ಕೋವಿಡ್ 19 ರ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಸಭೆ…!!!

Listen to this article

ದಿನಾಂಕ 1.5.2021.ವಿಜನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ
ಕೋವಿಡ್ 19 ರ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಸಭೆ.
ತಾಳಿದವನು ಬಾಳಿಯಾನು:– ಡಾಕ್ಟರ ವಿಶ್ವನಾಥ್.:- ಕಾನಹೊಸಹಳ್ಳಿ ಎಸ್ ಕೆ ಡಿ ಡಿ ಪ್ರೌಢಶಾಲೆ ಸಭಾಂಗಣದಲ್ಲಿ. ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನೀಲಮ್ಮ ಬೊಮ್ಮಣ್ಣ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಕೋವಿಡ್ 19 ರ ಕಾರ್ಯಪಡೆ ಸಭೆಯಲ್ಲಿ ಡಾಕ್ಟರ್ ವಿಶ್ವನಾಥ್ ರವರು ಕರೋನವೈರಸ್ ಎರಡನೇ ಅಲೆ ವ್ಯಾಪಕವಾಗಿ ಹಾಡುವುದರ ಬಗ್ಗೆ ಮಾತನಾಡುತ್ತಾ ಕರೋನವೈರಸ್ ಯಾವ ಸಂದರ್ಭದಲ್ಲಿ ನಮ್ಮನ್ನು ಸೇರಿಕೊಳ್ಳುತ್ತದೆ ಯು ಗೊತ್ತಾಗುವುದಿಲ್ಲ ಪ್ರತಿಯೊಬ್ಬ ನಾಗರಿಕರು ಯಾವುದೇ ಒತ್ತಡಕ್ಕೆ ಮಣಿಯದೆ ಯಾವುದೇ ವಿಚಾರವಾಗಲಿ ಸಮಾದಾನದಿಂದ ತೆಗೆದುಕೊಳ್ಳಬೇಕು . ಯಾರೇ ಆಗಲಿ ಅನವಶ್ಯಕವಾಗಿ ಪೊಲೀಸ್ ಠಾಣೆ ಬಜಾರ ಜನಸಂದಣಿ ಸ್ಥಳಗಳಲ್ಲಿ ಹೋಗಬಾರದು ಅವಶ್ಯಕತೆ ಇದ್ದರೆ ಮಾತ್ರ ಹೋಗಬೇಕು ಏಕೆಂದರೆ ಈ ಸ್ಥಳಗಳಲ್ಲಿ ಬೇರೆ ಕಡೆಯಿಂದ ಬೇರೆಬೇರೆ ಹಳ್ಳಿಗಳಿಂದ ಜನರು ಬರುವ ಸಾಧ್ಯತೆ ಹೆಚ್ಚು ಆದ್ದರಿಂದ ಪ್ರತಿಯೊಬ್ಬರೂ ಮನೆಯಲ್ಲಿಯೇ ಸುರಕ್ಷಿತವಾಗಿ ವಾಸಮಾಡುವ ಮನೆಗಳಲ್ಲಿ ಕೂಡ ಮಾಸ್ಕನ್ನು ಧರಿಸದೆ ಇರಬೇಡಿ. ಪ್ರತಿಯೊಬ್ಬರು ಕೊರೋನಾ ಲಸಿಕೆಯನ್ನು ಹಾಕಿಸಿಕೊಳ್ಳಿ ಯಾರು ಮಾತನ್ನು ಕೇಳದೆ ಸರ್ಕಾರದ ಆದೇಶದಂತೆ 45 ವರ್ಷ ಮೇಲ್ಪಟ್ಟ ವರೆಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ನಂತರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಗಿಂದಾಗೆ ಕೈಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಕಂದಾಯ ಇಲಾಖೆಯವರು ಗ್ರಾಮ ಪಂಚಾಯಿತಿ ಸಿಬ್ಬಂದಿ ಅಧಿಕಾರಿಗಳು ಪ್ರತಿಯೊಬ್ಬ ನಾಗರಿಕರು ಕರೋನಾ ಹೋರಾಟ ಗಾರ ರಾಗಬೇಕು. ನಾಗರಿಕರು ಜಾಗೃತಿ ಮತ್ತು ಸಮಾಧಾನದಿಂದ ಇದ್ದರೆ ಯಾವುದೇ ಕಾಯಿಲೆ ಬರುವುದಿಲ್ಲ ಹಾಗಿದ್ದರೆ ಮಾತ್ರ ಈ ವೈರಸ್ಸನ್ನು ತಡೆಗಟ್ಟಲು ಸಾಧ್ಯ ಎಂದು ಮಾತನಾಡಿದರು. ತಾಲೂಕು ಪಂಚಾಯಿತಿ ಅಧಿಕಾರಿ ಬಸವಣ್ಣನವರು ಮಾತನಾಡಿ ಬೇರೆ ಕಡೆಯಿಂದ ಬಂದವರನ್ನು ಕರೋನಾ ವಾರಿಯರ್ಸ್ ವಿಚಾರಿಸಬೇಕು ಅವರಿಗೆ ಕರೋನಾ ಪರೀಕ್ಷೆ ಮಾಡಿಸಬೇಕು. ಕರುನಾಡ ಪಟ್ಟಲ್ಲಿ ಅಂತವರನ್ನು 10 ದಿನದವರೆಗೆ ಹೊರಗಡೆ ಬಾರದಂತೆ ಅಂಗನವಾಡಿ ಆಶಾ ಕಾರ್ಯಕರ್ತರು ನೋಡಿಕೊಳ್ಳಬೇಕು. ಇನ್ನೂ ಅನೇಕ ವಿಚಾರವಾಗಿ ಮಾತನಾಡಿದರು. ಇನ್ನು ಮಾನ್ಯ ತಹಸೀಲ್ದಾರರಾದ ಮಹಾಬಲೇಶ್ವರ್ ರ ವರು ಮಾತನಾಡಿ ಕರೋನವೈರಸ್ ಬಗ್ಗೆ ತಾತ್ಸಾರ ಮನೋಭಾವನೆ ಬೇಡ ಪ್ರತಿಯೊಬ್ಬ ನಾಗರಿಕರು ಕರೋನ ವಾರಿಯರ್ಸ್ ಆದಾಗ ಮಾತ್ರ ಈ ವೈರಸ್ಸನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು. ಇನ್ನೂ ಹೆಚ್ಚಿನ ವಿಷಯವಾಗಿ ಬೆಂಗಳೂರಿನಿಂದ ಬಂದವರನ್ನು ಆರೋಗ್ಯ ತಪಾಸಣೆ ಮಾಡಿಸಿ ಅಕಸ್ಮಾತ್ ಕೊರೋನ ದೃಢ ಪಟ್ಟಲ್ಲಿ 10 ದಿನಗಳ ಕಾಲ ಮನೆಯಲ್ಲೇ ಇರಲು ಹೇಳಿ. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೊಲೀಸ್ ಇಲಾಖೆಯ ಯಾರಾದರೂ ಒಬ್ಬ ಸಿಬ್ಬಂದಿಯನ್ನು ಕರೆದುಕೊಂಡು ಮನೆಮನೆಗೂ ಹೋಗಿ ಕರೋನ ವಿಚಾರವಾಗಿ ಜಾಗೃತಿ ಮೂಡಿಸಿ ಕರೋನವೈರಸ್ ಲಸಿಕೆಆಹಾಕಿಸಿಕೊಳ್ಳ ವಂತೆ ಮನವೊಲಿಸಿ ಹಾಗೂ ಅನವಶ್ಯಕವಾಗಿ ಯಾರು ಹೊರಗಡೆ ಬರದಂತೆ ನೋಡಿಕೊಳ್ಳಿ ಎಂದು ಈ ಸಂದರ್ಭದಲ್ಲಿ ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯ ಹೊನ್ನೂರು ಸ್ವಾಮಿ ಮಾತನಾಡಿ ಕರೋನ ವಾರಿಯರ್ಸ್ ಸಿಬ್ಬಂದಿಗಳಿಗೆ ಕೊರೋನಕ್ಕೆ ಸಂಬಂಧಿಸಿದಂತೆ ಕೆಲವು ಉಪಕರಣಗಳನ್ನು ನೀಡಿ ಈವರೆಗೂ ಯಾವುದೇ ತರದ ಉಪಕರಣಗಳನ್ನು ನೀಡಿಲ್ಲ ದಯವಿಟ್ಟು ಆಶಾ ಕಾರ್ಯಕರ್ತೆ ಯರಿಗೆ ಅಂಗನವಾಡಿ ಕಾರ್ಯಕರ್ತರಿಗೆ ಕೊರನ ವಾರಿಯರ್ಸ್ ಸಿಬ್ಬಂದಿಗಳಿಗೆ ಸಂಬಂಧಪಟ್ಟ ಸಾಮಾಗ್ರಿಗಳನ್ನು ನೀಡಿರಿ ಎಂದು ಈ ಸಂದರ್ಭದಲ್ಲಿ ಮಾನ್ಯ ತಹಸಿಲ್ದಾರ್ ರಲ್ಲಿ ಕೇಳಿಕೊಂಡರು. ಈ ಸಭೆಯಲ್ಲಿ ತಾಲೂಕ್ ಪಂಚಾಯಿತಿ ಸದಸ್ಯ ಗುರು ಸಿದ್ದನಗೌಡ. ಕರೋನಾ ಉಸ್ತವಾರಿ ನೋಡಲ್ ಅಧಿಕಾರಿ ರವಿಚಂದ್ರ .ASI.G.ಗೋವಿಂದಪ್ಪನವರು . ಪಿಡಿಒ ಬಸಮ್ಮ. ಪಿಡಿಒ ವಿನಯಪ್ರಸಾದ್ ಗೌಡ. ವೈದ್ಯಾಧಿಕಾರಿ ವಿಶ್ವನಾಥ್ ಶ್ರೀನಿವಾಸ್ ಕೊಂಡಿ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಸದಸ್ಯರು ಗ್ರಾಮ ಪಂಚಾಯಿತಿ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು . ಪತ್ರಿಕಾ ಮಾಧ್ಯಮದವರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend