ಕೂಡ್ಲಿಗಿ:ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ 550ಕೋಟಿ₹ಅನುದಾನ ಜಾರಿ….!!!

Listen to this article

ಕೂಡ್ಲಿಗಿ:ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ 550ಕೋಟಿ₹ಅನುದಾನ ಜಾರಿ-ವಿಜಯ ನಗರ ಜಿಲ್ಲೆ ಕೂಡ್ಲಿಗಿ ಮಾ7: ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಶಾಸಕ Dr.N.T.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ. ಎಲ್ಲಾ ಇಲಾಖೆಗಳ ತಾಲೂಕು ಪ್ರಗತಿ ಪರಿಶೀಲನಾ(KDP) ಸಭೆಯಲ್ಲಿ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ. ರಾಜ್ಯ ಸರ್ಕಾರದಿಂದ ಎಲ್ಲಾ ಇಲಾಖೆಗಳನ್ನೊಳಗೊಂಡಂತೆ, ಕ್ಷೇತ್ರಕ್ಕೆ 550ಕೋಟಿ₹ ಅನುದಾನ ತಂದಿರುವುದಾಗಿ ತಿಳಿಸಿದರು. ಬಂದಿರುವ ಕುರಿತು, ಕೃಷಿ ಇಲಾಖಾಧಿಕಾರಿ ಸುನಿಲ್ ಕುಮಾರ್ ಮಾತನಾಡಿ, ಕ್ಷೇತ್ರದ ರೈತರಿಗೆ ಬರ ಪರಿಹಾರದ ಅನುದಾನ ಮಂಜೂರಾಗಿರುವುದಾಗಿ ಸಭೆಗೆ ತಿಳಿಸಿದರು. ಶಾಸಕರು ಅಧಿಕಾರಿಗಳನ್ನುದ್ಧೇಶಿಸಿ ಮಾತನಾಡಿ, ಕ್ಷೇತ್ರದಲ್ಲೆಡೆ ಕುಡಿಯುವ ನೀರಿನ ಸಮಸ್ಯೆ. ಹಾಗೂ ಧನ ಕರುಗಳಿಗೆ ಮೇವಿನ ಸಮಸ್ಯೆ ಇದ್ದಲ್ಲಿ, ಕೂಡಲೇ ನಮ್ಮ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಿಗಡಾಯಿಸದಂತೆ ಜಾಗ್ರತೆ ವಹಿಸಬೇಕೆಂದು ಸೂಚಿಸಿದರು.


ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ, ಆಯಾ ಗ್ರಾಮ ಪಂಚಾಯ್ತಿಗಳಲ್ಲಿ ಹಾಲಿ ಇರುವಂತಹ ಬೋರ್ ವೆಲ್ಗಳು ಕೆಟ್ಟಲ್ಲಿ. ಪರ್ಯಾಯವಾಗಿ ಖಾಸಗಿ ಬೋರ್ ಮಾಲಿಕರೊಂದಿಗೆ ಒಪ್ಪಂದ ಮಾಡಿಕೊಂಡು ಕನಿಷ್ಠ 3-6ತಿಂಗಳುಗಳ ವರಿಗೆ. ತಿಂಗಳೊಂದಕ್ಕೆ 18 ಸಾವಿರ ₹ಗಳುವರೆಗೆ ಹಣ ಬಾಡಿಗೆ ಕೊಟ್ಟು, ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು PDOಗಳಿಗೆ ಸೂಚಿಸಿದರು. ರಾಜ್ಯ ಸರ್ಕಾರವು ಜನರ ಹಿತಕ್ಕಾಗಿ ಎಲ್ಲಾ ಗ್ಯಾರೆಂಟಿಗಳನ್ನು, ಸಮರ್ಪಕವಾಗಿ ಜಾರಿ ಮಾಡುವುದರ ಜೊತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಒಲವು ತೋರಿದೆ. ಅದಕ್ಕಾಗಿ ನಮ್ಮ ಕೂಡ್ಲಿಗಿ ಕ್ಷೇತ್ರಕ್ಕೆ ಸರ್ಕಾರ ರಚನೆಯಾಗಿ ವರ್ಷ ತುಂಬು ದೊರೊಳಗಾಗಿ, ಎಲ್ಲಾ ಇಲಾಖೆಗಳಿಗೆ ಒಳಗೊಂಡಂತೆ 550 ಕೋಟಿ ₹ಅನುದಾನ ನೀಡಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ರವರು. ಬರ ಪೀಡಿತ ಹಣೆ ಪಟ್ಟಿಯಿಂದ ಕೂಡ್ಲಿಗಿ ಕ್ಷೇತ್ರವನ್ನು ತೆಗೆಯಲು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ತಾವು ಕೂಡ ಹಗಲಿರುಳು ಶ್ರಮಿಸುವುದರೊಂದಿಗೆ, ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿರುವುದಾಗಿ ಶಾಸಕರಾದ Dr.N.T.ಶ್ರೀನಿವಾಸ್ ತಿಳಿಸಿದರು….

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend