ಹೊಸಪೇಟೆ:ಉಪೇಂದ್ರ ಹೇಳಿಕೆ,CPIM & DHS ಖಂಡನೆ…!!!

Listen to this article

ಹೊಸಪೇಟೆ:ಉಪೇಂದ್ರ ಹೇಳಿಕೆ,CPIM & DHS ಖಂಡನೆ-ವಿಜಯನಗರ ಜಿಲ್ಲೆ ಹೊಸಪೇಟೆ: ನಗರದ ಶ್ರಮಿಕ ಭವನದ ಹತ್ತಿರ, ಹಿರಿಯ ನಟ ಉಪೇಂದ್ರರವರ ಅವಹಳನಕಾರಿ ಹೇಳಿಕೆ, ಮತ್ತು ಸಚಿವ ಮಲ್ಲಿಕಾರ್ಜುನರವರ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ. ಸಿಪಿಐಎಂ ಮತ್ತು ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ, ದಲಿತ ಮುಖಂಡರು ಪ್ರತಿಭಟನೆ ನಡೆಸಿ ಖಂಡಿಸಿದರು. ನಟ ಉಪೇಂದ್ರ ಮತ್ತು ರಾಜ್ಯ ಸರ್ಕಾರದ ಮಂತ್ರಿ ಮಲ್ಲಿಕಾರ್ಜುನ ಇವರ ಮೇಲೆ, ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಎಂ ತಾಲೂಕು ಕಾರ್ಯದರ್ಶಿಬಸ್ವಾಮಿ ವಡ್ರಳ್ಳಿ ಮಾತನಾಡಿ,
ದಲಿತ ಸಮುದಾಯವನ್ನು ಅಪ ಮಾನಿಸುವ, ಜಾತಿ ದೌರ್ಜನ್ಯದ ಗಾದೆಯನ್ನು ಸಾರ್ವಜನಿಕವಾಗಿ ಬಳಸಿ ನಿಂದಿಸಿದ ನಟ ಉಪೇಂದ್ರ ಹಾಗು ಮಂತ್ರಿ ಮಲ್ಲಿಕಾರ್ಜುನರವರ ತಪ್ಪು ನಡೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ. ಮೇಲ್ಜಾತಿ ಹಾಗೂ ಅದರ ಬಲಾಢ್ಯ ವರ್ಗಗಳು ಬಳಸುವ ಈ ದೌರ್ಜನ್ಯದ ಗಾದೆ ಕೇವಲ ಕೆಲ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ನಿಂದಿಸುತ್ತಿಲ್ಲ, ಬದಲಿಗೆ ಇಡೀ ಸಮುದಾಯವನ್ನೇ ನಿಂದಿಸುತ್ತದೆ‌ ಮತ್ತು ಅಪಮಾನಿಸುತ್ತದೆ.
ಘನ ನ್ಯಾಯಾಲಯವೂ ಕೂಡಾ,ಇಡೀ ದಲಿತ ಸಮುದಾಯವನ್ನೇ ಗುರಿಯಾಗಿಸಿ, ನಿಂದನೆಯನ್ನು, ಅಪಮಾನವನ್ನು ಮಾಡುವ ಈ ದೌರ್ಜನ್ಯದ ಗಾದೆಯ ಪ್ರಯೋಗವನ್ನು, ಕೇವಲ ಗಾದೆಯ ಬಳಕೆಯೆಂದು ಲಘುವಾಗಿ ಪರಿಗಣಿಸಿರುವುದು ಆಶ್ಚರ್ಯಕರ ಮತ್ತು ವಿಷಾಧನೀಯವಾಗಿದೆ ಎಂದು ಸಿಪಿಐಎಂ ಠೀಕಿಸಿದೆ.
ಈ ರೀತಿಯ ಗಾದೆಯನ್ನು ಸಾರ್ವಜನಿಕವಾಗಿ ಬಳಸುವ ಮೂಲಕ ಒಂದು ಸಮುದಾಯವನ್ನು ನಿಂದಿಸಬಹುದೇ ? ಅಪಮಾನಿಸ ಬಹುದೇ ? ನೋವುಂಟು ಮಾಡಬಹುದೇ ? ಎಂದು ಸಿಪಿಐಎಂ ಅವರು ಪ್ರೆಶ್ನಿಸಿದರು. ದಲಿತ ಹಕ್ಕುಗಳ ಸಮಿತಿ ರಾಜ್ಯ ಮುಖಂಡ ಮರಡಿ ಜಂಬಯ್ಯ ನಾಯಕ ಮಾತನಾಡಿ,
ನ್ಯಾಯಾಲಯದ ಅಭಿಪ್ರಾಯ ಪ್ರಕಟಣೆಯ ನಂತರ, ನಾಯಕ ನಟ ಉಪೇಂದ್ರರು ಹಾಗೂ ಮಂತ್ರಿಗಳು ಬಳಸಿದ ಗಾದೆಯನ್ನು ಎತ್ತಿ ಹಿಡಿದು ಜಾತಿ ತಾರತಮ್ಯ ಹಾಗೂ ದೌರ್ಜನ್ಯ ಮೆರೆವ ಖಂಡನೀಯ ಬೆಂಬಲಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿವೆ. ಅವುಗಳನ್ನು ತಡೆಯಲು ಅಗತ್ಯ ಕ್ರಮವಹಿಸುವಂತೆ ರಾಜ್ಯ ಸರಕಾರವನ್ನು ಸಿಪಿಐಎಂ ಒತ್ತಾಯಿಸುತ್ತದೆ‌.
ಅದೇ ರೀತಿ, ಘನ ನ್ಯಾಯಾಲಯವು ಹೇಳಿಕೆಯನ್ನು ಪುನರ್ ಪರಿಶೀಲಿಸುವಂತೆ ಈ ಮೂಲಕ ಒತ್ತಾಯಸುತ್ತದೆ ಎಂದರು. ಬಿ.ತಾಯಪ್ಪನಾಯಕ ಮಾತನಾಡಿ,
ಚಲನ ಚಿತ್ರ ರಂಗದ ಜನಪ್ರಿಯ ನಾಯಕ ನಟನ ಹಾಗೂ ಮಂತ್ರಿ ಮಲ್ಲಿಕಾರ್ಜುನರವರ ಹೇಳಿಕೆ ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ರಾಜ್ಯದ ಜನತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆಂಬುದನ್ನು ಗಮನಿಸಬೇಕಾಗಿದೆ‌.
ನಟ ಉಪೇಂದ್ರರವರು ಹಾಗೂ ಮಂತ್ರಿಗಳು ಅವರಿಗೆ ಅರಿವಿಲ್ಲದೇ ಅಥವಾ ಯಾರನ್ನು ನಿಂದಿಸುವ ದುರುದ್ದೇಶವಿಲ್ಲದೇ ವಾಡಿಕೆಯಂತೆ ಬಳಸಿದ್ದು ನಿಜವಾದಲ್ಲಿ, ಅವರು ಸಾರ್ವಜನಿಕವಾಗಿ ದಮನಿತ ಸಮುದಾಯ ಹಾಗೂ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು. ಬಿ.ರಮೇಶಕುಮಾರ ಮಾತನಾಡಿ,
ಸಮಾಜದಲ್ಲಿನ ಮೇಲ್ಜಾತಿ ಹಾಗೂ ಮೇಲ್ವರ್ಗಗಳು, ಸಾವಿರಾರು ವರ್ಷಗಳಿಂದ, ಮಹಿಳೆಯರನ್ನು ಹಾಗು ದಲಿತ ಮತ್ತು ಹಿಂದುಳಿದ ಜಾತಿ ಸಮುದಾಯಗಳನ್ನು ಗುರಿಯಾಗಿಸಿ, ನಿಂದಿಸುವ ಹಾಗೂ ಅಪಮಾನಿಸಿ ದೌರ್ಜನ್ಯ ಎಸಗುವ ಬೈಗಳು ಮತ್ತು ಹಲವು ಗಾದೆಗಳನ್ನು ಜಾತಿ ಹಾಗು ಲಿಂಗ ತಾರತಮ್ಯ ಹಾಗೂ ದೌರ್ಜನ್ಯ ಮೆರೆಯುವ ಭಾಗವಾಗಿ ಚಾಲ್ತಿಯಲ್ಲಿಟ್ಟು ಮುಂದುವರೆಸುತ್ತಿರುವುದು ಮತ್ತು ವಾಡಿಕೆಯಾಗಿಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು. ನಿವೃತ್ತ ಮುಖ್ಯ ಶಿಕ್ಷಕರಾದ ಎಂ.ಧನರಾಜ್ ಮಾತನಾಡಿ, ದಲಿತ ಹಿರೋಧಿ ಖಂಡನೀಯ ದೌರ್ಜನ್ಯದ ಅಪಮಾನಗಳನ್ನು, ದಿನ ನಿತ್ಯ, ಪ್ರತಿ ಕ್ಷಣ, ರಾಜ್ಯದ, ದೇಶದ ಎಲ್ಲ ಮಹಿಳಾ ಮತ್ತು ಶೂದ್ರ ಹಾಗೂ ದಲಿತ ಸಮುದಾಯಗಳು, ಮೇಲ್ಜಾತಿ ಹಾಗೂ ಮೇಲ್ಬರ್ಗಗಳಿಂದ ಅನುಭವಿಸುತ್ತಲೆ ಇವೆ.
ಈ ದೌರ್ಜನ್ಯದ ಕುರಿತಂತೆ ರಾಜ್ಯದ ಜನತೆ ಪ್ರತಿರೋಧಿಸುವುದು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ. ಎಂದು ವಿವರಿಸಿದ ಸಿಪಿಐಎಂ, ರಾಜ್ಯದಾದ್ಯಂತ 19 ರಂದು ಪ್ರತಿಭಟನೆ ನಡೆಸಲು ಜನತೆ ಹಾಗೂ ಘಟಕಗಳಿಗೆ ಕರೆ ನೀಡಿದೆ.
ಮಹಿಳೆಯರು ಹಾಗೂ ಶೂದ್ರ ಹಾಗೂ ದಲಿತ ಸಮುದಾಯಗಳನ್ನು ನಿಂದಿಸಿ ಅಪ‌ಮಾನಿಸುವ ಪದಗಳನ್ನ, ಗಾದೆಗಳನ್ನು, ಬೈಗಳನ್ನು ಬಳಸದಂತೆ ನಾಗರೀಕ ಸಮಾಜ ಜಾಗೃತಿ ಮತ್ತು ಎಚ್ಚರವನ್ನು ವಹಿಸಬೇಕು ಮತ್ತು ಆ ಮೂಲಕ ಜಾತಿ ಹಾಗೂ ಲಿಂಗ ತಾರತಮ್ಯ ನಿವಾರಣೆಯ ಹೋರಾಟಕ್ಕೆ ನಾಂದಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಹೋರಾಟಗಾರರ‍ದ ಕೆ.ಹನುಮಂತ, ತಿರುಪತಿ, ಪ್ರಕಾಶ್, ಚಂದ್ರಪ್ಪ, ಮಂಜುನಾಥ, ಸೂರ್ಯ ಕಿರಣ್ ಸೇರಿದಂತೆ ಅನೇಕ ದಲಿತ ಪರ ಹೋರಾಟಗಾರರು ಇದ್ದರು……

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend