ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಕಾರ್ಯಕರ್ತರು ಸದೃಢರಾಗಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯ ಪಾಪಣ್ಣ ಕರೆ ನೀಡಿದರು…!!!

Listen to this article

ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಕಾರ್ಯಕರ್ತರು ಸದೃಢರಾಗಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯ ಪಾಪಣ್ಣ ಕರೆ ನೀಡಿದರು.

 

ಭಾರತೀಯ ಜನತಾ ಪಾರ್ಟಿ ಕೂಡ್ಲಿಗಿ ಮಂಡಲದ ವತಿಯಿಂದ ಹಾಗೂ ಯುವ ಮೋರ್ಚಾ ವತಿಯಿಂದ ದಿನಾಂಕ 23/6/2021/ ರಂದು ಬುಧವಾರ ಡಾಕ್ಟರ್ ಶ್ಯಾಂ ಪ್ರಸಾದ್ ಮುಖರ್ಜಿಯವರ ಬಲಿದಾನ ದಿವಸದ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡಲಾಯಿತು,ಕೂಡ್ಲಿಗಿ ಮಂಡಲ ಹಾಗೂ ಕೂಡ್ಲಿಗಿ ಮಂಡಲ ಯುವಮೋರ್ಚಾ ಆಯೋಜಿಸಿದ್ದ ವೃಕ್ಷಾರೋಹಣ ಕಾರ್ಯಕ್ರಮದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ರವರ
ಭಾವ ಚಿತ್ರಕ್ಕೆ
ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ನಮನವನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಸಿಗಳನ್ನು ನೆಡಲಾಯಿತು ಮತ್ತು ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರಿಗೆ
ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಸಿ ನೆಡುವ ಮೂಲಕ ಚಾಲನೆ ಕೊಡಲಾಯಿತು, ಇಂದಿನಿಂದ ಜುಲೈ 6 ರವರೆಗೆ ( ಜುಲೈ 6 ಡಾಕ್ಟರ್ ಶ್ಯಾಂ ಪ್ರಸಾದ್ ಮುಖರ್ಜಿಯವರ ಜನ್ಮದಿನದ) ಪ್ರತಿ ಬೂತ್ ಮಟ್ಟದಲ್ಲಿ ಸಸಿ ನೆಡುವ ಮೂಲಕ ವಾತಾವರಣದಲ್ಲಿ ಆಮ್ಲಜನಕವನ್ನು ಹೆಚ್ಚಿಸುವ ಕಾರ್ಯವನ್ನು ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಾಡಬೇಕೆಂದು ಕರೆ ನೀಡಲಾಯಿತು, ವ್ಯಕ್ತಿ ಸ್ವಂತಕ್ಕೆ ಜೀವಿಸದೆ ಸಮಾಜಕ್ಕಾಗಿ ಏನಾದರೂ ಮಾಡಬೇಕು, ಶ್ಯಾಂ ಪ್ರಸಾದ್ ಮುಖರ್ಜಿಯವರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು, ಕಾಶ್ಮೀರದ ವಿಚಾರಕ್ಕೆ ಅಧಿಕಾರವನ್ನು ತ್ಯಜಿಸಿ ಹೋರಾಟವನ್ನು ಮಾಡಿದರು, ಒಂದು ದೇಶದಲ್ಲಿ ಎರಡು ಸಂವಿಧಾನ, ಇಬ್ಬರು ಪ್ರಧಾನಿಗಳು, ಎರಡು ಧ್ವಜ ನಡೆಯುವುದಿಲ್ಲ ಎಂದು ಘೋಷಿಸಿದರು ದೇಶದ ಅಖಂಡತೆ ಮತ್ತು ಸಾರ್ವಭೌಮತ್ವಕ್ಕೆ ತಮ್ಮ ಜೀವವನ್ನು ಬಲಿದಾನ ಮಾಡಿದ ಜನನಾಯಕ ಡಾಕ್ಟರ್ ಶ್ಯಾಂ ಪ್ರಸಾದ್ ಮುಖರ್ಜಿಯವರು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕು, ವ್ಯಕ್ತಿಗಾಗಿ ಕೆಲಸ ಮಾಡದೇ, ವಿಚಾರಕ್ಕಾಗಿ, ಸಿದ್ಧಾಂತಕ್ಕೆ ಬದುಕಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಕೂಡ್ಲಿಗಿ ಮಂಡಲದ ಅಧ್ಯಕ್ಷರಾದ ಕೆ ಚನ್ನಪ್ಪ ಮಾತನಾಡಿ ಕೋರೋಣ ಲಸಿಕೆ ಪ್ರತಿ ಹಳ್ಳಿಹಳ್ಳಿಗಳಲ್ಲಿ ಬೂತ್ ಮಟ್ಟದಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಮತ್ತು ಲಸಿಕೆಯ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ತಿಳಿಹೇಳಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹೋಡೇ ತಾಲೂಕು ಪಂಚಾಯಿತಿ ಸದಸ್ಯರಾದ ಪಾಪ ನಾಯಕ. ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ವೀರೇಶ್ ಕಿಟ್ಟಪ್ಪ ನವರ್. ಭಾರತೀಯ ಜನತಾ ಪಾರ್ಟಿ ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕುಲುಮೆ ಹಟ್ಟಿ ವೆಂಕಟೇಶ್. ಭಾರತೀಯ ಜನತಾ ಪಾರ್ಟಿ ಉಪಾಧ್ಯಕ್ಷರಾದ ವೀರಭದ್ರಪ್ಪ. ಗ್ರಾಮ ಪಂಚಾಯತಿ ಸದಸ್ಯರಾದ ಲೋಕೇಶ್. ಕೇಣೆರು ಮಂಜುನಾಥ. ನಡುಮನೆ ತಿಪ್ಪೇಸ್ವಾಮಿ. ಅಮಲಾಪುರದ ಅಂಜಿನಪ್ಪ. ಅರ್ಕಸಾಲಿ ನಿರಂಜನ್ ಆಚಾರ್. ಹೆಚ್ಚಿಗೆ ಮಂಜುನಾಥ. ವೀರಣ್ಣ. ಸುರೇಶ ಕೆಂಚಮಲ್ಲನಹಳ್ಳಿ. ಸೇರಿ ಕಾರ್ಯಕರ್ತರು ಉಪಸ್ಥಿತರಿದ್ದರು.


ವರದಿ ಕೆಎಸ್ ವೀರೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend