ಪರೀಕ್ಷೆ ಮುಗಿಯುವವರೆಗೂ ಮೊಬೈಲ್ ಗೆ ಗುಡ್ ಬಾಯ್ ಹೇಳಿ…!!!

Listen to this article

ಪರೀಕ್ಷೆ ಮುಗಿಯುವವರೆಗೂ ಮೊಬೈಲ್ ಗೆ ಗುಡ್ ಬಾಯ್ ಹೇಳಿ.

ಮಕ್ಕಳಿಗೆ ಎಸ್ ಎಸ್ ಎಲ್ ಸಿ ಜೀವನ ರೂಪಿಸುವ ಹಂತ

ಯಾವ ಮಕ್ಕಳು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಹಂತಗಳಲ್ಲಿ ಜವಾಬ್ದಾರಿಯಿಂದ ವಿದ್ಯಾಬ್ಯಾಸದ ಕಡೆ ಹೆಚ್ಚು ಗಮನ ನೀಡಿವರೋ ಅಂತಹ ಮಕ್ಕಳು ತಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂದು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ತಿಳಿಸಿದರು.

ತಾಲೂಕಿನ ಎನ್ ಜಿ ಹಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜು ( ಪ್ರೌಢಶಾಲಾ ) ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ತಮ್ಮ ವಿದ್ಯಾಭ್ಯಾಸ ಈ ಎರಡು ಹಂತಗಳನ್ನು ಸ್ಪರ್ಧಾತ್ಮಕ ರೀತಿಯಲ್ಲಿ ಕೊಂಡೊಯ್ಯಬೇಕು. ಆಗ ಯಶಸ್ಸು ಕೂಡ ಅಂತಹ ಮಕ್ಕಳನ್ನು ಹುಡುಕಿಕೊಂಡು ಬರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಪ್ರೌಢಶಾಲಾ ಹಂತಕ್ಕೆ ಆಗಮಿಸುತಿದ್ದಂತೆಯೇ ಓದಿನ ಬಗ್ಗೆ ಪೈಪೋಟಿಗೆ ನಿಲ್ಲಬೇಕು ಎಂದರು.
ಸಿ ಆರ್ ಪಿ ವಿಠಲ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಶಾಲೆಯು ಶೇ.100 ರಷ್ಟು ಫಲಿತಾಂಶ ಗಳಿಸುವ ಜೊತೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವ ಪ್ರಯತ್ನಕ್ಕೆ ಕೈ ಹಾಕಬೇಕು. ಈ ನಿಟ್ಟಿನಲ್ಲಿ ಮಕ್ಕಳು ಕೂಡ ಸಮಯ ವ್ಯರ್ಥ ಮಾಡದೆ ಮೊಬೈಲ್ ಗೀಳಿನಿಂದ ಹೊರಬಂದು, ಭಯ ಬಿಟ್ಟು ಪರೀಕ್ಷೆ ಗೆ ಸಿದ್ದತೆ ಕೈಗೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದ ಈ ಶಾಲೆಯ ವಿದ್ಯಾರ್ಥಿನಿ ಸ್ಪಂದನಾ ಳನ್ನು ಸನ್ಮಾನಿಸಲಾಯಿತು. ಹಾಯ ಮಕ್ಕಳು ವಿವಿಧ ನೃತ್ಯ ರೂಪಕಗಳನ್ನು ನಡೆಸಿಕೊಟ್ಟರು.

ಎನ್ ಜಿ ಹಳ್ಳಿ ಪಶು ವೈದ್ಯಾಧಿಕಾರಿ ಡಾ. ವಿದ್ಯಾ, ಹಿರಿಯ ಶಿಕ್ಷಕ ಗುರುಮೂರ್ತಿ, ಶಿಕ್ಷಕರಾದ ಪ್ರಕಾಶ್, ಸಿದ್ದಪ್ಪ, ಕುಮಾರ ಸ್ವಾಮಿ, ಪ್ರತಿಭಾ , ಶಾಲೆಯ ಬೋಧಕರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಇದ್ದರು.

ಸರಕಾರಿ ಪದವಿ ಇದೇ ವೇಳೆ ( ಪ್ರೌಢಶಾಲಾ ವಿಭಾಗ ) ಕಾಲೇಜಿನಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಸ್ಪಂದನಾ ಳನ್ನು ಸನ್ಮಾನಿಸಲಾಯಿತು…

ವರದಿ. ಸುರೇಶ್ ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend