ಸುಳ್ಳದ ರೋಡ್ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ ನಗದು ವಶ…!!!

Listen to this article

ಸುಳ್ಳದ ರೋಡ್ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ ನಗದು ವಶಕ್ಕೆ:.
ಎಆರ್.ಓ. ಡಾ. ಈಶ್ವರ ಉಳ್ಳಾಗಡ್ಡಿ

ಹುಬ್ಬಳ್ಳಿ  (ಮಾ.18) ಸಂಜೆ 6.05ರ ಸುಮಾರಿಗೆ ಕಿರೆಸೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ GJ 05 JB7162 ಕಾರನ್ನು ಕರ್ತವ್ಯದಲ್ಲಿ ಹಾಜರಿದ್ದ ಮ್ಯಾಜಿಸ್ಟ್ರೇಟ್ ರಮಜಾನಸಾಬ ಕಿಲ್ಲೇದಾರ , ಎಸ್ ಎಸ್ ಟಿ ಹಾಗೂ ಎಫ್ ಎಸ್ ಟಿ 3 ರ, ನಾಗಾ ನಾಯ್ಕ ,ಪೋಲೀಸ್ ಸಿಬ್ಬಂದಿಗಳು ತಡೆದು ತಪಾಸಣೆ ಮಾಡಿದಾಗ ಕಾರಿನಲ್ಲಿ ಓಂಪ್ರಕಾಶ್ ಎನ್ನುವವರಿಗೆ ಸೇರಿದ್ದ ದಾಖಲೆ ಇರದ 3,82,000/-ರೂಪಾಯಿ ನಗದು ಇರುವುದು ಕಂಡುಬಂದಿದ್ದು, ನಿಯಮಾನುಸಾರ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆಗಿರುವ ಹು-ಧಾ ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಂಸಿಸಿ ನೋಡೆಲ್ ಅಧಿಕಾರಿ ರವೀಂದ್ರ ಕುಮಾರ್, ಪೋಲೀಸ್ ಇನ್ಸ್ಪೆಕ್ಟರ್ ಕಿರಣ್ ಕುಮಾರ,ಎ.ಎಸ್.ಐ ಆರ್ ಜಿ ನಾಯ್ಕ, ಎಎಸ್ ಐ ಜಿ.ಸಿ.ಕಡೇಮನಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಶಪಡಿಸಿಕೊಂಡಿರುವ ದಾಖಲೆ ಇಲ್ಲದ ಹಣವನ್ನು ತಕ್ಷಣೆ ಖಜಾನೆಯಲ್ಲಿ ಡಿಪಾಜಿಟ್ ಮಾಡಲಾಗಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾ ಸೀಜರ್ ಕಮಿಟಿಗೆ ವರದಿ ಸಲ್ಲಿಸಲಾಗಿದೆ ಎಂದು ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ…

ವರದಿ. ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend