ಕೂಡ್ಲಿಗಿ:ರಸ್ತೆ ಸುರಕ್ಷತೆ ಕುರಿತು ಜಾಗ್ರತೆ ಮೂಡಿಸಿ, ತಪ್ಪಿತಸ್ಥರಿಗೆ ದಂಡ ವಿಧಿಸಿದ ಸಿಪಿಐ ಸುರೇಶ ತಳವಾರ…!!!

Listen to this article

ಕೂಡ್ಲಿಗಿ:ರಸ್ತೆ ಸುರಕ್ಷತೆ ಕುರಿತು ಜಾಗ್ರತೆ ಮೂಡಿಸಿ, ತಪ್ಪಿತಸ್ಥರಿಗೆ ದಂಡ ವಿಧಿಸಿದ ಸಿಪಿಐ ಸುರೇಶ ತಳವಾರ-ವಿಜಯನಗರ ಜಿಲ್ಲೆ ಕೂಡ್ಲಿಗಿ:ಇತ್ತೀಚೆಗಷ್ಟೇ ಸಿಪಿಐ ಸುರೇಶ ತಳವಾರವರು, ಪಟ್ಟಣದ ಗುಡೇಕೋಟೆ ಪ್ರಮುಖ ರಸ್ತೆಯಲ್ಲಿ. ಪಾದಾಚಾರಿಯಾಗಿ ನಡೆದುಕೊಂಡು ತೆರಳುವ ಸಂದರ್ಭದಲ್ಲಿ, ಗುಡೇಕೋಟೆ ರಸ್ತೆಯಿಂದ ತಮ್ಮ ಠಾಣೆಯೆಡೆಗೆ ತೆರಳುವಾಗ. ನ್ಯಾಯಾಲಯದ ಮುಂಭಾದ ಹತ್ತಿರದಲ್ಲಿ, ಹಾಗೂ ತಾಲೂಕು ಆಢಳಿತದ ಹತ್ತಿರದ ಬಸ್ ತಂಗುದಾಣದ ಮುಂಭ‍ಾಗದಲ್ಲಿ. ಕೆಲ ಖಾಸಗೀ ವಾಹನಗಳು ನಿಲುಗಡೆಗೊಂಡಿದ್ದು, ಅವು ರಸ್ತೆಯಲ್ಲಿಯೇ ಬಹುಕಾಲ ನಿಲುಗಡೆಗೊಂಡಿರುವುದು ಕಂಡುಬಂದಿದೆ. ಅದನ್ನು ಕಂಡ ಅವರು ಕೂಡಲೇ ಆ ವಾಹನಗಳ ಚಾಲಕರಿಗೆ, ಸ್ಥಳದಲ್ಲಿಯೇ ರಸ್ತೆ ಸುರಕ್ಷತೆ ನಿಯಮಗಳ ಕುರಿತು ತಿಳಿ ಹೇಳಿದ್ದಾರೆ, ಚಾಲನೆ ನಿಯಮಗಳನ್ನು ಉಲ್ಲಂಘಿಸಿದ, ಕೆಲ ವಾಹನಗಳ ಚಾಲಕರನ್ನು ಅವರು ತರಾಟೆಗೆ ತೆಗೆದು ಕೊಂಡಿದ್ದಾರೆ. ಲೋಪ ಎಸಗಿರುವ ಕೆಲ ವಾಹನ ಚಾಲಕರಿಗೆ, ನಿಯಮದಂತೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ,
ಪಟ್ಟಣದ ಕೆಲ ವೃತ್ತಗಳಲ್ಲಿ. ವಾಹನದಟ್ಟಣೆ ಮಿತಿ ಮೀರಿರುತ್ತಿದೆ, ಪ್ರಮುಖ ವೃತ್ತಗಳ ಬದಿಯ ರಸ್ತೆಗಳ ಬದಿಯಲ್ಲಿ ಬೀದಿ ಬದಿಗಳಲ್ಲಿ ಖಾಸಗೀ ವಾಹನಗಳ ದಟ್ಟಣೆ ನಿಯಂತ್ರಿಸುವಂತೆ. ನಾಗರೀಕರಿಂದ ಹಾಗೂ ಸಾರ್ವಜನಿಕರಿಂದ, ಕೆಲವು ಸಭೆಗಳಲ್ಲಿ ದೂರುಗಳು ಕೇಳಿಬಂದಿದ್ದವು. ಅದಕ್ಕೆ ಸ್ಪಂಧಿಸಿರುವ ಕೂಡ್ಲಿಗಿ ಸಿಪಿಐ ಸುರೇಶ ತಳವಾರವರು, ರಸ್ತೆಗಳಲ್ಲಿ ವಾಹನ ಹಾಗೂ ವೃತ್ತಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ತೀವ್ರ ನಿಗಾ ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಮತ್ತು ಪಿಎಸ್ಐ ಧನುಂಜಯಕುಮಾರವರು ಕೂಡ. ತಮ್ಮ ಸಿಬ್ಬಂದಿಯೊಂದಿಗೆ ಈ ನಿಟ್ಟಿನಲ್ಲಿ, ಅಗತ್ಯ ಕ್ರಮಗಳನ್ನು ಕೈಗೊಂಡು ಕಾರ್ಯಮಗ್ನರಾಗಿದ್ದಾರೆ. ಪಟ್ಟಣದ ಮದಕರಿ ವೃತ್ತ , ಬೆಂಗಳೂರು ರಸ್ತೆಯ ಶ್ರೀಆಂಜನೇಯ ಪಾದಗಟ್ಟೆ ವೃತ್ತದ ಬಳಿ. ಹಾಗೂ ಡ‍ಾ”ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ. ಶಾಲಾವಧಿಗಳಲ್ಲಿ ಅಂದರೆ ಬೆಳಿಗ್ಗೆ ಶಾಲಾ ಕಾಲೇಜು ಪ್ರಾರಂಭದ ವೇಳೆ, ಮತ್ತು ಸಂಜೆ ಶಾಲಾ ಕಾಲೇಜು ಬಿಡುವ ವೇಳೆ ತಲಾ 2ತಾಸು ಗಳ ಕಾಲ. ವಾಹನ ದಟ್ಟಣೆ ನಿಯಂತ್ರಿಸಲು ಅಗತ್ಯ ಸಿಬ್ಬಂದಿಗಳನ್ನು ನೇಮಿಸಬೇಕೆಂದು, ನಾಗರೀಕರು ಹಾಗೂ ಸಾರ್ವಜನಿಕರು ಕೆಲ ಸಂಘಟನೆಗಳ ಪದಾಧಿಕಾರಿಗಳು ಕೋರಿದ್ದರು. ಅದಕ್ಕೆ ಪೊಲೀಸ್ ಇಲಾಖಾಧಿಕಾರಿಗಳು ಸ್ಪಂಧಿಸಿದ್ದು, ನಿತ್ಯವೂ ಪ್ರಮುಖ ವೃತ್ತಗಳಲ್ಲಿ ನಿಗದಿತ ಸಮಯದಲ್ಲಿ ಸಿಬ್ಬಂದಿ ನೇಮಿಸಿ ನಿಯೋಜಿಸಲ‍ಾಗಿದೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend