ಸಾರಿಗೆ ಸೌಲಭ್ಯವಿಲ್ಲದೇ ಕಂಗಾಲಾದ ಜನತೆಗೆ ಸಾರಥಿ ಯಾದ ಎಂ.ಪಿ.ವೀಣಾ ಮಹಾಂತೇಶ್…!!!

Listen to this article

ಸಾರಿಗೆ ಸೌಲಭ್ಯವಿಲ್ಲದೇ ಕಂಗಾಲಾದ ಜನತೆಗೆ ಸಾರಥಿ ಯಾದ ಎಂ.ಪಿ.ವೀಣಾ ಮಹಾಂತೇಶ್*

ಕೊರೋನಾ ಸೋಂಕು ದಿನೇದಿನೇ ಉಲ್ಬಣಿಸಿ, ಲಾಕ್ಡೌನ್ ನಂತಹ ಕ್ಲಿಷ್ಟಕರ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾದ ಜನತೆ ಆಸ್ಪತ್ರೆಗೆ ಹೋಗಲು‌ ಸಾರಿಗೆಗಾಗಿ ಪಡುತ್ತಿರುವ ಕಷ್ಟ ನೋಡಿ ಹರಪನಹಳ್ಳಿಯ ಹೆಮ್ಮೆಯ ನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ *ಶ್ರೀಮತಿ.ಎಂ.ಪಿ ವೀಣಾ ಮಹಾಂತೇಶ್* ಹಾಗೂ ಕೆಪಿಸಿಸಿ ವೈದ್ಯ ಘಟಕದ ರಾಜ್ಯ ಉಪಾಧ್ಯಕ್ಷರಾದ *ಡಾ.ಮಹಾಂತೇಶ್ ಚರಂತಿಮಠ* ರವರು ಕ್ಷೇತ್ರ, ರಾಜ್ಯದ ಜನರ ಒಳಿತಿಗಾಗಿ *ಉಚಿತ ಅ್ಯಂಬುಲೆನ್ಸ್* ಸೇವೆಯನ್ನು ಒದಗಿಸಿ ಜನರ ಪ್ರಾಣ ಕಾಪಾಡುವತ್ತ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಲಾಕ್ಡೌನ್ ನಂತಹ ಕಠಿಣ ನಿಯಮದಡಿ ಜನ ತಮ್ಮ ಸ್ವಂತ ವಾಹನ ಬಳಸದೇ, ಸರ್ಕಾರಿ ಹಾಗೂ ಖಾಸಗಿ ವಾಹನ ಕೂಡ ಇಲ್ಲದ್ದರಿಂದ ಹೈರಾಣಾಗಿ ಹೋಗಿದ್ದರು. ಇಂತಹ ಮನಕಲಕುವ ಸನ್ನಿವೇಶಗಳನ್ನು ಕಣ್ಣಾರೆ ಕಂಡ *ಎಂ.ಪಿ ವೀಣಾ ಮಹಾಂತೇಶ್ ಹಾಗೂ ಡಾ.ಮಹಾಂತೇಶ್ ಚರಂತಿಮಠ* ಅವರು ತಮ್ಮ ಸ್ವಂತ ವೆಚ್ಚದಲ್ಲಿ ಸಮಯಕ್ಕೆ ಸರಿಯಾಗಿ ಜನರನ್ನು ಕಾಪಾಡುವತ್ತ *ಉಚಿತ ಅ್ಯಂಬುಲೆನ್ಸ್* ಸೇವೆ ಒದಗಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಇವರ ಸೇವಾ ಕಾರ್ಯವನ್ನು ಮೆಚ್ಚಿದ ಜನತೆ ಅಭಿನಂದನೆಗಳ ಸುರಿಮಳೆಗೈದು,
*ಇದ್ದರೆ ಕ್ಷೇತ್ರಕ್ಕೆ ಇಂತಹ ಜನಸೇವಕರಿರಬೇಕು*

*ನಿಮ್ಮನ್ನು ಪಡೆದ ಹರಪನಹಳ್ಳಿ ಹಾಗೂ ಬಳ್ಳಾರಿ ಜಿಲ್ಲೆಯ ಜನರೇ ಧನ್ಯ*

*ನೀವೂ ಇನ್ನು ಹೆಚ್ಚೆಚ್ಚು ಜನಸೇವೆ ಮಾಡಿರೆಂದು ಆಶಿಸುತ್ತೇವೆ*

*ನಿಮ್ಮ ಇಂತಹ ದೈವದತ್ತ ಸತ್ಕಾರ್ಯ ಪರರಿಗೂ ಮಾದರಿಯಾಗಬೇಕು*
ಎನ್ನುವ ಅಭಿನಂದನಾರ್ಹ ಮಾತುಗಳು ಕೇಳಿಬರುತ್ತಿವೆ.
ಹರಪನಹಳ್ಳಿ ಪಟ್ಟಣದ ಶ್ರೀ ಚೇತನ ಅವರು ತಮ್ಮ ತಾಯಿಗೆ ತೊಂದರೆ ಆದಾಗ ತುರ್ತು ಆಂಬುಲೆನ್ಸ್ ಸೌಲಭ್ಯವನ್ನು ಸದುಪಯೋಗಪಡಿಸಿ ಕೊಂಡು ಧನ್ಯವಾದ ತಿಳಿಸಿದರು.

ವರದಿ. ಬಸವರಾಜ್, ಬಿ. ಎಂ. (ಬಸಣ್ಣಿ )

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend