಿ ಕಾಣದ ಕೀಟ ಕಿಣ್ವಗಳನ್ನು ಹೊಂದಿರಬಹುದಾಗಿದೆ. ಕಾರಣ ಸಾರ್ವಜನಿಕರು ಹಾಗೂ ನಾಗರೀಕರು ಮುಂಜಾಗ್ರತ ಕ್ರಮವಾಗಿ, ನೀರನ್ನು ಕಾಸಿ ಅಗತ್ಯವಿದ್ದಲ್ಲಿ ಕುಧಿಸಿ ಆರಿಸಿ. ಕುಡಿಯಲು ಮತ್ತು ಆಹಾರ ತಯಾರಿಕೆಗೆ, ಬಳಸಬೇಕಾಗಿ ಪಪಂ ಮುಖ್ಯಾಧಿಕಾರಿ ಈ ಮೂಲಕ ಸೂಚಿಸಿದ್ದಾರೆ. ನೀರು ಸಂರಕ್ಷಿಸಿ-ನೀರಿನ ಅಭಾವ ಮರುಕಳಿಸದಂತೆ ಮುಂಜಾಗ್ರತಾ ಕ್ರಮವಾಗಿ, ನೀರು ಹಿತ ಮಿತ ಬಳಕೆಗೆ ಹೆಚ್ಚು ಹೊತ್ತು ಕೊಡಲಾಗಿದೆ. ನಾಗರೀಕರು ಹಾಗೂ ಸಾರ್ವಜನಿಕರು, ತಮ್ಮ ನಳಗಳಿಗೆ ಟ್ಯಾಪ್ ಅಳವಡಿಕೆ ಮಾಡುವಲ್ಲಿ ಮುಂದಾಗಬೇಕು. ಜೀವ ಜಲವನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಳಸಬೇಕು ಹಾಗೂ ಸಂರಕ್ಷಿಸಬೇಕಿದ್ದು, ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ನಳಗಳಿಗೆ ಟ್ಯಾಪ್ ಅಳವಡಿಸಿ ನಾಗರೀಕತೆ ಮೆರೆಯಬೇಕಿದೆ. ಈ ನಿಟ್ಟಿನಲ್ಲಿ ನೀರು ಪೂರೈಕೆ ಸಿಬ್ಬಂದಿ ತಮ್ಮ ಕರ್ಥವ್ಯನಿಷ್ಠೆ ಮೆರೆಯಬೇಕು, ನಾಗರೀಕರು ಹಾಗೂ ಸಾರ್ವಜನಿಕರು ತಮ್ಮ ಜವಾಬ್ದಾರಿ ತೋರಬೇಕಿದೆ ಎಂದು ಮುಖ್ಯಾಧಿಕಾರಿ ಫಿರೋಜ್ ಖಾನ್ ತಿಳಿಸಿದ್ದಾರೆ….

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend