ಕೂಡ್ಲಿಗಿ ಪಟ್ಟಣ: ಕತ್ಲಲಲ್ಲಿ ಕರಡಿ ಪ್ರತ್ಯಕ್ಷ.!, ಆತಂಕದಲ್ಲಿ ನಾಗರೀಕರು- ಕ್ರಮಕ್ಕೆ ಆಗ್ರಹ…!!!

Listen to this article

ಕೂಡ್ಲಿಗಿ ಪಟ್ಟಣ: ಕತ್ಲಲಲ್ಲಿ ಕರಡಿ ಪ್ರತ್ಯಕ್ಷ.!, ಆತಂಕದಲ್ಲಿ ನಾಗರೀಕರು- ಕ್ರಮಕ್ಕೆ ಆಗ್ರಹ

ವಿಜಯನಗರ ಜಿಲ್ಲೆ ಕೂಡ್ಲಿಗಿ:ಕತ್ಲಲಲ್ಲಿ..ಕರಡೀಗೆ ಯಾವತ್ತೂ ಜಾಮೂನು ತಿನಸಾಕೆ ಹೋಗ್ಬಾರ್ದು ರೀ…ಅಂತ, ಕನ್ನಡದ ಸಿನಿಮಾ ಒಂದರಲ್ಲಿ ಹಾಡಿದೆ. ಕೂಡ್ಲಿಗಿ ಪಟ್ಟಣದ ಬಾಪೂಜಿಮ ನಗರ ಗುಡೇಕೋಟೆ ರಸ್ತೆಯಲ್ಲಿ, ಕರಡಿಯೊಂದು ಇತ್ತೀಚೆಗೆ ರಾತ್ರಿ ಹೊತ್ತಲ್ಲಿ ಕಾಣಿಸಿಕೊಂಡಿದೆ. ನಟ್ಟ ನಡು ರಾತ್ರಿ ಹೊತ್ತಲ್ಲಿ ಭಾರೀಗಾತ್ರದ ಕರಡಿ ಪಟ್ಟಣದ ಪ್ರಮುಖ ರಸ್ತೆಯ ಬದಿಯಲ್ಲಿ, ಆಹಾರ ಹುಡಿಕುತ್ತ ಅಲೆಯುತ್ತಿದ್ದಾಗ. ಅದೇ ಸಮಯಕ್ಕೆ ಪಟ್ಟಣ ಪ್ರವೇಶಿಸುತ್ತಿರುವ ಕಾರೊಂದರಲ್ಲಿದ್ದ ಪ್ರಯಾಣಿಕರು, ಕರಡಿಯನ್ನ ಗಮನಸಿ ಕಾರಿನೊಳಗಿಂದಲೇ ತಮ್ಮ ಮೊಬೈಲ್ ನಲ್ಲಿ. ಕರಡಿಯ ಚಲನಬಲನವನ್ನು ಕೆಲ ನಿಮಿಷಗಳ ಕಾಲ, ವೀಡಿಯೋ ಮಾಡಿಕೊಂಡಿದ್ದಾರೆ. ಆ ವೀಡಿಯೋ ಮೊಬೈಲ್ ಗಳ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಪಟ್ಟಣದ ನಾಗರೀಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಸಂಚನ ಮೂಡಿಸಿದೆ. ಕರಡಿ ನಟ್ಟ ನಡು ರ‍ಾತ್ರಿ ಹೊತ್ತಲ್ಲಿ, ಆಹಾರವನ್ನರಸಿಕೊಂಡು ಪಟ್ಟಣವನ್ನು ಪ್ರವೇಶಿಸಿದೆ. ಮಧ್ಯ ರಾತ್ರಿ ಹೊತ್ತಲ್ಲಿ ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತಿದ್ದು, ರಸ್ತೆ ಒಂದು ಬದಿಯಲ್ಲಿ ಆಹಾರಕ್ಕಾಗಿ ಪರದಾಡುವ ಸಂದರ್ಭದಲ್ಲಿ. ಕಾರೊಂದು ಅದೇ ರಸ್ತೆಯ ಮೂಲಕ ಪಟ್ಟಣ ಪ್ರವೇಶಿಸಿದ್ದು, ಕಾರಲ್ಲಿದ್ದವರು ಕಾರಿನ ಫೊಕಸ್ ಬೆಳಕಿಗೆ ರಸ್ತೆಯ ಬದಿಯ ಕತ್ತಲಲ್ಲಿ. ಕರಡಿ ಇರೋದನ್ನ ಗಮನಿಸಿ ಕೆಲ ಹೊತ್ತು ತಮ್ಮ ಕಣ್ಣನ್ನ ತಾವೇ ನಂಬದಾಗಿದ್ದಾರೆ, ತನ್ನತ್ತ ಬಂದ ಕಾರಿನ ಶಬ್ದಕ್ಕೆ ಕರಡಿ ಕನಲಿ ಹೋಗಿದೆ. ಕಾರಿನಲ್ಲಿದ್ದವರು ಕೂಡಲೇ ಕಾರಿನೊಳಗಿಂದಲೇ ಕರಡಿಯನ್ನ ಹಿಂಬಾಲಿಸಿದ್ದು, ಅದು ರಸ್ತೆಯ ಒಂದು ಬದಿಯಿಂದ. ರಸ್ತೆಯ ಮತ್ತೊಂದು ಬದಿಗೆ ದಾಟಿದ್ದು. ಕರಡಿ ಕೆಲ ಹೊತ್ತು ರಸ್ತೆಯ ಮದ್ಯದಲ್ಲಿಯೇ ನಡೆದಾಡಿದೆ, ನಂತರ ರಸ್ತೆಯ ಮದ್ಯದಲ್ಲಿರುವ ರಸ್ತೆ ವಿಭಜಕವನ್ನು ಕರಡಿ ಹತ್ತಿದೆ.ನಂತರ ನಿಧಾನವಾಗಿ ಅದನ್ನು ದಾಟಿ ರಸ್ತೆ ಪ್ರವೇಶಿಸಿ ರಸ್ತೆಯ ಮತ್ತೊಂದು ಬದಿಗೆ ತರಳಿದೆ. ಈ ದೃಶ್ಯಾವಳಿಯನ್ನು ಕಾರಿನೊಳಗಿಂದಲೇ ಮೊಬೈಲ್ ನಲ್ಲಿ, ಕೆಲವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಸಾರ್ವಜನಿಕರಲ್ಲಿ ಹಾಗೂ ನಾಗರೀಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕರಡಿ ಸ್ಥಳಾಂತರಿಸಲು ಆಗ್ರಹ- ಪಟ್ಟಣದ ಬಳ್ಳಾರಿ ರಸ್ತೆ ಬದಿಯ ಹಳ್ಳದ ಬಳಿ ಈ ಹಲವು ತಿಂಗಳುಗಳಿಂದ, ಹೆಣ್ಣು ಕರಡಿ ತನ್ನ ಮರಿಗಳೊಂದಿಗೆ ಹಲವರಿಗೆ ಕಾಣಿಸಿಕೊಂಡಿದ್ದು, ಸುತ್ತಲಿನ ಹೊಲಗಳ ರೈತರು ತೀವ್ರ ಆತಂಕದಲ್ಲಿದ್ದಾರೆ. ಪರಿಣಾಮ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ, ನಿರಾತಂಕವಾಗಿ ತೊಡಗಿಸಿಕೊಳ್ಳಲಾಗುತ್ತಿಲ್ಲ. ಪಟ್ಟಣದ ಕೂಗಳತೆ ದೂರದಲ್ಲಿಯೇ ಕರಡಿ ವಾಸವಿರುವ ಶಂಕೆ ರೈತರಿಂದ ವ್ಯಕ್ತವಾಗಿದ್ದು, ಕೂಗಳತೆ ದೂರದಲ್ಲಿಯೇ ಶಾಲೆ ಕಾಲೇಜುಗಳಿವೆ. ಕರಡಿ ವಾಸವಿದೆ ಎಂದು ಹೇಳಲಾಗುವ ಸ್ಥಳದಿಂದ, ಕೂಗಳತೆ ದೂರದಲ್ಲಿಯೇ ಬಳ್ಳಾರಿ ರಸ್ತೆಯಿದ್ದು. ಈ ರಸ್ತೆಯಲ್ಲಿ ವಿವಿದ ಗ್ರಾಮಗಳ ಗ್ರಾಮಸ್ಥರು ಪಟ್ಟಣದ ನಾಗರೀಕರು, ಸದಾ ಪಾದಾಚಾರಿಗಳಾಗಿ ಹಾಗೂ ವಹನಗಳ ಮೂಲಕ ಸಂಚರಿಸುತ್ತಿರುತ್ತಾರೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಹಾಗೂ ಅವರ ಪೋಷಕರು ಸಹ ಕರಡಿ ಪ್ರತ್ಯಕ್ಷದ ಬಗ್ಗೆ ತೀವ್ರ ಆತಂಕ ವ್ಯಕ್ತ ಪಡಿಸಿದ್ದಾರೆ. ಇದನ್ನರಿತ ನಾಗರೀಕರು ಹಾಗೂ ಕೆಲ ಸಂಘಟನೆಕಾರರು ರೈತರು, ಅದನ್ನು ಸೆರೆ ಹಿಡಿದು ಕರಡಿ ದಾಮಕ್ಕೆ ಸ್ಥಳಾಂತರಿಸಬೇಕಿದೆ ಎಂದು ಅರಣ್ಯ ಇಲಾಖಾಧಿಕಾರಿಗೆ ಈ ಹಿಂದೆ ಸಾಕಷ್ಟು ಬಾರಿ ಒತ್ತಾಯಿಸಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ ಎಂದು, ವಾಲ್ಮೀಕಿ ಯುವ ಮುಖಂಡ ಬಾಣದ ಶಿವಶಂಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಅಧಿಕಾರಿಗಳು ತಮ್ಮ ಇಲಾಖಾ ಕಛೇರಿಯ ಹಿಂಬದಿಯ, ಹಳ್ಳದ ಅಂಚಿನ ಹೊಲದ ಬದಿಯ ತೋಪಿನಲ್ಲಿ. ಹಲವು ತಿಂಗಳುಗಳಿಂದ ಕರಡಿ ತನ್ನ ಮರಿಗಳೊಂದಿಗೆ ನಿರಂತರವಾಗಿ ಕಾಣಿಸಿಕೊಂಡಿದೆ. ಆದರೆ ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ರೈತರು ತಮ್ಮ ಕೃಷಿ ಚಟುವಟಿಕೆಗೆ ಹೊಲಗಳಿಗೆ ತೆರಳುವುದು ಅನಿವಾರ್ಯವಾಗಿದೆ, ಹೊಲಗಳು ಪೈರುಗಳಿಂದ ತುಂಬಿದ್ದು. ಹೊಲ ಪ್ರವೇಶಿಸುವವರಿಗೆ ಎದುರಿಗೆ ಏನಿದೆ.!? ಎಂಬುದೇ ಕಾಣದಂತೆ, ಪೈರು ಬೆಳಿದಿರುಯವ ಈ ಸಂದರ್ಭದಲ್ಲಿ. ಕರಡಿಗಳ ಹಾವಳಿ ಸಹಜವಾಗಿಯೇ ಜರುಗುವ ಸಾಧ್ಯತೆ ಇರುತ್ತದೆ, ಈ ಕಾರಣಕ್ಕೆ ರೈತರು ತಮ್ಮ ಜೀವವನ್ನು ಕೈಯಲ್ಲಿಡಿದುಕೊಂಡಿರುವ ಆತಂಕ ಸೃಷ್ಠಿಯಾಗಿದೆ. ಕಾರಣ ಅರಣ್ಯ ಇಲಾಖಾಧಿಕಾರಿಗಳು, ಶೀಘ್ರವೇ ಪಟ್ಟಣಕ್ಕೆ ಹಾಗೂ ಸುತ್ತಲಿನ ಗ್ರ‍ಾಮಗಳ ಹತ್ತಿರ ಸುಳಿದಾಡುತ್ತಿರುವ ಕರಡಿಗಳನ್ನು. ಸೆರೆ ಹಿಡಿದು ಕರಡಿದಾಮಕ್ಕೆ ಸುರಕ್ಷವಾಗಿ ಬಿಡಬೇಕೆಂದು, ನ‍ಾಗರೀಕರು ಸಾರ್ವಜನಿಕರು ವಿವಿದ ಸಂಘಟನೆಗಳ ಪದಾಧಿಕಾರಿಗಳು ಈ ಮೂಲಕ ಆಗ್ರಹಿಸಿದ್ದಾರೆ.
*ನಿರ್ಲಕ್ಷ್ಯ ಧೋರಣೆ.!?, ಕಚೇರಿಗೆ ಬೀಗ ಹಾಕಿ ಪ್ರತಿಭಟನೆ-ಎಚ್ಚರಿಕೆ*- ಕೂಡ್ಲಿಗಿ ಪಟ್ಟಣವನ್ನು ಕತ್ತಲಲ್ಲಿ ಕರಡಿ ಪ್ರವೇಶಿಸುತ್ತಿದೆ, ಆದರೆ ಹಲವು ತಿಂಗಳುಗಳಿಂದ ಪಟ್ಟಣದ ಅಂಚಿನ ಹಳ್ಳ ಹಾಗೂ ಹೊಲಗಳಲ್ಲಿ ವಾಸವಿದ್ದು. ರೈತರಿಗೆ ಹಲವು ಬಾರಿ ಮರಿಗಳೊಂದಿಗೆ ಕರಡಿ ಹಾಡು ಹಗಲೇ ಕಾಣಿಸಿಕೊಂಡಿದೆ, ಸಂಬಂಧಿಸಿದಂತೆ ಇಲಾಖಾಧಿಕಾರಿಗಳ ಗಮನಕ್ಕೆ ತಂದಿಯಾದರೂ ಪ್ರಯೋಜವಾಗಿಲ್ಲ. ಅರಣ್ಯ ಇಲಾಖೆಯವರು ಕರಡಿ ದಾಳಿ ಪ್ರಕರಣಗಳು ಜರುಗುವವರೆಗೂ, ಕರಡಿ ಸೆರೆ ಹಿಡಿದು ದಾಮಕ್ಕೆ ಬಿಡುವ ಮೂಲಕ ಎಚ್ಚತ್ತುಕೊಳ್ಳೊ ಸೂಚನೆ ಕಾಣುತ್ತಿಲ್ಲ. ಹಲವೆಡೆಗಳಲ್ಲಿ ಕರಡಿ ಹಂದಿಗಳು ಹೊಲಗಳಲ್ಲಿನ ಪೈರನ್ನು ಹಾಳು ಮಾಡಿವೆ, ಸದ್ಯ ಯಾವ ರೈತರ ಮೇಲೂ ದಾಳಿ ಆಗಿರುವ ಪ್ರಕರಣ ಜರುಗಿಲ್ಲ.
ಹಾಗೇನಾದರೂ ದುರದೃಷ್ಟವಶಾತ್ ಕರಡಿ ದಾಳಿ ಪ್ರಕರಣ ಜರುಗಿದ್ದಲ್ಲಿ, ಅದಕ್ಕೆ ಅರಣ್ಯಾಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು. ಅವರ ನಿರ್ಲಕ್ಷ್ಯ ಧೋರಣೆ ವಿರುದ್ಧ,ಇಲಾಖಾ ಉನ್ನತಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಲಾಗುವುದು. ಮತ್ತು ಅವಘಡ ಸಂಭವಿಸಿದ್ದಲ್ಲಿ ಕಚೇರಿಗೆ ಬೀಗ ಹಾಕಿ, ಅಧಿಕಾರಿಯನ್ನು ಅಮಾನತ್ತುಗೊಳಿಸುವವರೆಗೂ ಪ್ರತಿಭಟಿಸಲಾಗುವುದೆಂದು.ರೈತ ಸಂಘದ ಪದಾಧಿಕಾರಿಗಳು,ವಿವಿದ ಜನಪ್ರತಿನಿಧಿಗಳು,ವಿವಿ ಸಂಘಟನೆಗಳ ಪದಾಧಿಕಾರಿಗಳು, ನಾಗರೀಕರು, ಕಾರ್ಮಿಕ ಸಂಘಟನೆಕಾರರು ಅರಣ್ಯಾಧಿಕಾರಿಗೆ ಈ ಮೂಲಕ ಎಚ್ಚರಿಸಿದ್ದಾರೆ…

ವರದಿ, ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend