ಚಿಕ್ಕ ಜೋಗಿಹಳ್ಳಿ:ಅಪೆ ಆಟೋ ಪಲ್ಟಿ ಒರ್ವ ಸ್ಥಳದಲ್ಲಿಯೆ ಮೃತ…!!!

Listen to this article

ಚಿಕ್ಕ ಜೋಗಿಹಳ್ಳಿ:ಅಪೆ ಆಟೋ ಪಲ್ಟಿ ಒರ್ವ ಸ್ಥಳದಲ್ಲಿಯೆ ಮೃತ.. ವಿಜಯನಗರ ಜಿಲ್ಲೆ ಕೂಡ್ಲಿಗಿ:ಜು7ರಂದು ಬೆಳಿಗ್ಗೆ ತಾಲೂಕು ಚಿಕ್ಕ ಜೋಗಿಹಳ್ಳಿ ಗ್ರಾಮದ, ಕೆಇಬಿ ಕ್ರಾಸ್ ಬಳಿ ರಸ್ಥೆಯ ಬದಿಯ ಚರಂಡಿಗೆ ಅಪೆ ಆಟೋ ಪಲ್ಟಿ ಆಗಿ. ಆಟೋದಲ್ಲಿದ್ದ ಪ್ರಯಾಣಿಕ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ಜರುಗಿದೆ. ಆಟೋದಲ್ಲಿದ್ದ ಸಂಚರಿಸುತ್ತಿದ್ದ ಪ್ರಯಾಣಿಕ ಭೀಮಸಮುದ್ರ ಗ್ರಾಮದ, ಕೊಂಗಣ್ಣನವರ ಶರಣಪ್ಪ(55) ಎಂದು ಗುರುತಿಸಲಾಗಿದೆ. ಆಟೋ ರಸ್ತೆಯ ಬದಿಯ ಚರಂಡಿಗೆ ಬಿದ್ದಿದ್ದು, ಆಟೋದಲ್ಲಿದ್ದ ಪ್ರಯಾಣಿಕನು ರಸ್ತೆಗೆ ಬಿದ್ದಿದ್ದು. ಆತನ ತಲೆಗೆ ತೀವ್ರತೆರನಾದ ಪೆಟ್ಟಾಗಿ, ಸ್ಥಳದಲ್ಲಿಯೇ ‍ಅಸುನೀಗಿರುವ ಘಟನೆ ಜರುಗಿರಬಹುದೆಂದು ಹೇಳಲಾಗುತ್ತಿದೆ. ಆಟೋ ಚಲಿಸುತ್ತಿರುವ ಸಂದರ್ಭದಲ್ಲಿ , ಮುಂಭಾಗದ ಬ್ರೇಕ್ ಜಾಮ್ ಆದ ಕಾರಣ ಆಟೋ ಪಲ್ಟಿ ಯಾಗಿದೆ ಎಂದು ಹೇಳಲಾಗುತ್ತಿದ್ದು, ಮೂರು ಗಾಲಿಯ ಅಪೆ ಆಟೋ ಭೀಮಸಮುದ್ರ ಗ್ರಾಮದಿಂದ ಜೋಗಿಹಳ್ಳಿಗೆ ತೆರಳುತ್ತಿತ್ತೆಂದು ಮೂಲಗಳಿಂದ ತಿಳಿದು ಬಂದಿದೆ.

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend