ಎಚ್ಚರಿಕೆ, ಗ್ರಾಹಕ ಎಚ್ಚರಿಕೆ ಕಾದಿದೆ  ಮೂರನೇ ಅಲೆ…!!!

Listen to this article
ಎಚ್ಚರಿಕೆ, ಗ್ರಾಹಕ ಎಚ್ಚರಿಕೆ ಕಾದಿದೆ  ಮೂರನೇ ಅಲೆ
ಕರೋನ ಎರಡು ಮಹಾ ಅಲೆಗಳು ಅವಾಂತರ ಸೃಷ್ಟಿ ಮಾಡಿ ಅನೇಕರ ಬದುಕನ್ನ‌ ಬರಡಾಗಿಸಿದೆ. ಕರೋನ ತಡೆಗಟ್ಟಲು ಲಾಕ್ ಡೌನ್ ನಿಂದಾನಿ ಜನ ಸಮಾನ್ಯರ ಪಾಡು ಹೇಳತೀರದ ದುಃಖದಲ್ಲಿ ಮುಳುಗಿದೆ. ಆ ನೋವುಗಳು ಒಬಿಬ್ಬರಿಗೆ ಅಲ್ಲ.ಇಡೀ ಜನ ಸಮೂದಾಯಕ್ಕೆ ಆಗಿದೆ.
ಈಗ ಸರ್ಕಾರ ಲಾಕ್ ಡೌನ್ ಎಲ್ಲಾ ನಿಯಮಗಳನ್ನು ತೆಗೆದು ಹಾಕಿದೆ. ಇದರ ನಡುವೆ ಕೋವಿಡ್ ಕುರಿತಾಗಿ ಜನರಲ್ಲಿ ಜಾಗೃತಿ ಅಗತ್ಯ ಇದೆ.
ಎಲ್ಲೆಂದರಲ್ಲಿ ಅತೀ ಹೆಚ್ಚು ಜನರು ಸೇರುವುದು, ಮಾರುಕಟ್ಟೆಗೆ ಮುಗಿಬಿಳುವುದು ಗ್ರಾಮೀಣ ಭಾಗದಲ್ಲಿ  ಮಾಸ್ಕ್ ಬಗೆಗಿನ ನಿರ್ಲಕ್ಷ್ಯ  ನೋಡಿದರೆ ಮೂರನೇ ಅಲೆಗೆ ಆಹ್ವಾನ ನೀಡಿದಂತಾಗುತ್ತದೆ. ಅರೋಗ್ಯವೇ ಮಹಾ ಭಾಗ್ಯ ಎಂಬ ಮಾತನ್ನು ಒಪ್ಪುವ ನಾವು ಅರೋಗ್ಯ ರಕ್ಷಣೆಗೆ ಬೇಕಾದ ಕ್ರಮಗಳಲ್ಲಿನ ನಿರ್ಲಕ್ಷ್ಯ ದೋರಣೆ ಯಾಕೆ ?
ಇನ್ನೂ ವೈದ್ಯಕೀಯವಾಗಿ ಹಲಾವಾರು ಕ್ರಮಗಳು ,ಮುಂಜಾಗ್ರತೆ ವಹಿಸಿದ್ದರೂ ಕೋವಿಡ್ ಲಸಿಕೆ ಹಾಕಿಸುವಲ್ಲಿ ಅಷ್ಟೇನು ಯಶ ಕಂಡಂತಿಲ್ಲ. ಗ್ರಾಮೀಣ ಭಾಗದ ಜನರಲ್ಲಿ ಮೊದಲ ಡೋಜ್  ಲಸಿಕೆ 18 ರಿಂದ 45 ವರ್ಷದ ಒಳಗಿನವರು ಇನ್ನೂ ಹಾಕಿಸಿಲ್ಲ ಈ ಬಗ್ಗೆ ಜನರು ಎಚ್ಚರಾಗಬೇಕಿದೆ. 45 ವರ್ಷ ಮೇಲುಪಟ್ಟವರಿಗೆ ಮಾಹಿತಿ ಕೊಟ್ಟು ಸ್ವತಃ ಕರೆದುಕೊಂಡು ಹೋಗಿ ಲಸಿಕೆ ಹಾಕಿಸುವಲ್ಲಿ ಆಶಾ ಕಾರ್ಯಕರ್ತೆಯರ ಶ್ರಮವಿದೆ. ಅದಷ್ಟು ಬೇಗ ಎಲ್ಲರಿಗೂ ಲಸಿಕೆ ಪಡೆಯಬೇಕಾದದ್ದು ಎಲ್ಲರ ಆಧ್ಯತೆ ಆಗಬೇಕು.ಲಸಿಕೆ ಹಾಕಿಸಿಕೊಂಡರೆ ಕರೋನ ಬರಲ್ಲ ಅಂತ ಏನಿಲ್ಲ ಬಂದರೂ ಸಾವು,ನೋವಿನ ಪ್ರಮಾಣ ಕಮ್ಮಿ ಮಾಡಬಹುದು ಹಾಗಾಗಿ ಲಸಿಕೆ ಹಾಕಿಸಿಕೊಳ್ಳಿ.
ಇನ್ನೂ  ರಾಜ್ಯ ಪೂರ್ತಿ ಅನ್ ಲಾಕ್ ಆಗಿದೆ ಎಲ್ಲದ್ದಕೂ ಮುಗಿಬೀಳೊದು ಬೇಡ , ಹೆಚ್ಚು ಜನ ದಟ್ಟನೆ ಇರುವ ಕಡೆ ಹೋಗುವ ಅನಿವಾರ್ಯ ಇದ್ದರೆ ಮಾತ್ರ ಹೋಗಿ ಅಲ್ಲಿ ಎರೆಡೆರೆ ಮಾಸ್ಕ್ ಬಳಸಿ, ಅನಾವಶ್ಯಕ ವಾಗಿ ಏನನ್ನೂ ಮುಟ್ಟಬೇಡಿ, ಮನೆ ಒಳಗೆ ಬರುವ ಮೊದಲು ಬಟ್ಟೆ ನ  ಸೋಪಿನ ನೀರಿನಲ್ಲಿ ಹಾಕಿ ಸ್ನಾನ ಮಾಡಿ.
ಎಲ್ಲಕ್ಕಿಂತ ಹೆಚ್ಚಾಗಿ ಅತ್ಮದ ಶಕ್ತಿ ವೃದ್ದಿಸಿಕೊಳ್ಳಿ.. ರೋಗ ನಿರೋಧಕ ಶಕ್ತಿಯನ್ನ ಕುಗ್ಗಿಸಬೇಡಿ.. ಇರೊದು ಒಂದು ಜೀವ,ಜೀವನ ಕಾಪಾಡಿಕೊಳ್ಳಿ.
ಇತ್ತೀಚಿನಗೆ ಕರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಜೊತೆಗೆ ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವುದು ಸಮಾಧದ ಸಂಗತಿ. ಅದಷ್ಟು ಅರೋಗ್ಯದ ಕಡೆ ಗಮನವಿರಲಿ.
  ವರದಿ  -ಅಜಯ.ಚ ಹೂವಿನ ಹಡಗಲಿ
Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend