ಕೂಡ್ಲಿಗಿ:ಕೆಇಬಿಯಿಂದ ಮರಗಳಿಗೆ ಕೊಡಲಿ ಪೆಟ್ಟು-ಪತ್ರಕರ್ತರಿಂದ ತರಾಟೆಗೆ…!!!

Listen to this article

*ಕೂಡ್ಲಿಗಿ:ಕೆಇಬಿಯಿಂದ ಮರಗಳಿಗೆ ಕೊಡಲಿ ಪೆಟ್ಟು-ಪತ್ರಕರ್ತರಿಂದ ತರಾಟೆಗೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಬೆಂಗಳೂರು ರಸ್ತೆ ಸೇರಿದಂತೆ ಪಟ್ಟಣದ ಹಲವೆಡೆಗಳಲ್ಲಿ,ಕೆಇಬಿಯವರು ತಾವಾಕಿರುವ ವಿದ್ಯುತ್ ತಂತಿಗೆ ತಾಗುತ್ತವೆ ಎಂಬ ಕಾರಣಕ್ಕೆ. ಪಟ್ಟಣದ ಹಲವೆಡೆಯ ಮರಗಳ ಗಿಡಗಳ ಕೊಂಬೆಗಳನ್ನು ಬೇಕಾ ಬಿಟ್ಟಿ ರೀತಿ ಕಡಿದು ಹಾಕಿ ಮರಗಳನ್ನ ಸಂಪೂರ್ಣ ಬೋಳು ಮಾಡುತ್ತಿದ್ದಾರೆ ಎಂದು ನಾಗರೀಕರು ಆಕ್ರೋಶವ್ಯೆಕ್ತಪಡಿಸಿದ್ದಾರೆ.
ಇದಕ್ಕೆ ಪುಷ್ಠಿ ನೀಡುವಂತಹ ಘಟನೆ ಇತ್ತೀಚೆಗೆ ಜರುಗಿದೆ,ಪಟ್ಟಣದ ಬೆಂಗಳೂರು ರಸ್ಥೆಯಲ್ಲಿಯ ಮರಗಳ ಕೊಂಬೆಗಳನ್ನು ಕೆಇಬಿಯ ಸಿಬ್ಬಂದಿ ಕಡಿಸುತ್ತಿದ್ದರು.
ಇದನ್ನು ಕಂಡ ಪತ್ರಕರ್ತರು ಹಾಗೂ ಪರಿಸರ ಪ್ರೇಮಿಗಳು ತೀವ್ರವಾಗಿ ಖಂಡಿಸಿದ್ದು,ಕೆಇಬಿ ಸಿಬ್ಬಂದಿಯನ್ನ ಹಿಗ್ಗಾ ಮುಗ್ಗ ತಾರಾಟೆಗೆ ತೆಗೆದುಕೊಂಡ ಘಟನೆ ಜರುಗಿದೆ.
ತಂತಿಗೆ ಅಡ್ಡವಾಗುವ ಚಿಕ್ಕ ಕೊಂಬೆಗಳನ್ನು ಕಡಿದರೆ ಅಡ್ಡಿ ಇಲ್ಲ, ಆ ನೆಪದಲ್ಲಿ ದೊಡ್ಡ ರಂಬೆಗಳನ್ನ ಕಡಿದು ಸಂಪೂರ್ಣ ಬೋಳು ಮಾಡುತ್ತಿದ್ದಾರೆಂದು ಪರಿಸರ ಪ್ರೇಮಿಗಳು ಹಾಗೂ ಹಿರಿಯ ಪತ್ರಕರ್ತರಾದ ಎ.ಎಂ.ಸೋಮಶೇಖರಯ್ಯ ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಹತ್ತಾರು ವರ್ಷಗಳಿಂದ ಜತನದಿಂದ ಕಾಪಾಡಿಕೊಂಡಿರುವ ಮರವನ್ನು ಅನಗತ್ಯವಾಗಿ ಬೋಳು ಮಾಡಿ,ಬೇಕಾ ಬಿಟ್ಟಿಯಾಗಿ ಕತ್ತರಿಸಿ ನಂಜುಮಾಡಿ ಮರ ಹೊಣಗಲಿಕ್ಕೆ ಕೆಇಬಿಯವರೇ ಕಾರಣವಾಗುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಪರಿಸರ ಪ್ರೇಮಿಗಳು ಹಾಗೂ ಉಪನ್ಯಾಸಕರಾದ
ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ನಾಗರಾಜ ಇದು ಹೀಗೆ ಮುಂದುವರೆದರೆ ಪಟ್ಟಣದಲ್ಲಿರುವ ಮರಗಿಡಗಳು ಕೆಇಬಿಯರಿಂದಲೇ ನಾಶವಾಗಲಿವೆ,ಅವೈಜ್ಞಾನಿಕ ನಿಲುವು ತಾಳದೇ ಅಗತ್ಯಕ್ಕನುಗುಣವಾಗಿ ಕತ್ತರಿಸಲಿ ಅಡ್ಡಿಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪರಿಸರ ಪ್ರೇಮಿಗಳು ಹಾಗೂ ಹೋರಾಟಗಾರರು ಹಾಗೂ ಪತ್ರಕರ್ತರಾದ ಹೆಚ್.ವೀರಣ್ಣ ಮಾತನಾಡಿ ಕೆಇಬಿಯವರು ಗಿಡಮರ ಕಡಿಯುವ ಸಂದರ್ಭದಲ್ಲಿ, ಅರಣ್ಯ ಇಲಾಖೆಯವರ ಅನುಮತಿ ಹಾಗೂ ಅಗತ್ಯ ಸಲಹೆ ಸೂಚನೆ ಪಡೆರಯಬೇಕಿದೆ.ಬೇಕಾ ಬಿಟ್ಟಿಯಾಗಿ ಮರ ಗಿಡಗಳಿಗೆ ಕೊಡಲಿ ಪೆಟ್ಟು ಹಾಕಿದರೆ,ಅದನ್ನು ನಾವು ಖಂಡಿಸುತ್ತೇವೆ ರಸ್ಥೆಯ ಇಕ್ಕೆಲಗಳಲ್ಲಿರುವ ಮರಗಿಡಗಳೇ ಸಾರ್ವಜನಿಕರಿಗೆ ಗ್ರಾಮೀಣ ಜನರಿಗೆ ನೆರಳು ಗಾಳಿ ನೀಡಿ ಆಶ್ರಯ ನೀಡುತ್ತಿವೆ.ಕಾರಣ ಕೆಇಬಿಯವರು ಬೇಕಾ ಬಿಟ್ಟಿಯಾಗಿ ಮರ ಗಿಡಗಳಿಗೆ ಕೊಡಲಿ ಹಾಕದಿರಲಿ,ಅವರೂ ಸಹ ಪರಿಸರ ಕಾಳಜಿ ಹೊಂದಬೇಕಿದೆ ಮತ್ತು ಅನಿವಾರ್ಯ ಹಾಗೂ ಅಗತ್ಯಕ್ಕನುಗುಣವಾಗಿ ತಮ್ಮ ಕಾರ್ಯ ನಿರ್ವಹಿಸಬೇಕೆಂದರು. ಕೆಇಬಿ ಸಿಬ್ಬಂದಿ ಅರಣ್ಯ ಇಲಾಖೆ ಸಿಬ್ಬಂದಿ ಗೃಹರಕ್ಷದಳದವರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend